ಬನ್ನಿ ವಿಟ್ಲಕ್ಕೆ, ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ವೈಭವಕ್ಕೆ

ww.bantwalnews.com ಸಂಪಾದಕ: ಹರೀಶ ಮಾಂಬಾಡಿ

ವಿಟ್ಲ ವರದಿ:

ಜನವರಿ ಬಂತೆಂದರೆ, ವಿಟ್ಲದಲ್ಲಿ ಹಬ್ಬದ ಸಡಗರಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರಾ ಮಹೋತ್ಸವದ ಸಂಭ್ರಮದ ಕ್ಷಣಗಳಿಗೆ ವಿಟ್ಲ ಸಜ್ಜಾಗುತ್ತಿದೆ. ಹತ್ತೂರಿನಿಂದ ವಿಟ್ಲಕ್ಕೆ ಆಗಮಿಸಿ, ಜಾತ್ರಾ ಸಂಭ್ರಮ ಸವಿಯುತ್ತಾರೆ. ವಿಟ್ಲ ಜಾತ್ರೆಗೆ ಪರಂಪರಾಗತ ವೈಭವದ ಜೊತೆಗೆ ಐತಿಹಾಸಿಕ ಮಹತ್ವವೂ ಇದೆ. 14ರಿಂದ 22ವರೆಗೆ ವಿಟ್ಲ ಜಾತ್ರಾ ವೈಭವ. ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ, ವೈಭವದ ಜಾತ್ರೋತ್ಸವ ಕಣ್ತುಂಬಿಸಿಕೊಳ್ಳಲು ವಿಟ್ಲದ ನಂಟು ಇರುವವರಷ್ಟೇ ಅಲ್ಲ, ಜಿಲ್ಲೆಯ ಹೊರಭಾಗದ ಕುತೂಹಲಿಗರೂ ಆಗಮಿಸಲು ಸಜ್ಜಾಗಿದ್ದಾರೆ. ನೋಡಬನ್ನಿ ವಿಟ್ಲ ಜಾತ್ರೆ.

ವಿಟ್ಲ ಜಾತ್ರೆಯ ಕುರಿತು ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ವಿಟ್ಲ ಅವರು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ನೀಡಿದ ವಿವರಗಳು ಹೀಗಿವೆ.

  • ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೋತ್ಸವ .14ರಂದು ಧ್ವಜಾರೋಹಣಗೊಂಡು .22ರವರೆಗೆ ವಿವಿಧ ಉತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ವಿಶೇಷವಾಗಿ .14ರಂದು ಹೊರೆಕಾಣಿಕೆ, ಭಜನೆ ಉಲ್ಪೆ ಮೆರವಣಿಗೆ ಆಗಮಿಸಲಿದೆ. ಜಾತ್ರೆಯ ಪ್ರತಿದಿನವೂ ಸಂಜೆ ಗಂಟೆ 5.30 ರಿಂದ 7 ಗಂಟೆವರೆಗೆ ಭಜನ ಮಂಡಳಿಯಿಂದ ಭಜನೆ ನೆರವೇರಲಿದೆ

.14ರಂದು 10 ಗಂಟೆಗೆ ಧ್ವಜಾರೋಹಣ ನೆರವೇರಿ, ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನ ಪರಿಷತ್ತಿನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಒಡಿಯೂರು ಶ್ರೀ, ಮಾಣಿಲ ಶ್ರೀ, ಬಾಳೆಕೋಡಿ ಶ್ರೀ ಮತ್ತು ಕಣಿಯೂರು ಶ್ರೀಗಳ ಉಪಸ್ಥಿತಿಯಲ್ಲಿ .14ರಂದು ಅರ್ಧ ಏಕಾಹ ಭಜನೆ ನಡೆಯಲಿದೆ. ಸಂಜೆ 5 ಗಂಟೆಗೆ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಹೊರೆಕಾಣಿಕೆ ಸಂಗ್ರಹಿಸಿ, ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಸೀಮೆಯ ಪ್ರತಿ ಮನೆಯಿಂದ, ಫಲವಸ್ತುಗಳ ಜತೆಯಲ್ಲಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಬಸದಿಯಿಂದ ಭಜನಾ ಉಲ್ಪೆ ಮೆರವಣಿಗೆ ಹೊರಡಲಿದೆ. ರಾತ್ರಿ 8.30 ರಿಂದ ಲಕ್ಷದೀಪೋತ್ಸವ ನಡೆಯಲಿದ್ದು ಭಕ್ತಾದಿಗಳು 5 ಹಣತೆಗಳೊಂದಿಗೆ ಆಗಮಿಸಿ ದೇವಾಲಯದ ಸುತ್ತ ಹಣತೆ ಹಚ್ಚಿ ದೀಪೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

