ನೊಂದವರ , ದುರ್ಬಲ ವರ್ಗಗಳ ಸೇವೆ ದೇವರ ಸೇವೆ. ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಆರೋಗ್ಯ, ಶಿಕ್ಷಣ ಮತ್ತು ,ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಕೆಲಸವನ್ನು ಮಾಡಲಾಗುತ್ತಿದೆ .ಈ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಸೇವಾರತ್ನ ಕೃಷ್ಣ ಕುಮಾರ್ ಪೂಂಜ ಹೇಳಿದರು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಮಾರಂಭದ ಮುಖ್ಯ ಅತಿಥಿ ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್ ಪರಂಗಿಪೇಟೆಯಲ್ಲಿ ಟೌನ್ ರೋಟರಿ ವತಿಯಿಂದ ನೂತನ ಕ್ಲಬ್ ಆರಂಭಿಸುವ ಬಗ್ಗೆ ಮಾಹಿತಿ ನೀಡಿದರು. ಸೇವಾಂಜಲಿ ಪ್ರತಿಷ್ಠಾನದ ಸೇವಾ ಕಾರ್ಯಕ್ರಮಗಳಿಗೆ ರೋಟರಿಯಂತಹ ಸಂಸ್ಥೆಗಳ ಸಹಕಾರ ಅಗತ್ಯ ಇದೆ ಎಂದು ಮನವಿ ಮಾಡಿದರು. ವೇದಿಕೆಯ ಮೇಲೆ ರೋಟರಿ ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ಉಮೇಶ್ ನಿರ್ಮಲ್, ಕಾರ್ಯದರ್ಶಿ ಜಯರಾಜ್ ಬಂಗೇರ, ಪದಾಧಿಕಾರಿಗಳಾದ ಶಂಕರ್ ಶೆಟ್ಟಿ, ಪ್ರಕಾಶ್ ಆಳ್ವಾ, ಯಶವಂತ ವಿಟ್ಲ, ರಾಜ್ ಕುಮಾರ್ ಉಪಸ್ತಿತರಿದ್ದರು.
Be the first to comment on "ಕೃಷ್ಣಕುಮಾರ್ ಪೂಂಜ ಅವರಿಗೆ ಸನ್ಮಾನ"