ಬಂಟ್ವಾಳ: ಆರ್‌ಎಸ್‌ಎಸ್ ಕಾರ್ಯಕರ್ತ ಸಜೀಪಮುನ್ನೂರು ಗ್ರಾಮದ ಕಂದೂರು ಪಾಡಿ ನಿವಾಸಿ ಶರತ್ ಮಡಿವಾಳ ಹತ್ಯೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ಖಲಂದರ್ ನಿಸಾರ್ ಶುಕ್ರವಾರ ಬಂಟ್ವಾಳ ನ್ಯಾಯಲಯಕ್ಕೆ ಶರಣಾಗಿದ್ದಾನೆ. ಶರಣಾಗತ ಆರೋಪಿಗೆ ನ್ಯಾಯಲಯವು ನ್ಯಾಯಾಂಗ ಬಂಧನ ವಿಧಿಸಿದ್ದು ಮಂಗಳೂರಿನ ಜೈಲಿಗೆ ರವಾನಿಸಲಾಗಿದೆ.
ಘಟನೆ ವಿವರ: ೨೦೧೭ರ ಜುಲೈ ೪ರಂದು ಬಿ.ಸಿ.ರೋಡಿನ ಉದಯ ಲಾಂಡ್ರಿಯಲ್ಲಿ ಕೆಲಸ ಮುಗಿಸಿ ಅಂಗಡಿಯ ಬಾಗಿಲು ಹಾಕುತ್ತಿದ್ದ ವೇಳೆ ದುಷ್ಕರ್ಮಿಗಳು ಶರತ್ ಮೇಲೆರಗಿ ಮಾರಕಾಸ್ತ್ರಗಳಿಂದ ಕಡಿದು ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ಶರತ್‌ನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಪ್ರಯೋಜನವಾಗದೆ ಮೃತಪಟ್ಟಿದ್ದ. ಶರತ್ ಹತ್ಯೆ ಬಳಿಕ ಜಿಲ್ಲೆಯಲ್ಲಿ ಅಶಾಂತಿಯ ವಾತವರಣ ನಿರ್ಮಾಣವಾಗಿತ್ತು. ಘಟನೆಯ ಬಳಿಕ ಕೆಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಖಲಂದರ್ ನಿಸಾರ್ ಸುಮಾರು ಒಂದೂವರೆ ವರ್ಷಕ್ಕಿಂತಲೂ ಅಧಿಕ ಸಮಯ ತಲೆಮರೆಸಿಕೊಂಡಿದ್ದ. ಈ ನಡುವೆ ಜಿಲ್ಲಾ ಸೆಷನ್ ನ್ಯಾಯಾಲಯ ಹಾಗೂ ರಾಜ್ಯ ಉಚ್ಛನ್ಯಾಯಾಲಯಕ್ಕೆ ಜಾಮೀನಿಗೆ ಪ್ರಯತ್ನಿಸಿದ್ದು ನ್ಯಾಯಲಯವು ಈತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ವಜಾಗೊಳಿಸಿತ್ತು. ಶುಕ್ರವಾರ ಬಿ.ಸಿರೋಡಿನಲ್ಲಿರುವ ಜೆಎಂಎಫ್‌ಸಿ ನ್ಯಾಯಲಯಕ್ಕೆ ಹಾಜರಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಖಲಂಧರ್ ಸೇರಿ ಒಟ್ಟು ೧೭ ಮಂದಿಯನ್ನು ದಸ್ತಗಿರಿ ಮಾಡಿದಂತಾಗಿದೆ.
Be the first to comment on "ಶರತ್ ಮಡಿವಾಳ ಹತ್ಯಾ ಆರೋಪಿ ಕೋರ್ಟಿಗೆ ಶರಣು"