.15, 16, 17 ರಂದು ಸಂಜೆ 6.30 ಕ್ಕೆ ನಿತ್ಯೋತ್ಸವ ನಡೆಯಲಿದ್ದು, .18 ರಂದು ರಾತ್ರಿ 8.30ಕ್ಕೆ ಕೇಪುನಿಂದ ಶ್ರೀ ಮಲರಾಯ ದೈವದ ಭಂಡಾರ ಬರಲಿದೆ. 9ಕ್ಕೆ ಬಯ್ಯದ ಬಲಿ ಉತ್ಸವ ನಡೆಯಲಿದೆ. .19 ರಂದು ಬೆಳಗ್ಗೆ 9.30ಕ್ಕೆ ದರ್ಶನ ಬಲಿ, ಬಟ್ಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ 8ಕ್ಕೆ ನಡು ದೀಪೋತ್ಸವ ನಡೆಯಲಿದ್ದು, ವಿಶೇಷವಾಗಿ ಕೆರೆ ಆಯನತೆಪ್ಪೋತ್ಸವ ನಡೆಯಲಿದೆ.

.20ರಂದು ಬೆಳಗ್ಗೆ 5ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ 9ಕ್ಕೆ ಹೂತೇರು ನಡೆಯಲಿದೆ. . 21ರಂದು ಬೆಳಗ್ಗೆ ದರ್ಶನ ಬಲಿ, ರಾಜಾಂಗಣದ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ 7.30ಕ್ಕೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಬರುವುದು, ರಾತ್ರಿ 8ಕ್ಕೆ ಮಹಾ ರಥೋತ್ಸವ, ಬೀದಿ ಮೆರವಣಿಗೆ, ಶಯನೋತ್ಸವ ನಡೆಯಲಿದೆ.

.22ರಂದು ಬೆಳಗ್ಗೆ 9ಗಂಟೆಗೆ ಕವಟೋದ್ಘಾಟನೆ, ಮಹಾಪೂಜೆ, ಕಾಲಾವಧಿ ಬಟ್ಟಲು ಕಾಣಿಕೆ, ತುಲಾಭಾರ ಸೇವೆ, ರಾತ್ರಿ 10ಕ್ಕೆ ಅವಭೃತ ಸ್ನಾನಕ್ಕೆ ಕೊಡಂಗಾಯಿಗೆ ಸವಾರಿ, ಧ್ವಜಾವರೋಹಣ, ಸಂಪ್ರೋಕ್ಷಣೆ ನಡೆಯಲಿದೆ.

.24ರಂದು ಮಧ್ಯಾಹ್ನ 1 ಗಂಟೆಗೆ ದೇವಸ್ಥಾನದ ಎದುರು ಕೇಪುವಿನ ಶ್ರೀ ಮಲರಾಯಿ ದೈವಕ್ಕೆ ನೇಮ ನಡೆಯಲಿದೆ. .25ಕ್ಕೆ ಮಧ್ಯಾಹ್ನ 2 ಗಂಟೆಗೆ ಅರಮನೆಯಲ್ಲಿ ನೇಮೋತ್ಸವ ಬಳಿಕ ಕೇಪಿಗೆ ಭಂಡಾರ ಹೊರಡುವುದು ಎಂದು ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು:

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ .15ರಂದು ನಯನಾ ಸತ್ಯನಾರಾಯಣ ಅವರಿಂದ, .15ರಂದು ಶಾಲಿನಿ ಆತ್ಮಭೂಷಣ್ ಅವರಿಂದ ಭರತನಾಟ್ಯ, .16ರಂದು ಉರಿಮಜಲು ಮಕ್ಕಳ ತಂಡದಿಂದ ಭಾವಗೀತೆ, ಭಕ್ತಿ ಗೀತೆ, .17ರಂದು ಯಕ್ಷಗಾನ ವೈಭವ, ನಾಟಕ, .18ರಂದು ಸತ್ಯಮೇವ ಜಯತೇ, .19ರಂದು ಆರ್ಕೆ.ಆರ್ಟ್ಸ್ ವಿಟ್ಲ ಅವರಿಂದ ಶ್ರೀದೇವೀ ಜಗದಂಬಿಕಾ, .20ರಂದು ವಿಆರ್ಸಿ ವಿಟ್ಲ ಅವರ ವಿಟ್ಲೋತ್ಸವ, .21ರಂದು ಬಪ್ಪನಾಟು ಮೇಳದ ಯಕ್ಷಗಾನ, .22ರಂದು ಪಂಚಶ್ರೀ ತಂಡದ ಆರ್ಕೆಸ್ಟ್ರಾ ನಡೆಯಲಿದೆ.

