ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಮಂಚಿ ಕೊಳ್ನಾಡು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರೆ ಮಂಚಿ ಜಾತ್ರೆ ಮುಂದಿನ ಏಪ್ರಿಲ್ 28 ಮತ್ತು 29ರಂದು ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ವ್ಯವಸ್ಥಾಪನಾಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್, ಸದಸ್ಯರಾದ ವಿಠಲ ಪ್ರಭು, ಸೀತಾರಾಮ ಶೆಟ್ಟಿ, ನ್ಯಾಯವಾದಿ ರವೀಂದ್ರ ಕುಕ್ಕಾಜೆ ಈ ಸಂದರ್ಭ ಉಪಸ್ಥಿತರಿದ್ದರು.
28ರಂದು ಭಾನುವಾರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅರ್ಧ ಏಕಾಹ ಭಜನೆ ನಡೆಯಲಿದ್ದು, ಬಂಟರ ಸಂಘ ಸಾಲೆತ್ತೂರು ವಲಯ ಅಧ್ಯಕ್ಷ ದೇವಪ್ಪ ಶೇಖ ಪಿ. ದೀಪೋಜ್ವಲನೆ ನಡೆಸುವರು. ಈ ಸಂದರ್ಭ ಕುಕ್ಕಾಜೆ , ನಂದಾವರ, ಕನಕಗಿರಿ ಮಂಚಿ, ಪಟ್ಟೋರಿ ಕೊಣಾಜೆ, ಕುಂಬಕೋಡು ಸುಳ್ಯ ಮತ್ತು ಬೋಳಂತೂರುಗಳ ಭಜನಾ ಮಂಡಳಿಗಳು ಸೇವೆ ನೀಡಲಿರುವರು.
ಬೆಳಗ್ಗೆ 8ಕ್ಕೆ ಸಾಮೂಹಿಕ ಪ್ರಾರ್ಥನೆ, 10ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6.30ಕ್ಕೆ ಭಜನಾ ಮಂಗಲೋತ್ಸವ, 7ಕ್ಕೆ ದುರ್ಗಾನಮಸ್ಕಾರ ಪೂಜೆ ನಡೆಯಲಿದೆ. 7.30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಕಸಾಪ ಅಧ್ಯಕ್ಷ ಕೆ.ಮೋಹನ ರಾವ್, ಉದ್ಯಮಿ ಸಂತೋಷ್ ಶೆಟ್ಟಿ ಅರೆಬೆಟ್ಟು, ಎಸ್.ಕೆ.ಆರ್.ಡಿ.ಪಿ. ಯೋಜನಾಧಿಕಾರಿ ಜಯಾನಂದ, ಧೂಮಾವತಿ ಬಂಟ ದೈವಗಳ ಸೇವಾ ಟ್ರಸ್ಟ್ ಅಧ್ಯಕ್ಷ ಅಗರಿ ಪಡೆಕುಂಜ ಜಗನ್ನಾಥ ನಾಯ್ಕ್, ಉದ್ಯಮಿ ಶಂಕರ ಭಟ್ ಹಾಲ್ತೋಟ, ಲಯನ್ಸ್ ಕ್ಲಬ್ ಕೊಳ್ನಾಡು – ಸಾಲೆತ್ತೂರು ಅಧ್ಯಕ್ಷ ಮನೋರಂಜನ್ ಕರೈ, ಉದ್ಯಮಿ ಚಂದ್ರಹಾಸ ರೈ ಬಾಲಾಜಿಬೈಲು ಅತಿಥಿಗಳಾಗಿರುವರು. ರಾತ್ರಿ ಕಾಲಮಿತಿ ಯಕ್ಷಗಾನ ಕದಂಬ ಕೌಶಿಕೆ ನಡೆಯಲಿದೆ. 29ರಂದು ವಿವಿಧ ಧಾರ್ಮಿ ಕ ಕಾರ್ಯಕ್ರಮಗಳು ಮಧ್ಯಾಹ್ನ ಅನ್ನಸಂತರ್ಪಣೆಯೊಂದಿಗೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಈ ಸಂದರ್ಭ ತಿಳಿಸಿದರು.
Be the first to comment on "ಮಂಚಿ ಜಾತ್ರೆ, ಆಮಂತ್ರಣ ಬಿಡುಗಡೆ"