Editor: Harish Mambady
ಕೊನೆಗೂ ಬಂಟ್ವಾಳ ಪುರಸಭೆಯ ಬಜೆಟ್ ಪೂರ್ವಭಾವಿ ಸಭೆಗೆ ದಿನ ಮುಹೂರ್ತ ನಿಗದಿಯಾಗಿದೆ. ಜನವರಿ 29ರಂದು ಬೆಳಗ್ಗೆ ನಾನಾ ಸಂಘ, ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಣೆ ಕಾರ್ಯ ನಡೆಯಲಿದೆ ಎಂದು ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ತಿಳಿಸಿದ್ದಾರೆ.
2019-20 ರ ಮಾಚ್೯ವರೆಗಿನ ಅಯ – ವ್ಯಯವನ್ನು ಮಂಡಿಸಬೇಕಾಗಿದ್ದು.ಅದಕ್ಕೆ ಪೂರಕವಾದ ಸಿದ್ದತೆಯನ್ನು ಈಗಲೇ ಮಾಡಬೇಕಾಗಿದೆ. ಆದರೆ ಬಂಟ್ವಾಳ ಪುರಸಭೆ ಅಂತಹ ತಯಾರಿಯನ್ನು ಇನ್ನೂ ಮಾಡಿರಲಿಲ್ಲ.
ನಿಯಾಮಾವಳಿಯಂತೆ ಪುರಸಭಾ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರ ಹಾಗೂ ಪ.ಜಾ.ಮತ್ತು ಪಂ.ಕ್ಜೆ ಸೇರಿದ ಪ್ರಮುಖರ ಪ್ರತ್ಯೇಕ ಸಭೆ ನಡೆಸಿ ಅಲ್ಲಿ ಬರುವಂತ ಪ್ರಮುಖ ಸಲಹೆಯನ್ನು ಪರಿಗಣಿಸಿ ಪುರಸಭೆಯು ತಮ್ಮ ಅಯವ್ಯಯದಲ್ಲಿ ಅದಕ್ಕೆ ಅನುದಾನವನ್ನು ಕಾದಿರಿಸಬೇಕಾಗಿದೆ. ಈ ಪ್ರಕ್ರಿಯೆಯನ್ನು ಮುಗಿಸಿ ಬಜೆಟ್ ನ ಇತರ ಸಿದ್ದತೆಯನ್ನು ಮಾಡಬೇಕಾಗಿತ್ತು. ಆದರೆ ಬಂಟ್ವಾಳ ಪುರಸಭೆ ಸಂಘ, ಸಂಸ್ಥೆಯ ಪದಾಧಿಕಾರಿಗಳಾಗಲಿ, ಪ.ಜಾ.ಪ.ಪಂ. ಮುಖಂಡರ ಸಭೆಯನ್ನು ಈವರೆಗೂ ಕರೆದು ಯಾವುದೇ ಸಲಹೆಯನ್ನು ಪಡೆದುಕೊಂಡಿರಲಿಲ್ಲ. ಈ ಹಿಂದೆಯು ಬಜೆಟ್ ತಯಾರಿಗೆ ಮುನ್ನ ಪುರಸಭಾ ವ್ಯಾಪ್ತಿಯ ಸಂಘ ಸಂಸ್ಥೆಯ ಪದಾಧಿಕಾರಿಗಳು, ಗಣ್ಯರಿಂದ, ಪ.ಜಾ.ಪ.ಪಂ.ದ ಮುಖಂಡರ ಸಭೆ ನಡೆಸಲಾಗಿತ್ತು. ಆಗ ಪುರಸಭೆಯ ಅಭಿವೃದ್ದಿಗೆ ಸಂಬಂದಿಸಿ,ಕಸ ವಿಲೇವಾರಿ, ಪುಟ್ ಪಾತ್ ನಿರ್ಮಾಣ,ಬಂಟ್ವಾಳ ಪೇಟೆ ಅಗಲೀಕರಣ ಸೇರಿದಂತೆ ಹಲವಾರು ಸಲಹೆಗಳನ್ನು ಸಭೆಯಲ್ಲಿದ್ದ ಗಣ್ಯರು ನೀಡಿದ್ದರಾದರೂ ಅಯವ್ಯಯ ಮಂಡನೆಯಾದಾಗ ಪೂರ್ವಭಾವಿ ಸಭೆಯಲ್ಲಿ ಚರ್ಚೆಗೆ ಬಂದ ಯಾವುದೇ ಸಲಹೆಗಳನ್ನು ಬಜೆಟ್ ತಯಾರಿ ವೇಳೆ ಗಣನೆಗೆ ತೆಗೆದುಕೊಂಡಿರಲಿಲ್ಲ. ಈ ಬಾರಿಯ ಸಭೆಯಲ್ಲಾದರೂ ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ದೊರಕುವುದೇ ?
Be the first to comment on "ಬಂಟ್ವಾಳ ಪುರಸಭೆ ಬಜೆಟ್ ಪೂರ್ವಭಾವಿ ಸಭೆಗೆ ಕೊನೆಗೂ ಮುಹೂರ್ತ"