ಪೇಟೆಯನ್ನು ಕೇಸರಿ ಬಂಟಿಂಗ್ಸ್ ಜತೆ ಅಲಂಕರಿಸಲಾಗಿದ್ದು, ಜಾತ್ರೆಯ ಯಶಸ್ಸಿಗೆ ಪೇಟೆಯ ವ್ಯಾಪಾರಿಗಳು ಮತ್ತು ನಾಗರಿಕರೆಲ್ಲರೂ ಸಹಕರಿಸಬೇಕು ಎಂದು ಅವರು ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಟ್ಲ .ಪಂ.ಅಧ್ಯಕ್ಷ ಅರುಣ್ ಎಂ.ವಿಟ್ಲ, ಸದಸ್ಯ ವಿ.ರಾಮದಾಸ ಶೆಣೈ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಮಾನಾಥ ವಿಟ್ಲ, ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಭಜನ ಪರಿಷತ್ ಅಧ್ಯಕ್ಷ ದಿನೇಶ್ ಮಾಮೇಶ್ವರ, ವಿಟ್ಲ ಸೀಮೆ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನ ಪರಿಷತ್ ಉಪಾಧ್ಯಕ್ಷ ಶೀನಪ್ಪ ನಾಯ್ಕ, ಜಯರಾಮ ಕುಂಟ್ರಕಳ ಮತ್ತಿತರರು ಉಪಸ್ಥಿತರಿದ್ದರು.

ವಿಟ್ಲ ಸೀಮೆಯ ಉತ್ಸವ

ವಿಟ್ಲ ಸೀಮೆ ಅಂದರೆ ತುಳುನಾಡ ಪರಂಪರೆಯ ರಾಜಮನೆತನದ ಆಳ್ವಿಕೆಯ ಸಾಕ್ಷಿಯಾಗಿರುವ ಎರಡು ಸಾವಿರ ಸೀಮೆಯೆಂದು ಕರೆಯಲ್ಪಡುತ್ತಿದ್ದ 17 ಗ್ರಾಮಗಳನ್ನೊಳಗೊಂಡಿದ್ದ ಭೂಭಾಗ. ಇಂದು ಈ ಸೀಮೆಯ ಕೆಲ ಭಾಗಗಳು ಕೇರಳಕ್ಕೆ ಸೇರಿಕೊಂಡಿದೆ. ಶೈವ, ವೈಷ್ಣವ, ಸಾಧಾರಣ ಎಂಬ ಪ್ರಶಂಸೆಗೆ ಪಾತ್ರರಾದ ವಿಟ್ಲ ಅರಸು ವಂಶಜರು 5 ವೈಷ್ಣವ ದೇಗುಲ ಮತ್ತು 6 ಶಿವನ ದೇಗುಲಗಳನ್ನು ಸಂಪ್ರದಾಯನಿಷ್ಠರಾಗಿ ನಡೆಸಿಕೊಂಡು ಬಂದವರು. ಇವರ ಆಳ್ವಿಕೆಯಲ್ಲೇ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವೂ ಸಂಪ್ರದಾಯಬದ್ಧವಾದ ಭಕ್ತಿಯ, ಕಾರಣಿಕ ಕ್ಷೇತ್ರವಾಗಿ ಭಕ್ತರ ಸಂಕಷ್ಟಗಳನ್ನು ಈಡೇರಿಸುವ ಸನ್ನಿಧಿ.

ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಎಂಬ ಶಿವನ ಪಂಚಸ್ವರೂಪಗಳು ಭಾರತೀಯ ಪರಂಪರೆಯಲ್ಲಿ ಶಾಶ್ವತವಾಗಿ ಪಂಚತತ್ವಗಳನ್ನು ಪ್ರತಿನಿಧೀಕರಿಸುವ ಮೂರ್ತ ಸ್ವರೂಪಗಳು.

*****

ಪ್ರಿಯ ಓದುಗರೇ,

ಮೂರನೇ ವರ್ಷದಲ್ಲಿ ಮುನ್ನಡೆಯುತ್ತಿರುವ www.bantwalnews.com ಬೆಳವಣಿಗೆಗೆ ನಿಮ್ಮ ಸಹಕಾರವೂ ಅಗತ್ಯ.  ಆರ್ಥಿಕ ನೆರವು ಬಹುಮುಖ್ಯ. ಓದುಗ ಹಿತೈಷಿಗಳು ಖಂಡಿತಕ್ಕೂ ಹೆಗಲು ಕೊಡುವಿರಿ ಎಂದು ನಂಬಿದ್ದೇನೆ.  ತಮ್ಮ ಪುಟ್ಟ ಕಾಣಿಕೆಯಿಂದ ಬಂಟ್ವಾಳ ನ್ಯೂಸ್ ಮತ್ತಷ್ಟು ಅಂದವಾಗಿ ಮೂಡಿಬರಲು ಸಾಧ್ಯ. ನೆರವು ನೀಡುವುದಿದ್ದರೆ ಅಕೌಂಟ್ ನಂಬ್ರ ಹೀಗಿದೆ. Harish M G,  KARNATAKA BANK Account No: 0712500100982501  IFSC Code: KARB0000071

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬನ್ನಿ ವಿಟ್ಲಕ್ಕೆ, ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ವೈಭವಕ್ಕೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*