ಬಂಟ್ವಾಳ: ಭಾಷಣ ಸ್ಪರ್ಧೆಯ ಮೂಲಕ ವಿದ್ಯಾರ್ಥಿಗಳಿಗೆ ಸಾಹಿತ್ಯಲೋಕವನ್ನು ಪರಿಚಯಿಸಿ ಅವರನ್ನು ಸಾಹಿತ್ಯಲೋಕಕ್ಕೆ ದುಮುಕಿಸಿಕೊಳ್ಳಲು ಅವಕಾಶ ಮಾಡಿ ಕೋಡುವ ಯುವವಾಹಿನಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಬಂಟ್ವಾಳ ಎಸ್.ವಿ.ಎಸ್ ಕಾಲೇಜಿನ ಪ್ರಾಂಶುಪಾಲರಾದ ಶಶಿಕಲಾ ಕೆ ತಿಳಿಸಿದರು.
ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ(ರಿ.) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಹಾಗೂ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದಲ್ಲಿ ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಬಂಟ್ವಾಳ ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಲಯ ಮಟ್ಟದ ಭಾಷಣ ಸ್ಪರ್ಧೆಯನ್ನು ಬಂಟ್ವಾಳದಲ್ಲಿ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಯುವವಾಹಿನಿ(ರಿ) ಬಂಟ್ವಾಳ ಘಟಕದ ಅಧ್ಯಕ್ಷರಾದ ಶಿವಾನಂದ ಎಮ್ ವಹಿಸಿದ್ದರು. ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಮಾಜಿ ಸಂಚಾಲಕರು ಟಿ ಶಂಕರ್ ಸುವರ್ಣ ಪ್ರಾಸ್ತಾವಿಕ ನುಡಿಗಳೊಂದಿಗೆ ವಿಶು ಕುಮಾರ್ ಪರಿಚಯವನ್ನು ನೀಡಿದರು. ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಪ್ರೇಮ್ನಾಥ್ ಕೆ. ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ವಿಶು ಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಉಪಸ್ಥಿತರಿದ್ದರು. ಕಲೆ ಮತ್ತು ಸಾಹಿತ್ಯ ನಿರ್ದೇಶಕರು ಭವಾನಿ ಎನ್. ಸ್ವಾಗತಿಸಿದರು. ಘಟಕದ ಜತೆ ಕಾರ್ಯದರ್ಶಿ ರಚನಾ ಕರ್ಕೇರ ಧನ್ಯವಾದ ಸಲ್ಲಿಸಿದರು. ಶಂಕರ್ ಸುವರ್ಣ,ಪ್ರೇಮ್ನಾಥ್ ಕೆ ಚೇತನ್ ಮುಂಡಾಜೆ, ತೀರ್ಪುಗಾರರಾಗಿ ಭಾಗವಹಿಸಿದರು.
ಸಹನಾ ಕರ್ಕೇರ ಪ್ರಾರ್ಥಿಸಿದರು. ಘಟಕದ ಉಪಾಧ್ಯಕ್ಷರಾದ ನಾಗೇಶ್ ಎಮ್, ಸತೀಶ್ ಬಾಯಿಲ, ನಿಕಟ ಪೂರ್ವ ಅಧ್ಯಕ್ಷ ಲೋಕೇಶ್ ಸುವರ್ಣ, ಸುಂದರ್ ಪೂಜಾರಿ ಬೋಳಂಗಡಿ, ಶೈಲಜಾ ರಾಜೇಶ್ ಭಾಗವಹಿಸಿದರು. ಉಪನ್ಯಾಸಕ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಯುವವಾಹಿನಿಯಿಂದ ತಾಲೂಕು ಮಟ್ಟದ ಭಾಷಣ ಸ್ಪರ್ಧೆ"