ಬಂಟ್ವಾಳ: ಸಾಮಾಜಿಕ ಜಾಲತಾಣ ಸಹಿತ ನವಮಾಧ್ಯಮಗಳನ್ನೂ ಬಳಸಿಕೊಂಡು ಅಧಿಕಾರಿಗಳು ಮತದಾರರನ್ನು ಜಾಗೃತಗೊಳಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಕೆ.ಸುಧಾಕರ ಹೇಳಿದರು.
ಬಂಟ್ವಾಳ ತಾಪಂ ಸಭಾಂಗಣದಲ್ಲಿ ಗುರುವಾರ ಮತದಾರರ ಜಾಗೃತಿ ಸಮಿತಿಯ ಬಂಟ್ವಾಳ ತಾಲೂಕು ಘಟಕಕ್ಕೆ ಚಾಲನೆ ನೀಡಿ, ಜಾಗೃತಿ ಪ್ರತಿಜ್ಞಾ ಸ್ವೀಕಾರ ಮಾಡಿದ ಬಳಿಕ ಅವರು ಮಾತನಾಡಿದರು.
ಎಲ್ಲ ಸಂಘಟನೆಗಳನ್ನು ಸೇರಿಸಿಕೊಂಡು ಪ್ರತಿಯೊಬ್ಬ ಹದಿನೆಂಟು ವರ್ಷ ಪ್ರಾಯದವರನ್ನು ಮತದಾನ ಪಟ್ಟಿಗೆ ಸೇರ್ಪಡೆಗೆ ಹಾಗೂ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು. ಪ್ರತಿದಿನ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರನ್ನು ಮತದಾನದಲ್ಲಿ ಪಾಲ್ಗೊಳ್ಳಲು ಬೇರೆ ಬೇರೆ ಕಾರ್ಯಕ್ರಮ ಗಳ ಮೂಲಕ ಜಾಗೃತಿ ಮಾಡುವ ಪ್ರತಿಜ್ಞೆ ಮಾಡಲು ತಾಲೂಕಿನ ಅಧಿಕಾರಿಗಳಿಗೆ ತಿಳಿಸಿದರು.ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.
Be the first to comment on "ಸಾಮಾಜಿಕ ಜಾಲತಾಣಗಳ ಬಳಸಿ ಮತದಾರರ ಜಾಗೃತಗೊಳಿಸಿ"