ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ವಲಯ ಕರ್ನಾಟಕ ಅರಣ್ಯ ಇಲಾಖೆ, ಕಾವಳಪಡೂರು ಸರಕಾರಿ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಬೆಂಕಿ ಅನಾಹುತಗಳ ಕುರಿತು ಜಾಗೃತಿ ಮೂಡಿಸುವ ಜಾಥ ಮತ್ತು ಬೀದಿ ನಾಟಕ ನಡೆಯಿತು.
ಜಾನಪದ ಕಲಾವಿದ ಕೆ.ಗುಡ್ಡಪ್ಪ ಜೋಗಿ ತಂಡ ನಾಟಕ ಪ್ರಸ್ತುತಪಡಿಸಿದರು. ಶಾಲಾ ವಿಧ್ಯಾರ್ಥಿಗಳಿಂದ ಪರಿಸರ ಗೀತೆಗಳು ಮತ್ತು ಬೆಂಕಿಯಿಂದ ಅರಣ್ಯ ಸಂರಕ್ಷಣಾ ಜಾಗ್ರತಿ ಘೋಷಣೆಗಳು ಮೊಳಗಿದವು. ಕಾಡನ್ನು ಬೆಂಕಿಯಿಂದ ಕಾಪಾಡಲು ಏನೇನು ಮುನ್ನೆಚ್ಚರಿಕೆ ವಹಿಸಬೆಕು ಮತ್ತು ಆಕಸ್ಮತ್ ಕಾಡಿನಲ್ಲಿ ಬೆಂಕಿ ಕಂಡುಬಂದರೆ ಯಾರಿಗೆ ಮಾಹಿತಿ ನೀಡಬೇಕು ಮತ್ತು ಹೇಗೆ ಕಾರ್ಯಪ್ರವ್ರತ್ತರಾಗಬೇಕು ಮತ್ತು ಸಾರ್ವಜನಿಕರು ಸದಾ ಅರಣ್ಯ ಇಲಾಖೆಯೊಂದಿಗೆ ಇಂಥ ಪರಿಸ್ಥಿತಿಯಲ್ಲಿ ಯಾವ ರೀತಿ ಸಹಕಾರ ನೀಡಬೇಕೆಂದು ವಲಯ ಅರಣ್ಯ ಅಧಿಕಾರಿ ಬಿ. ಸುರೇಶ್ ಮಾಹಿತಿ ನೀಡಿದರು. ವನ್ಯಜೀವಿಗಳ ಮಹತ್ವ ಮತ್ತು ಪರಿಸರದ ಸಮತೋಲನದ ಬಗ್ಗೆ ಉರಗ ತಜ್ನರಾದ ಸ್ನೇಕ್ ಕಿರಣ್ ಮಂಗಳೂರು ಮಾಹಿತಿ ನೀಡಿದರು. ಆರಣ್ಯ ಇಲಾಖಾ ಸಿಬ್ಬಂದಿಗಳು ಮತ್ತು ಶಾಲಾಭೀವ್ರದ್ದಿ ಸಮಿತಿಯ ಅಧ್ಯಕ್ಷ ಪಿ ಜಿನರಾಜ ಆರಿಗ, ಸದಸ್ಯರಾದ ಬೆನೆಡಿಕ್ಟ್ ಡಿಸೋಜ, ಮುಖ್ಯಶಿಕ್ಷಕರಾದ ಶೇಕ್ ಆದಂ ಸಾಹೇಬ್ ನೆಲ್ಯಾಡಿ, ಶಿಕ್ಷಕರಾದ ಲೈಲಾ ಪರ್ವಿನ್, ಸುಶೀಲಾ ಜಿ, ವೀರರಾಜೇ ಅರಸ್, ಶ್ರೀನಿವಾಸ್ ನಾಯ್ಕ್ , ಪ್ರೆಡ್ರಿಕ್ ಡಿಸೋಜ ಉಪಸ್ಥಿತರಿದ್ದರು.
Be the first to comment on "ವಗ್ಗ ಸರಕಾರಿ ಪ್ರೌಢಶಾಲೆಯಲ್ಲಿ ಅರಣ್ಯ ಸಂರಕ್ಷಣಾ ಜಾಗೃತಿ"