ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಮಳೆ ನೀರು ಸಂಗ್ರಹ, ಸಂರಕ್ಷಣೆ ಕುರಿತು ಈಗಲೇ ಜನಜಾಗೃತಿ ಅವಶ್ಯ ಹಾಗೂ ಕಾರ್ಯಾಗಾರಗಳ ಮೂಲಕ ಜನರನ್ನು ಈ ಕುರಿತು ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು.
ಬೆಂಗಳೂರು ಅಂತರ್ಜಲ ನಿರ್ದೇಶನಾಲಯ, ಮಂಗಳೂರು ಜಿಲ್ಲಾ ಅಂತರ್ಜಲ ಕಚೇರಿ ವತಿಯಿಂದ ಮಳೆ ನೀರಿನ ಸಂಗ್ರಹ ಣೆ ಮತ್ತು ಮರುಬಳಕೆ , ಅಂತರ್ಜಲ ಸಂರಕ್ಷಣೆ , ಕಲುಷಿತ ತಡೆಗಟ್ಟುವಿಕೆ , ತೆರೆದ/ತ್ಯಕ್ತ ಕೊಳವೆ ಬಾವಿಗಳಲ್ಲಿ ಮಕ್ಕಳು ಬೀಳದಂತೆ ನಿಯಂತ್ರಿಸುವ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಾಟರ್ ಮ್ಯಾನ್ ರವರಿಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಂಟ್ಬಾಳ ತಹಶಿಲ್ದಾರ್ ರಶ್ಮಿ ಮಾತನಾಡಿ ಅಂತರ್ಜಲ ದ ಅಭಿವೃದ್ಧಿಯ ಮಹತ್ವ ವನ್ನು ಅಧಿಕಾರಿ ಗಳು ಇತರರಿಗೆ ತಿಳಿಸುವ ಕೆಲಸ ಮಾಡಬೇಕಾಗಿದೆ. ನೀರಿನ ಸಮಸ್ಯೆ ತಡೆಯಲು ಅಧಿಕಾರಿ ಗಳಿಂದ ಮಾತ್ರ ಸಾಧ್ಯವಿಲ್ಲ, ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿ ಬೇಕಾಗಿದೆ. ಇಂತಹ ಕಾರ್ಯಕ್ರಮ ಗಳು ಪ್ರತಿಯೊಬ್ಬರಿಗೆ ಮುಟ್ಟುವ ರೀತಿಯಲ್ಲಿ ಅಗಲಿ ಎಂದರು.
ಅಧ್ಯಕ್ಷತೆಯನ್ನು ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ವಹಿಸಿ ಶುಭಹಾರೈಸಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ರಾಜಣ್ಣ, ಸಹಾಯಕ ಕಾರ್ಯಪಾಲ ಅಭಿಯಂತರ ಕೃಷ್ಣ ಕುಮಾರ್, ಉಡುಪಿ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ ಡಾ. ಎಂ ದಿನಕರ ಶೆಟ್ಟಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ನೋಣಯ್ಯ ನಾಯಕ್ , ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ರಾಮಚಂದ್ರ, ಸಂಪನ್ಮೂಲ ವ್ಯಕ್ತಿ ಪ್ರೋ. ಜಗದೀಶ್ ಬಾಳ, ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿ ಜಾನಕಿ ಪಿ.
ಉಪಸ್ಥಿತರಿದ್ದರು. ಇದೇ ಸಂದರ್ಭ ಅಂತರ್ಜಲ ಮಾಹಿತಿಯ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ನಿತೇಶ್ ಡಿ.ಸೋಜ ಸ್ವಾಗತಿಸಿ, ಚಂದ್ರಿಕಾ ವಂದಿಸಿದರು.
Be the first to comment on "ಮಳೆ ನೀರು ಸಂರಕ್ಷಣೆ ಕುರಿತು ಈಗಲೇ ಜನಜಾಗೃತಿ ಅಗತ್ಯ: ತಾಪಂ ಅಧ್ಯಕ್ಷ"