ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಸರ್ಕಾರಿ ಪದವಿ ಕಾಲೇಜು ಹಾಗೂ ರೋಟರಿ ಕ್ಲಬ್ ಬಂಟ್ವಾಳ ಸಹ ಆಶ್ರಯದಲ್ಲಿ ಕೆವಿಸಿ ಅಕಾಡಮಿ ಮಂಗಳೂರು ಸಹಯೋಗದಲ್ಲಿ ಆವಿಷ್ಕಾರ ಎಂಬ ಉಚಿತ ತರಬೇತಿ ಕಾರ್ಯಕ್ರಮ ಬಂಟ್ವಾಳ ರೋಟರಿ ಕ್ಲಬ್ ನಲ್ಲಿ ಶನಿವಾರ ನಡೆಯಿತು.
ವೃತ್ತಿಪರ ಕೋರ್ಸ್ ಗಳ ಬಗ್ಗೆ ನಡೆದ ತರಬೇತಿ ಇದಾಗಿದ್ದು, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು, ಸಿಎ ಹಾಗೂ ಇನ್ನಿತರ ವೃತ್ತಿಪರ ಕೋರ್ಸುಗಳಲ್ಲಿ ಭಾಗವಹಿಸುವವರಿಗೆ ಮಾಹಿತಿ ಮತ್ತು ಚಟುವಟಿಕೆ ಆಧಾರಿತ ತರಬೇತಿ ನೀಡಲಾಯಿತು. ವಿದ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗ ಆಯ್ಕೆಗಳು ಹಾಗೂ ಅವಕಾಶಗಳ ಬಗ್ಗೆ ಚಿತ್ರಣ ನೀಡಲಾಯಿತು. ಮಂಗಳೂರಿನ ಕೆವಿವಿ ಅಕಾಡಮಿ ಅಧ್ಯಕ್ಷ ಕಿರಣ್ ಎ, ವಸಂತ್, ಕಾರ್ತಿಕ್, ದೀಪಿಕಾ, ದೇವಿಚರಣ್ ಮತ್ತು ತಂಡ ತರಬೇತಿ ನಡೆಸಿಕೊಟ್ಟರು.
ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಮಂಜುನಾಥ ಆಚಾರ್ಯ, ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ ಡಾ. ಅಜಕ್ಕಳ ಗಿರೀಶ ಭಟ್, ರೋಟರಿ ಕ್ಲಬ್ ಕಾರ್ಯದರ್ಶಿ ಶಿವಾನಿ ಬಾಳಿಗ, ಪ್ರಮುಖರಾದ ಸುರೇಂದ್ರ ಶೆಣೈ ಉಪಸ್ಥಿತರಿದ್ದರು. ಸಂಯೋಜಕ ನಂದಕಿಶೋರ್ ಸ್ವಾಗತಿಸಿ, ಕಾರ್ಯಕ್ರಮದ ಮಹತ್ವದ ಕುರಿತು ಮಾಹಿತಿ ನೀಡಿದರು. ವಿವಿಧ ಕಾಲೇಜುಗಳ ಸುಮಾರು 80ಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆದುಕೊಂಡರು.
Be the first to comment on "ರೋಟರಿ ಕ್ಲಬ್ ನಿಂದ ಆವಿಷ್ಕಾರ್: ಉಚಿತ ತರಬೇತಿ"