
ದುಷ್ಕರ್ಮಿಗಳು ಬೆಂಕಿ ಹಾಕಿದ್ದ ಹಿನ್ನೆಲೆಯಲ್ಲಿ ಸುಟ್ಟು ಹೋಗಿದ್ದ ಸಿಪಿಐ ಕಚೇರಿ.
ಆಫೀಸಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಅತೀ ಶೀಫ್ರ ಬಂಧಿಸುವಂತೆ ಪೋಲಿಸ್ ಇಲಾಖೆ ಹಾಗೂ ಸರಕಾರದ ಮೇಲೆ ಒತ್ತಡ ತರಲಾಗುವುದು ಎಂದು ಸಿಪಿಐ ತಾಲೂಕು ಕಾರ್‍ಯದರ್ಶಿ ಬಿ.ಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಭವನದ ಉದ್ಘಾಟನೆಯನ್ನು ದಿವಂಗತ ಶಾಂತಾರಾಂ ಪೈ ಅವರ ಪುತ್ರ ಕಿಶೋರ್ ಪೈ ನೆರವೇರಿಸಲಿದ್ದು, ಬಂಟ್ವಾಳ ಚಲೋ ಕಾರ್‍ಯಕ್ರಮದ ನಿಟ್ಟಿನಲ್ಲಿ ಆಯೋಜಿಸಿದ ಬೃಹತ್ ಪ್ರತಿಭಟನೆಯಲ್ಲಿ ಮುಖ್ಯ ಭಾಷಣಗಾರರಾಗಿ ಸಿಪಿಐ ರಾಷ್ಟ್ರೀಯ ಕಾರ್‍ಯದರ್ಶಿ ಹಾಗೂ ರಾಜ್ಯ ಸಭಾ ಸದಸ್ಯ ಬಿನೋಯ್ ವಿಶ್ವಂ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಸಿಪಿಐ ಜಿಲ್ಲಾ ಕಾರ್‍ಯದರ್ಶಿ ವಿ. ಕುಕ್ಯಾನ್ ವಹಿಸಲಿದ್ದು ಉಳಿದಂತೆ ಮುಖ್ಯ ಅತಿಥಿಗಳಾಗಿ ಸಿಪಿಐ ರಾಜ್ಯ ಮಂಡಳಿ ಕಾರ್‍ಯದರ್ಶಿ ಸಾತಿ ಸುಂದರೇಶ್, ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ, ಡಾ. ಸಿದ್ದನಗೌಡ ಪಾಟೀಲ, ಪಿ.ವಿ.ಲೋಕೇಶ್, ದ.ಕ ಜಿಲ್ಲಾ ಮಾಜೀ ಉಸ್ತುವಾರಿ ಸಚಿವರಾದ ರಮಾನಾಥ ರೈ, ಜೆಡಿಎಸ್ ಬಂಟ್ವಾಳ ತಾಲೂಕು ಅಧ್ಯಕ್ಷ ಬಿ.ಮೋಹನ, ಸಿಪಿಐಎಂನ ಜಿಲ್ಲಾ ಕಾರ್‍ಯದರ್ಶಿ ವಸಂತ ಆಚಾರಿ, ಎಐಟಿಯುಸಿ ರಾಜ್ಯ ಅಧ್ಯಕ್ಷರಾದ ಅನಂತ ಸುಬ್ಬರಾವ್, ಕಾರ್‍ಯದರ್ಶಿ ವಿಜಯ ಭಾಸ್ಕರ್, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಅಧ್ಯಕ್ಷೆ ಜ್ಯೋತಿ ಎ., ಮುಂತಾದವರು ಭಾಗವಹಿಸಲಿದ್ದಾರೆ.
Be the first to comment on "30ರಂದು ಸಿಪಿಐ ನವೀಕೃತ ಕಚೇರಿ ಉದ್ಘಾಟನೆ, ಬಂಟ್ವಾಳ ಚಲೋ ಪ್ರತಿಭಟನೆ"