ಬಂಟ್ವಾಳ: ನಮ್ಮನ್ನು ಸೈದ್ಧಾಂತಿಕ ಸೋಲಿಸಿ, ಬಹಿರಂಗ ಚರ್ಚೆಗೆ ಬನ್ನಿ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ, ಕೇರಳದ ರಾಜ್ಯ ಸಭಾ ಸದಸ್ಯ ಬಿನೊಯ್ ವಿಶ್ವಂ ಸವಾಲು ಹಾಕಿದ್ದಾರೆ.
ದುಷ್ಕರ್ಮಿಗಳಿಂದ ಹಾನಿಗೀಡಾದ ಬಂಟ್ವಾಳದ ಸಿಪಿಐ ಪಕ್ಷದ ಕಚೇರಿ ಎ.ಶಾಂತಾರಾಂ ಪೈ ಸ್ಮಾರಕ ಭವನವನ್ನು ಬುಧವಾರ ಉದ್ಫಾಟಿಸಿ, ಬಳಿಕ ಬಂಟ್ವಾಳ ಚಲೋ ಕಾರ್ಯಕ್ರಮದಡಿ ಪ್ರತಿಭಟನಾ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡುತ್ತಿದ್ದರು.
ಮೋದಿ ಸರಕಾರದ ಅಡಿಪಾಯ ನಡುಗುತ್ತಿದ್ದು, ಕೆಲವೇ ದಿನಗಳಲ್ಲಿ ಪತನವಾಗಲಿದೆ. ಇದಕ್ಕೆ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದ ಮೂಲಕ ಜನರು ಉತ್ತರ ನೀಡಿದ್ದಾರೆ. ಉತ್ತರ ಭಾರತದಲ್ಲಿ ಶ್ರೀರಾಮ, ದಕ್ಷಿಣದಲ್ಲಿ ಅಯ್ಯಪ್ಪ ಸ್ವಾಮಿ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ದೇವರವನ್ನು ದೇವರಾಗಿ ಕಾಣಿ, ಅವರನ್ನು ಯಾವ ಪಕ್ಷಕ್ಕೆ ಸೀಮಿತ ಮಾಡಬೇಡಿ, ಅವರನ್ನು ಅವರಷ್ಟಕ್ಕೆ ಬಿಡಿ ಎಂದು ಹೇಳಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಕೋಮುವಾದಿ ಶಕ್ತಿಗಳು ಕೋಮು ಸಾಮರಸ್ಯಕ್ಕೆ ತೊಡಕು ಉಂಟು ಮಾಡುತ್ತಿದ್ದು, ಇವುಗಳನ್ನು ಕಿತ್ತೆಯಲು ಜಾತ್ಯತೀತ, ಎಡಪಕ್ಷಗಳು ಮತ್ತೆ ಒಂದಾಗಬೇಕು. ಸಿಪಿಐ ಪಕ್ಷದ ಕಚೇರಿಗೆ ಬೆಂಕಿ ಹಚ್ಚಿರುವುದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಸಿಪಿಐ ರಾಷ್ಟ್ರೀಯ ಮಂಡಲಿಯ ಮಾಜಿ ಸದಸ್ಯಡಾ. ಸಿದ್ಧನಗೌಡ ಪಾಟೀಲ , ಎ.ಶಾಂತಾರಾಂ ಪೈ ಅವರ ಪುತ್ರ ಕಿಶೋರ್ ಎಸ್. ಪೈ, ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ, ಡಾ. ಸಿದ್ದನಗೌಡ ಪಾಟೀಲ, ಪಿ.ವಿ.ಲೋಕೇಶ್, ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಎಐಟಿಯುಸಿ ರಾಜ್ಯ ಅಧ್ಯಕ್ಷ ಅನಂತ ಸುಬ್ಬರಾವ್, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಅಧ್ಯಕ್ಷೆ ಜ್ಯೋತಿ ಎ., ಪಕ್ಷ, ವಿವಿಧ ಸಂಘಟನೆಗಳ ಮುಖಂಡರಾ ಎಸ್.ಕೆ. ರಾಮಚಂದ್ರ, ಜನಾರ್ದನ್, ಪ್ರಸನ್ನ ಕುಮಾರ್, ಶಿವಣ್ಣ, ಸಂತೋಷ್, ಕೆ.ವಿ.ಭಟ್, ಜ್ಯೋತಿ, ಪ್ರಭಾಕರ್ ರಾವ್, ರಮೇಶ್ ನಾಯ್ಕ್, ಜಾಫರ್ ಶರೀಫ್ ಉಪಸ್ಥಿತರಿದ್ದರು.ಸಿಪಿಐ ತಾಲೂಕು ಕಾರ್ಯದರ್ಶಿ ಬಿ.ಶೇಖರ್ ಸ್ವಾಗತಿಸಿ, ಜಿಲ್ಲಾ ಜೊತೆ ಕಾರ್ಯದರ್ಶಿ ಸೀತರಾಮ ಬೇರಿಂಜ ವಂದಿಸಿ, ಸದಸ್ಯ ಸುರೇಶ್ ನಿರೂಪಿಸಿದರು.
Be the first to comment on "ಸೈದ್ಧಾಂತಿಕವಾಗಿ ಸೋಲಿಸಿ – ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಬಿನೊಯ್ ವಿಶ್ವಂ"