ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಸರಕಾರದ ವಿವಿಧ ಯೊಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ಅವರನ್ನು ಸ್ವಸಹಾಯ ಸಂಘಗಗಳ ಮೂಲಕ ಸಂಘಟಿಸಿ ಆರ್ಥಿಕವಾಗಿ ಬಲಾಢ್ಯ ಗೊಳಿಸುವ ಉದ್ದೇಶವನ್ನಿಟ್ಟುಕೊಂಡು ಶಹರಿ ಸಮೃದ್ದಿ ಉತ್ಸವವನ್ನು ಆಚರಿಸಲಾಗುತ್ತದೆ. ದ.ಕ. ಜಿಲ್ಲೆಯ 10 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಫೆ. 1ರಿಂದ ಫೆ.15ರವರೆಗೆ ಶಹರಿ ಸಮೃದ್ದಿ ಉತ್ಸವಗಳು ನಡೆಯುತ್ತದೆ ಜಿಲ್ಲಾ ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಅಭಿಯಾನ ವ್ಯವಸ್ಥಾಪಕಿ ಐರಿನ್ ರೆಬೆಲ್ಲೋ ಹೇಳಿದರು.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬಂಟ್ವಾಳ ಪುರಸಭೆ ಇದರ ವತಿಯಿಂದ ರೋಟರಿ ಕ್ಲಬ್ ಸಹಯೋಗದೊಂದಿಗೆ ದೀನದಯಾಳ್ ಅಂತ್ಯೋದಯ ಯೊಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಮಂಗಳವಾರ ಬಿ.ಸಿ.ರೋಡಿನ ರೋಟರಿ ಸಭಾ ಭವನದಲ್ಲಿ ನಡೆದ ಶಹರಿ ಸಮೃದ್ದಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಸಹಾಯ ಸಂಘಗಳ ಮೂಲಕ ಜನರ ಆರ್ತೀಕ ಮತ್ತು ಸಾಮಾಜಿಕ ಜೀವನವನ್ನು ಸುಧಾರಿಸುವ ನಿಟ್ಟನಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿದೆ. ಬ್ಯಾಂಕ್ ಸಾಲ ಶಿಬಿರ, ಕುಟುಂಬಗಳ ಸಮಗ್ರ ಸಮೀಕ್ಷೆ, ನಗರ ವ್ಯಾಪ್ತಿಯಲ್ಲಿ ರಾತ್ರಿ ವಸತಿ ರಹಿತರಿಗೆ ವಸತಿ ಸೌಲಭ್ಯಗಳಿದ್ದರೂ ಅರ್ಹರಿಗೆ ಯೋಜನೆಯ ಸದುಪಯೋಗ ಪಡೆಯಲು ಸಾಧ್ಯವಾಗದೇ ಇರುವುದು ವಿಪರ್ಯಾಸ ಎಂದರು.
ವೇದಿಕೆಯಲ್ಲಿ ಶಿಶು ಅಭಿವೃದ್ದಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಭಾರತಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಇಂಜಿನಿಯರ್ ಗಿರೀಶ್, ಎಚ್‌ಡಿಎಫ್‌ಸಿ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಹೃಷಿಕೇಶ್ ಕುಂಬ್ಲೆ, ಪುರಸಭೆಯ ಸಹಕಾರಿ ಸಂಘದ ಅಧ್ಯಕ್ಷೆ ವಸಂತಿ ಗಂಗಾಧರ, ಆಯುಷ್ಮಾನ್ ಭಾರತ್‌ನ ಜಿಲ್ಲಾ ಸಂಚಾಲಕ ಡಾ. ಜಗನ್ನಾಥ್, ಗ್ಯಾಸ್ ಏಜೆನ್ಸಿಗಳ ಸಂಪನ್ಮೂಲ ವ್ಯಕ್ತಿ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.
ಪುರಸಭೆಯ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಜಯಲಕ್ಷ್ಮೀ ವಂದಿಸಿದರು. ಪುರಸಭೆ ಸಮುದಾಯ ಸಂಘಟಕಿ ಉಮಾವತಿ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಸಹಕಾರಿ ಯೋಜನೆಗಳ ಅರಿವು ಮೂಡಿಸುವ ಕಾರ್ಯಗಾರ ಹಾಗೂ ಸೌಲಭ್ಯ ವಿತರಣೆ ನಡೆಯಿತು. ಸಭಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಬಿ.ಸಿ.ರೋಡಿನ ರಕ್ತೇಶ್ವರೀ ದೇವಸ್ಥಾನದ ಬಳಿಯಿಂದ ರೋಟರಿ ಸಭಾ ಭವನದವರೆಗೆ ಜಾಗೃತಿ ಜಾಥ ನಡೆಯಿತು.
Be the first to comment on "ಬಂಟ್ವಾಳದಲ್ಲಿ ಶಹರಿ ಸಮೃದ್ಧಿ ಉತ್ಸವ"