www.bantwalnews.com Editor: Harish Mambady
ಭಾನುವಾರ ಸಂಜೆ ಅಡ್ಯಾರ್ ನ ಅಡ್ಯಾರ್ ಗಾರ್ಡನ್ ನ ಲ್ಲಿ ನಡೆದ ಬಂಟ್ವಾಳ ರೋಟರಿ ಕ್ಲಬ್‌ನ ವೈಭವದ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.
ತನ್ನ ನಡೆ ನುಡಿಯನ್ನು ಇಡೀ ಸಮಾಜ ಗಮನಿಸುತ್ತಿದೆ, ನಾನು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಬೇಕು, ಕಾನೂನಿಗೆ, ನನ್ನ ವೃತ್ತಿಗೆ ಗೌರವ ಕೊಡಬೇಕೆಂಬ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆದಾಗ ಸಮಾಜ ಮತ್ತಷ್ಠು ಜಾಗೃತವಾಗುತ್ತದೆ ಎಂದವರು ಹೇಳಿದರು. ಮಂಜುನಾಥ್ ಆಚಾರ್ಯ ಮತ್ತು ಬಳಗ ರೋಟರಿಯ ನೈಜ ಆಶಯಗಳನ್ನು ಎಲ್ಲೆಡೆ ಪಸರಿಸುವ ಕಾರ್ಯ ಮಾಡುತ್ತಿದೆ ಎಂದವರು ಶ್ಲಾಘಿಸಿದರು.
ರೋಟರಿ ಜಿಲ್ಲೆ ೩೧೮೧ರ ರಾಜ್ಯಪಾಲ ರೋಹಿನಾಥ ಪಿ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಂಟ್ವಾಳ ರೋಟರಿ ಕ್ಲಬ್ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ರೋಟರಿ ಜಿಲ್ಲೆಯ ಇತರ ಕ್ಲಬ್ ಗಳಿಗೆ ಮಾದರಿಯಾಗಿದೆ, ಮುಂದೆ ಮತ್ತಷ್ಟು ಕ್ರಿಯಾಶೀಲವಾಗಲಿ ಎಂದರು.
ಸುವರ್ಣ ವರ್ಷಾಚರಣೆ ಸಮಿತಿ ಡಾ ರಮೇಶಾನಂದ ಸೋಮಯಾಜಿ ಪ್ರಸ್ತಾವನೆಗೈದು ಮಾತನಾಡಿ, ಬಂಟ್ವಾಳ ರೋಟರಿ ಕ್ಲಬ್ ಅನ್ನು ಕಳೆದ 50 ವರ್ಷಗಳ ಹಿಂದೆ ಆರಂಭಿಸಿ, ಬೆಳೆಸಿ ಕ್ರಿಯಾಶೀಲತೆಯನ್ನು ಉಳಿಸುವಲ್ಲಿ ಅನೇಕರ ಶ್ರಮ ಅಡಗಿದ್ದು, ಅವರೆಲ್ಲರ ಬೆಂಬಲದಿಂದ ಇಷ್ಟು ಎತ್ತರಕ್ಕೆ ಏರಿದೆ. ಪ್ರಸಕ್ತ ವರ್ಷ ಮಂಜುನಾಥ ಆಚಾರ್ಯರ ನೇತೃತ್ವದಲ್ಲಿ , ಎಲ್ಲರ ಸಹಕಾರದಲ್ಲಿ ಮಾದರಿಯಾಗಿ ಮುನ್ನಡೆಯುತ್ತಿದೆ ಎಂದರು. ವಲಯ ೩೧೮೧ರ ಚುನಾಯಿತ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು, ನಿಯೋಜಿತ ಜಿಲ್ಲಾ ಗವರ್ನರ್ ರಂಗನಾಥ ಭಟ್ ಎಂ., ವಲಯ ೪ರ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಭಾಗವಹಿಸಿದ್ದ ವಿವಿಧ ದೇಶಗಳ ರೋಟರಿ ರೈಡ್ ಬಳಗ ಸದಸ್ಯರು ವಿಶೇಷ ಮೆರುಗು ನೀಡಿದರು.ಇದೇ ಸಂದರ್ಭ ವಿವಿಧ ದೇಶಗಳ ರೋಟರಿ ಸದಸ್ಯರನ್ನು, ಬಂಟ್ವಾಳ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರನ್ನು ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಸ್ವಾಗತಿಸಿ ಮಾತನಾಡಿ, ಸುವರ್ಣ ವರ್ಷಾಚರಣೆಯ ಸಂಭ್ರಮದ ಸಮಯದಲ್ಲೇ ನಮ್ಮ ಕ್ಲಬ್ ದಾಖಲೆ ಎಂಬಂತೆ ಹಲವಾರು ಸಾಧನೆಗಳನ್ನು ಮಾಡಿದೆ,ಶೈಕ್ಷಣಿಕವಾಗಿ ಶಾಲಾ ಕಾಲೇಜುಗಳಲ್ಲಿ ವಿಜ್ಞಾನ, ಗಣಿತ, ಬಾಹ್ಯಾಕಾಶ, ನಾಟಕ ಕುರಿತು ಜಾಗೃತಿ, ಅನೇಕ ಬಡಕುಟುಂಬಗಳಿಗೆ ನೆರವು,ಅಂಗನವಾಡಿಗಳಿಗೆ ನೆರವು, ಶಾಲಾ ಕಟ್ಟಡಗಳ ನಿರ್ಮಾಣ ಸಹಿತ ಅನೇಕ ಕಾರ್ಯಕ್ರಮಗಳು ಜೊತೆಗೆ ನವಬೆಳಕು ಕಿರು ಚಿತ್ರ ರಾಜ್ಯಪ್ರಶಸ್ತಿ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಅನೇಕ ಬಹುಮಾನಗಳನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು. ಕಾರ್ಯದರ್ಶಿ ಶಿವಾನಿ ಬಾಳಿಗಾ ವಂದಿಸಿದರು. ಮಹಮ್ಮದ್ ಮುಸ್ತಾಫ ಕಾರ್ಯಕ್ರಮ ನಿರೂಪಿಸಿದರು.
ಸಭಾಕಾರ್ಯಕ್ರಮದ ಬಳಿಕ ರೋಟರಿ ಆ್ಯನ್ಸ್ ಹಾಗೂ ಉಡುಪಿಯ ಭಾರ್ಗವಿ ನೃತ್ಯತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಿತು.
Be the first to comment on "ಬಂಟ್ವಾಳ ರೋಟರಿ ಕ್ಲಬ್‌ನ ವೈಭವದ ಸುವರ್ಣ ಸಂಭ್ರಮಾಚರಣೆ"