Editor: Harish Mambady
https://www.youtube.com/watch?v=z3UqyaE_OqU
ಕಾರ್ಯಕ್ರಮವನ್ನು ರೋಟರಿ ಜಿಲ್ಲೆ 3181ರ ರಾಜ್ಯಪಾಲ ರೋಹಿನಾಥ ಪಿ. ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ರೋಟರಿ ಜಿಲ್ಲೆ 3131ರ ಪೂರ್ವ ಜಿಲ್ಲಾ ಗವರ್ನರ್ ಮೋಹನ್ ಹಿರಾಚಂದ್ ಪಲೇಶಾ ಉಪಸ್ಥಿತರಿರುವರು. ಅತಿಥಿಗಳಾಗಿ ವಲಯ ೩೧೮೧ರ ಚುನಾಯಿತ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು, ನಿಯೋಜಿತ ಜಿಲ್ಲಾ ಗವರ್ನರ್ ರಂಗನಾಥ ಭಟ್ ಎಂ., ವಲಯ ೪ರ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ್ ಭಾಗವಹಿಸಲಿದ್ದಾರೆ ಎಂದು ಅವರು ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸಂಜೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ರೋಟರಿ ಕ್ಲಬ್ ಬಂಟ್ವಾಳ ಸುವರ್ಣ ವರ್ಷಾಚರಣೆಯ ಅಂಗವಾಗಿ ಹಲವಾರು ಸಮಾಜ ಮುಖಿ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ನಡೆಸಿ ಈ ವರ್ಷವನ್ನು ಸ್ಮರಣೀಯವಾಗಿಸಿದೆ. ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳ ಬೌದ್ಧಿಕ ವಿಕಾಸ ಹಾಗೂ ಕಲಿಕೆಯ ಅನುಕೂಲದ ದೃಷ್ಟಿಯಿಂದ ಹಲವಾರು ಕಾರ್ಯಕ್ರಮವನ್ನು ನಡೆಸಿ ಜನ ಮೆಚ್ಚುಗೆ ಪಡೆದುಕೊಂಡಿದೆ. ಒಂದು ವಾರಗಳ ಕಾಲ ತಾಲೂಕಿನ ವಿವಿಧ ಶಾಲೆಗಳಲ್ಲಿ ಸಂಚಾರಿ ತಾರಾಲಯದ ಮೂಲಕ ಬಾಹ್ಯಕಾಶ ಹಾಗೂ ಖಗೋಳ ವಿಜ್ಞಾನದ ಅಧ್ಯಯನಕ್ಕೆ ಅವಕಾಶ, ಸೈನ್ಸ್ ಆನ್ ವೀಲ್ಸ್ ಎನ್ನುವ ಕಾರ್ಯಕ್ರಮದ ಮೂಲಕ ವಿಜ್ಞಾನದ ವಿಸ್ಮಯಗಳನ್ನು ಸರಳವಾಗಿ ತಿಳಿದುಕೊಳ್ಳುವ ಅವಕಾಶ, ಟೆಲಿಸ್ಕೋಪ್ ಮೂಲಕ ಗ್ರಹಗಳು ಹಾಗೂ ಚಂದ್ರನ ವೀಕ್ಷಣೆ ಮಾಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಗವರ್ನರ್ ಅವರ ಕನಸಿನಂತೆ ಅಂಗನವಾಡಿಗಳನ್ನು ಸಬಲೀಕರಣಗೊಳಿಸುವ ಆಶಾಸ್ಪೂರ್ತಿ ಯೋಜನೆಯಡಿ ತಾಲೂಕಿನ ೫ ಅಂಗನವಾಡಿ ಕೇಂದ್ರಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗಿದೆ. ೫೦ ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರು ಶುದ್ದೀಕರಣ ಯಂತ್ರ, ಮಿಕ್ಸರ್ ಗ್ರೈಂಡರ್, ಕುಕ್ಕರ್‌ಗಳನ್ನು ಒದಗಿಸಲಾಗಿದೆ. ಬಂಟ್ವಾಳ ತಾಲೂಕಿನ ಕೊಲ ಸರಕಾರಿ ಪ್ರೌಢಶಾಲೆಗೆ ೬ ಶೌಚಾಲಯವನ್ನು ನಿರ್ಮಿಸಿ ಕೊಡಲಾಗಿದೆ. ಮಾನೀಯ ವಿದ್ಯಾಸಂಸ್ಥೆಗೆ ೫ ತರಗತಿ ಕೊಠಡಿ, ಪೆರ್ನೆ ಹಾಹೂ ಪೊಳಲಿ ಶಾಲೆಗಳಿಗೆ ಕೊಠಡಿ ನಿರ್ಮಾಣ ಮಾಡಲು ಯೋಜನೆ ರೂಪಿಸಿಸಲಾಗಿದೆ. ಬಂಟ್ವಾಳದ ಬಡ್ಡಕಟ್ಟೆಯಲ್ಲಿ ಬಂಟ್ವಾಳ ಪುರಸಭೆ, ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ, ಜೇಸಿಐ ಬಂಟ್ವಾಳದ ಸಹಯೋಗದೊಂದಿಗೆ ಪ್ರಯಾಣಿಕರ ತಂಗುದಾಣವನ್ನು ಪುನರ್ ನವೀಕರಿಸಲಾಗಿದೆ ಎಂದ ಅವರು ಬಂಟ್ವಾಳ ರೋಟರಿ ಕ್ಲಬ್‌ನ ಪ್ರಾಯೋಕತ್ವದಲ್ಲಿ ನಿರ್ಮಾಣಗೊಂಡ ನವಬೆಳಕು ಕಿರು ಚಿತ್ರ ರಾಜ್ಯಪ್ರಶಸ್ತಿಯನ್ನು ಗೆದ್ದುಕೊಂಡಿದೆ. ರೋಟರಿ ಕ್ಲಬ್‌ನ ಪ್ರಾಯೋಜಕತ್ವದಲ್ಲಿ ರಚನೆಗೊಂಡಿರುವ ಭದ್ರ ಚಾಲೆಂಜರ್‍ಸ್ ಕಬಡ್ಡಿ ತಂಡ ಜಿಲ್ಲೆ ಹಾಗೂ ತಾಲೂಕುಮಟ್ಟದ ಕ್ರೀಡಕೂಟದಲ್ಲಿ ೧೦ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ವಲಯದ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ನಮ್ಮ ರೋಟರಿ ಕ್ಲಬ್ ಅತೀ ಹೆಚ್ಚು ಬಹುಮಾನಗಳನ್ನು ಗೆದ್ದುಕೊಂಡಿದೆ. ಶಾಲೆ, ಕಾಲೇಜು, ಸಂಘ ಸಂಸ್ಥೆಗಳ ವಿವಿಧ ಕಾರ್ಯಕ್ರಮಗಳಿಗೆ ಸಹಕಾರ, ಪ್ರಾಯೋಜಕತ್ವ ನೀಡುವ ಮೂಲಕ ರೋಟರಿ ಕ್ಲಬ್ ಬಂಟ್ವಾಳ ಸುವರ್ಣ ಸಂಭ್ರಮ ವರ್ಷವನ್ನು ಅವಿಸ್ಮರಣೀಯಗೊಳಿಸಿದೆ ಎಂದು ತಿಳಿಸಿದರು.
ಸುದ್ದಿ ಗೋಷ್ಟಿಯಲ್ಲಿ ಸುವರ್ಣ ವರ್ಷಾಚರಣೆ ಸಮಿತಿ ಡಾ ರಮೇಶಾನಂದ ಸೋಮಾಯಜಿ, ಜಿಲ್ಲಾ ಲೆಫ್ಟಿನೆಂಟ್ ಸಂಜೀವ ಪೂಜಾರಿ, ನಿಕಟಪೂರ್ವ ಕಾರ್ಯದರ್ಶಿ ಕೆ.ನಾರಾಯಣ ಹೆಗ್ಡೆ, ನಿರ್ದೇಶಕ ಧನಂಜಯ ಬಾಳಿಗ ಹಾಜರಿದ್ದರು.
Be the first to comment on "27 ರಂದು ಬಂಟ್ವಾಳ ರೋಟರಿ ಕ್ಲಬ್ ಸುವರ್ಣ ಸಂಭ್ರಮಾಚರಣೆ"