ಸಜಿಪಮುನ್ನೂರಿನ ಮುಗುಳಿಯ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ದಿನಾಚರಣೆ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭ ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ದಂಪತಿಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಸನ್ಮಾನಿಸಿದರು.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಮೋಹನ್ ರಾವ್, ಕಲಾವಿದ ಪೊಳಲಿ ಸುಬ್ಬರಾವ್, ತಬಲಾವಾದಕ ವೆಂಕಟಕೃಷ್ಣ ಶಿಬರೂರು, ಸಲಹೆಗಾರ ಎಂ.ಸುಬ್ರಹ್ಮಣ್ಯ ಭಟ್, ಶಿಕ್ಷಕಿ ಸುಪ್ರಭಾ, ಲಕ್ಷ್ಮೀಯಮ್ಮ, ಶಾರದಾ ಎಸ್.ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಎನ್.ಕೆ.ಶಿವ, ಹರಿಪ್ರಸಾದ ಭಂಡಾರಿ, ದಿವಾಕರ, ಕೃಷ್ಣ ಭಟ್, ಶ್ರಿನಿವಾಸ ನಾಯ್ಕ, ಚಿತ್ರಾ ಪಿ., ದೇವಪ್ಪ ಮಡಿವಾಳ, ಚಿತ್ರಾ ಎಸ್.ರೈ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ದಾಸ ಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ಸನ್ಮಾನ"