ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಸ್ತ್ರೀ ಪುರುಷರ ನಡುವಿನ ಅಸಮಾನತೆಯನ್ನು ತನ್ನ ತ್ರಿಪದಿಗಳ ಮೂಲಕ ಖಂಡಿಸಿದ ಕವಿ ಸರ್ವಜ್ಞ, ಆದರೆ ಇಂದಿಗೂ ಸಮಾಜದಲ್ಲಿ ಸ್ತ್ರೀ ಪುರುಷರ ನಡುವೆ ಅಸಮಾನತೆ ಇರುವುದು ವಿಷಾದನೀಯ ಎಂದು ಬೆಂಜನಪದವು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಲೋಕೇಶ್ ನಾರ್ಶ ಹೇಳಿದರು.
ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಹಾಗೂ ರಾಜ್ಯ ಕುಲಾಲ ಕುಂಬಾರರ ಮಹಿಳಾ ಸಂಘ ಬಂಟ್ವಾಳ ಹಾಗೂ ರಾಜ್ಯ ಕುಲಾಲ ಕುಂಬಾರರ ಮಹಿಳಾ ಸಂಘ ಬಂಟ್ವಾಳ ಆಶ್ರಯದಲ್ಲಿ ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಶ್ರೀ ಸರ್ವಜ್ಞ ಜಯಂತಿ ಆಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಸರ್ವಜ್ಞನ ತ್ರಿಪದಿಗಳನ್ನು ಎಲ್ಲರಿಗೂ ಪಸರಿಸಬೇಕು. ಸಂಶೋಧನೆಯ ಮೂಲಕ ಸರ್ವಜ್ಞನ ತ್ರಿಪದಿಗಳ ಸಂಗ್ರಹವಾಗಬೇಕು ಈ ಬಗ್ಗೆ ಸರಕಾರ ಗಮನಹರಿಸಬೇಕಿದೆ ಎಂದರು. ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ವಾಸ್ತವ ವಿಚಾರಗಳನ್ನು ಎಲ್ಲರಿಗೂ ತಿಳಿಸಿದ ಮಹಾನ್ ವ್ಯಕ್ತಿ ಸರ್ವಜ್ಞ, ಮುಂದಿನ ದಿನಗಳಲ್ಲಿ ಪ್ರತೀ ಪಂಚಾಯತ್ನಲ್ಲಿ ಸರ್ವಜ್ಞ ಗ್ರಂಥವನ್ನು ನೀಡಲಾಗುವುದು, ಇದರಿಂದ ಪ್ರತೀ ಗ್ರಾಮೀಣ ಪ್ರದೇಶದ ಜನರಿಗೂ ಸರ್ವಜ್ಞನ ವಚನವನ್ನು ತಿಳಿದಂತಾಗುತ್ತದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ರಾಜಣ್ಣ ಹೇಳಿದರು.
ಬಂಟ್ವಾಳ ಕುಲಾಲ ಸುಧಾರಕ ಸಂಘ ಅಧ್ಯಕ್ಷ ಡಿ.ಎಂ. ಕುಲಾಲ್ ಪ್ರಾಸ್ತಾವಿಕ ಮಾತನಾಡಿದರು. ಬುಡ ಅಧ್ಯಕ್ಷ ಸದಾಶಿವ ಬಂಗೇರ,ಕುಲಾಲ ಕುಂಬಾರ ಯುವವೇದಿಕೆ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ರಾಜ್ಯ ಕುಲಾಲ ಕುಂಬಾರ ಮಹಿಳಾ ಘಟಕದ ಬಂಟ್ವಾಳ ಘಟಕ ದ ಅಧ್ಯಕ್ಷೆ ಭಾರತಿಸೇಸಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಪುರಸಭಾ ಸದಸ್ಯ ಹರಿಪ್ರಸಾದ್ ಸಾಂಸ್ಕೃತಿಕ ಕಾರ್ಯದರ್ಶಿ ಯಾದವ್ ಕುಲಾಲ್, ಯುವ ವೇದಿಕೆಯ ಸಂಚಾಲಕ ಸತೀಶ್ ಜಕ್ರಿಬೆಟ್ಟು,ಉಪತಹಶೀಲ್ದಾರ್ ರವಿಶಂಕರ್, ಪ್ರಭಾರ ಉಪತಹಶೀಲ್ದಾರ್ ಸೀತಾರಾಮ ಗ್ರೆಟ್ಟಾ ಮಸ್ಕರೇಞಂಸ್, ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ, ಆಹಾರ ಶಾಖೆಯ ಶ್ರೀನಿವಾಸ, ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್, ಮಾಜಿ ಪುರಸಭಾ ಸದಸ್ಯ ಪ್ರವೀಣ್, ಯುವವೇದಿಕೆಯ ಜಿಲ್ಲಾ ಸಂಚಾಲಕ ಸತೀಶ್ ಜಕ್ರಿಬೆಟ್ಟು, ಯುವವೇದಿಕೆಯ ಸೋಮನಾಥ, ಉಮೇಶ್ ಮೂಲ್ಯ, ಕುಲಾಲ ಯುವವೇದಿಕೆಯ ಕ್ರೀಡಾಕಾರ್ಯದರ್ಶಿ ಕಾರ್ತಿಕ್ ಮಯ್ಯರಬೈಲು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Be the first to comment on "ಅಸಮಾನತೆಯನ್ನು ತ್ರಿಪದಿ ಮೂಲಕ ಖಂಡಿಸಿದ ಕವಿ ಸರ್ವಜ್ಞ"