ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಕೃಷಿ ಬದುಕಿನ ಮಾರ್ಗ, ಸಾಧ್ಯತೆಗಳು, ಸವಾಲುಗಳ ಕುರಿತು ಕೇಂದ್ರ ಸಾವಯವ ಕೃಷಿ ಮಿಷನ್ ಪೂರ್ವಾಧ್ಯಕ್ಷ ಆನಂದ ಸಂವಾದ ನಡೆಸಿದರು.
ಶ್ರೀರಾಮ ಪದವಿ ಕಾಲೇಜಿನ ಪ್ರಕೃತಿ ಪರಿಸರ ಸಂಘ, ಮಂಥನ ಕಲ್ಲಡ್ಕ ಇದರ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರಸ್ತುತ ಕಾಲಘಟ್ಟದಲ್ಲಿ ಕೃಷಿ ಒಂದು ಸವಾಲಿನ ವಿಷಯವಾದರೂ ಬದುಕನ್ನು ಕಟ್ಟಿಕೊಡುವ ಕ್ಷೇತ್ರವಾಗಿದೆ. ಕೃಷಿಯಲ್ಲಿ ಇಂದಿನ ಜನತೆ ತೊಡಗಿಕೊಂಡರೆ ಅವಕಾಶಗಳು ವಿಪುಲವಾಗಿದೆ. ಅನುಸರಿಸುವ ವಿಧಾನ ಸರಿಯಿದ್ದರೆ ಕೃಷಿ ಉತ್ಪನ್ನಗಳಿಂದ ಲಕ್ಷಾಂತರ ಹಣ ಸಂಪಾದನೆ ಮಾಡಬಹುದು ಎಂದರು. ಇದಕ್ಕಾಗಿ ನಮ್ಮ ಪ್ರತಿಭೆ-ಬುದ್ಧಿಮತ್ತೆಯನ್ನು ಉಪಯೋಗಿಸಬೇಕಿದೆ. ವಿಶೇಷವಾಗಿ ಮಹಿಳೆಯರು ಈ ವೃತ್ತಿ ಶ್ರೇಷ್ಠವೆಂಬುದನ್ನು ಮನಗಾಣಬೇಕಿದೆ ಎಂದರು.
ಅಧ್ಯಕ್ಷತೆಯನ್ನು ಪದವಿ ವಿಭಾಗದ ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ವಹಿಸಿದ್ದರು. ಪರಿಸರ ಸಂಘದ ನಿರ್ದೇಶಕರಾದ ಗಂಧರ್ವ, ರಾಷ್ಟ್ರಸೇವಿಕಾ ಸಮಿತಿಯ ಕಾರ್ಯಕಾರಣಿ ಸದಸ್ಯೆ ಡಾ. ಕಮಲಾ ಪ್ರಭಾಕರ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಸುಪ್ರೀತಾ ನಿರೂಪಿಸಿ, ಗುರುರಾಜ್ ವಂದಿಸಿದರು.
Be the first to comment on "ಬದುಕು ಕಟ್ಟಿಕೊಡುವ ಕ್ಷೇತ್ರ ಕೃಷಿ: ಆನಂದ"