ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ), ಬಂಟ್ವಾಳ ಆಶ್ರಯದಲ್ಲಿ ನಡೆದ ಕರಾವಳಿ ಕಲೋತ್ಸವ 2018ರ ನಾಟಕ ಸ್ಪರ್ಧೆಯಲ್ಲಿ ಬಿ.ಸಿ.ರೋಡ್ ರಂಗಭೂಮಿ ಅಭಿನಯದ ಅರುಣ್ಚಂದ್ರ ಬಿ.ಸಿ.ರೋಡ್ ರಚಿಸಿ, ನಿರ್ದೇಶಿಸಿದ ನಾಟಕ ಸೇಲೆ ಸುಂದರೆ ಪ್ರಥಮ ಬಹುಮಾನ ಗಳಿಸಿದೆ.
ತೆಲಿಕೆದ ಕಲಾವಿದೆರ್ ಕೊಯ್ಲ ಅಭಿನಯದ ಪುರುಷೋತ್ತಮ ಕೊಯ್ಲ ರಚಿಸಿ ನಿರ್ದೇಶಿಸಿರುವ ನಾಟಕ ನಿಕುಲು ಎನ್ನಿಲೆಕತ್ತ್ ದ್ವಿತೀಯ ಸ್ಥಾನಿಯಾಯಿತು.
ತೃತೀಯ ಬಹುಮಾನವನ್ನು ಜಯಭಾರತ ಕಲಾವೃಂದ ಕೊಡ್ಮಾಣ್ ಇವರ ನವೀನ್ ಮಾರ್ಲ ಕೊಡ್ಮಾಣ್ ರಚಿಸಿ ನಿರ್ದೇಶಿಸಿರುವ ನಾಟಕ ಮಾಮಿ ಉಲ್ಲೇರಾ ನಾಟಕ ಪಡೆದುಕೊಂಡಿದೆ.
ಉತ್ತಮ ಕಥೆ ನವೀನ್ ಮಾರ್ಲ ಕೊಡಂಗೆ (ಮಾಮಿ ಉಲ್ಲೇರಾ) ಅವರಿಗೆ ಲಭಿಸಿದರೆ, ಅತ್ಯುತ್ತಮ ನಿರ್ವಹಣೆ : ರಂಗ ಭೂಮಿ ಬಿ.ಸಿ.ರೋಡ್ (ಸೇಲೆ ಸುಂದರೆ) ಪಡೆದುಕೊಂಡಿತು. ಅತ್ಯುತ್ತಮ ನಿರ್ದೇಶನ: ಅರುಣ ಚಂದ್ರ ಬಿ.ಸಿ.ರೋಡ್ (ಸೇಲೆ ಸುಂದರೆ) ಪ್ರಶಸ್ತಿ ಗಳಿಸಿದರು.
ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಫಲಿತಾಂಶ:
ಇದೇ ವೇಳೆ ರಾಜ್ಯಮಟ್ಟದ ನೃತ್ಯ ಸ್ಪರ್ಧೇ ನಡೆದಿದ್ದು, ಪ್ರಥಮ ಸ್ಥಾನವನ್ನು ಎಕ್ಸ್ ಟ್ರಿಮ್ ಡ್ಯಾನ್ಸ್ ಕ್ರಿವ್ ಬಿ.ಸಿ ರೋಡ್ ಪಡೆದಿದೆ. ದ್ವಿತೀಯ ಶಿವಂ ಡ್ಯಾನ್ಸ್ ಆಕಾಡೆಮಿ ಸುಬ್ರಮಣ್ಯ ಮತ್ತು ತೃತೀಯ ಮುರಳಿ ಬ್ರದರ್ಸ್ ಪುತ್ತೂರು ಪಡೆದುಕೊಂಡರು.
ಜಿಲ್ಲಾ ಮಟ್ಟದ (ಸಿಂಗಾರಿ ಮೇಳ) ಚೆಂಡೆ ಸ್ಪರ್ಧೆ:
ಜಿಲ್ಲಾ ಮಟ್ಟದ ಸಿಂಗಾರಿಮೇಳ ಚೆಂಡೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶ್ರೀ ಶಬರಿ ಚೆಂಡೆ ಬಳಗ ಮುಳ್ಳಕಾಡು ಪಡೆದಿದ್ದರೆ, ದ್ವಿತೀಯ ಶ್ರೀ ಗುರು ಚೆಂಡೆ ಬಳಗ ಪೆರ್ಮಂಕಿ, ತೃತೀಯ ಶ್ರೀ ಭದ್ರಕಾಳಿ ಚೆಂಡೆ ಬಳಗ ಮಂಗಳೂರು ಪಡೆದುಕೊಂಡಿದೆ ಎಂದು ಚಿಣ್ಣರ ಮೇಳ ಮೋಕೆದಕಲಾವಿದೆರ್ ಸ್ಥಾಪಕ ಮೋಹನದಾಸ ಕೊಟ್ಟಾರಿ ಮತ್ತು ಕಲೋತ್ಸವದ ಅಧ್ಯಕ್ಷ ಸುದರ್ಶನ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ಸೇಲೆಸುಂದರೆ ಪ್ರಥಮ, ನಿಕುಲು ಎನ್ನಿಲೆಕ್ಕತ್ತ್ ದ್ವಿತೀಯ"