ಫರಂಗಿಪೇಟೆ ಹೆದ್ದಾರಿ ಬದಿಯಲ್ಲಿದ್ದ ಮೀನು ಮಾರುಕಟ್ಟೆಯನ್ನು ರೈಲ್ವೇ ಇಲಾಖೆ ಗುರುವಾರ ಬೆಳಿಗ್ಗೆ ತೆರವುಗೊಳಿಸಿದೆ. ಇದೇ ಸಂದರ್ಭ ಇಲಾಖೆಯ ಜಾಗಕ್ಕೆ ಗಡಿ ಗುರುತು ಮಾಡಿ ಬೇಲಿ ಹಾಕುವ ವಿಚಾರದಲ್ಲಿ ಸ್ಥಳೀಯರು ಆಕ್ಷೇಪ ಸಲ್ಲಿಸಿದರು. ಬಳಿಕ ಕಂದಾಯ ಮತ್ತು ಪೊಲೀಸ್ ಉನ್ನತ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸುಖಾಂತ್ಯಗೊಂಡಿತು.
ಮಾರುಕಟ್ಟೆಯನ್ನು ತೆರವುಗೊಳಿಸುವಂತೆ ರೈಲ್ವೇ ಇಲಾಖೆ ವಿಧಿಸಿದ್ದ ಗಡುವು ಜನವರಿ 15ಕ್ಕೆ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಬೆಳಗ್ಗೆ ರೈಲ್ವೆ ಇಲಾಖೆಯು ಮೀನು ಮಾರುಕಟ್ಟೆಯನ್ನು ತೆರವುಗೊಳಿಸಿತು. ಆದರೆ ಬೇಲಿ ಹಾಕುವ ಕಾರ್ಯಕ್ಕೆ ಮುಂದಾದಾಗ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ನೇತೃತ್ವದಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಿದರು. ಘಟನಾ ಸ್ಥಳಕ್ಕೆ ಎಸಿ ರವಿಚಂದ್ರ ನಾಯ್ಕ್ ಹಾಗೂ ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್ ಅವರು ಬೇಟಿ ನೀಡಿ, ರೈಲ್ವೇ ಇಲಾಖೆಯ ಅಧಿಕಾರಿ ಮತ್ತು ಇಂಜಿನೀಯರ್, ಸ್ಥಳೀಯ ಪಂಚಾಯತ್ ಹಾಗೂ ಸ್ಥಳೀಯರೊಡನೆ ಮಾತುಕತೆ ನಡೆಸಿದರು. ಹೆದ್ದಾರಿಯಿಂದ 13 ಅಡಿ ಬಿಟ್ಟು ಬೇಲಿ ಹಾಕುವಂತೆ ಸೂಚಿಸಿ ಸುಖಾಂತ್ಯಗೊಳಿಸಿದರು. ಬಳಿಕ ರೈಲ್ವೇ ಇಲಾಖೆ ತಮ್ಮ ಕಾರ್ಯ ಮುಂದುವರಿಸಿದರು.
Be the first to comment on "ಬೇಲಿ ಹಾಕುವ ಗೊಂದಲ – ಮಾತುಕತೆಯಲ್ಲಿ ಅಂತ್ಯ"