ಬಂಟ್ವಾಳ: ವಿದ್ಯುತ್ ಉತ್ಪಾದಿಸುವುದಕ್ಕಿಂತ ಉತ್ಪಾದಿಸಿದ ವಿದ್ಯುತ್ ನ್ನು ಹಿತಮಿತವಾಗಿ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಬಳಸುವುದು ಮುಖ್ಯ. ವಿದ್ಯುತ್ ವಿತರಣೆ ಮತ್ತು ಬಳಕೆಯಲ್ಲಿ ಜಾಗರೂಕತೆ ಇದ್ದಾಗ ಅಪಾಯವನ್ನು ತಪ್ಪಿಸಬಹುದು ಎಂದು ಬಂಟ್ವಾಳ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನಾರಾಯಣ ಭಟ್ ಹೇಳಿದರು.
ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆ ಶಂಭೂರಿನಲ್ಲಿ ಬಂಟ್ವಾಳ ಮೆಸ್ಕಾಂ, ಜೋಡುಮಾರ್ಗ ನೇತ್ರಾವತಿ ಜೇಸಿ, ಇಂಟಾರಾಕ್ಟ್ ಕ್ಲಬ್ ರೋಟರಿ ಕ್ಲಬ್ ಬಂಟ್ವಾಳ ಟೌನ್ , ಮಕ್ಕಳ ಹಕ್ಕುಗಳ ಸಂಘದ ಸಹಯೋಗದಲ್ಲಿ ನಡೆದ ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಅಂಗವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು.
ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತಾನಾಡಿ, ವಿದ್ಯಾರ್ಥಿಗಳಿಗೆ ಸಂಪನ್ಮೂಲದ ಅಗತ್ಯತೆ ಮತ್ತು ಬಳಕೆ ಬಗ್ಗೆ ಸಪ್ತಾಹ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಪಾಣೆಮಂಗಳೂರು ಮೆಸ್ಕಾಂ ಶಾಖಾಧಿಕಾರಿ ವಸಂತ, ಮೆಸ್ಕಾಂ ಪ್ರತಿನಿಧಿ ಲಕ್ಷ್ಮೀನಾರಾಯಣ, ಪಂಚಾಯತ್ ಸದಸ್ಯರಾದ ರವೀಂದ್ರ ಸಫಲ್ಯ, ವಿಶ್ವನಾಥ ಪೂಜಾರಿ, ಗುತ್ತಿಗೆದಾರರಾದ ಪದ್ಮನಾಭ ಮಯ್ಯ , ಬಾಳ್ತಿಲ ಕ್ಲಸ್ಟರಿನ ಶಾಲಾ ಕರು, ಎಸ್.ಡಿ.ಎಂ.ಸಿ. ಸದಸ್ಯರು, ನರಿಕೊಂಬು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕ , ಜೇಸಿ ಉಪಾಧ್ಯಕ್ಷ ಹರಿಪ್ರಸಾದ್ ಕುಲಾಲ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯಶಿಕ್ಷಕ ಕಮಲಾಕ್ಷ ಕಲ್ಲಡ್ಕ ವಂದಿಸಿದರು.
Be the first to comment on "ವಿದ್ಯುತ್ ಹಿತಮಿತವಾಗಿ ಅಗತ್ಯಕ್ಕೆ ತಕ್ಕಷ್ಟೇ ಬಳಸಿ: ಎಇಇ ನಾರಾಯಣ ಭಟ್"