ಅಬುದಾಭಿ: ಯು.ಎ.ಇಯ ಶಿಲ್ಪಿ ಹಾಗೂ ರಾಷ್ಟ್ರ ಪಿತರಾಗಿರುವ ಶೈಖ್ ಝಾಯಿದ್ ಬಿನ್ ಸುಲ್ತಾನ್ ಆಲ್ ನಹ್ಯಾನ್ ರವರ ಜೀವನಚರಿತ್ರೆಯನ್ನು ಸಾರುವ ಪುಸ್ತಕ ಭಾರತದ ವಿವಿಧ ಭಾಷೆಗಳಲ್ಲಿ ಪ್ರಕಟಗೊಳ್ಳಲಿದೆ. ಮಲಯಾಳದ ಹೊರತಾಗಿ ಕನ್ನಡ, ತಮಿಳು, ಹಿಂದಿ, ಉರ್ದು ಭಾಷೆಗಳಲ್ಲಾಗಿದೆ ಪುಸ್ತಕ ಪ್ರಕಾಶನ.
ಅಬೂಬಕರ್ ಸಅದಿ ನೆಕ್ರಾಜೆ ಬರೆದ “ಶೈಖ್ ಝಾಯಿದ್; ಕಾಲತ್ತಿಂಡೆ ಕರುತ್ತ್” ಎಂಬ ಪುಸ್ತಕದ ಭಾಷಾಂತರವಾಗಿದೆ ಇದು. ಪುಸ್ತಕದ ಕನ್ನಡ ಭಾಷಾಂತರವು”2018 ಇಯರ್ ಆಫ್ ಝಾಯಿದ್” ಕೊನೆಯಲ್ಲಿ ಪ್ರಕಟಗೊಳ್ಳಲಿದೆ. ಮೂಡಬಿದ್ರೆ ದ್ಸಿಕ್ರಾ ಮುದರ್ರಿಸರಾಗಿರುವ ಜುನೈದ್ ಸಖಾಫಿ ಜೀರ್ಮುಕ್ಕಿಯವರು ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಶೈಖ್ ಝಾಯಿದ್ ರವರ ಬದುಕು, ಆಡಳಿತ, ಯು.ಎ.ಇಯ ಹುಟ್ಟು, ದೇಶದ ಪ್ರಗತಿ, ಯೋಜನೆಗಳು, ಚಟುವಟಿಕೆಗಳು, ವಿದೇಶ ಸಂಪರ್ಕ ಮುಂತಾದವುಗಳೆಲ್ಲವನ್ನೂ ಪುಸ್ತಕವು ಒಳಗೊಂಡಿದೆ.
ಮಲಯಾಳ ಪುಸ್ತಕವನ್ನು ಆರು ವರ್ಷ ಮೊದಲು ಎಂ. ಎ ಯೂಸುಫ್ ಅಲಿ ಯವರ ಸಹಕಾರದೊಂದಿಗೆ ಶೈಖ್ ನಹ್ಯಾನ್ ಬಿನ್ ಮುಬಾರಕ್ ರವರು ಬಿಡುಗಡೆಗೊಳಿ ಸೀ ಪ್ಯಾಲಸಿನಲ್ಲಿ ನಡೆದ ಸಮಾರಂಭದಲ್ಲಿ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್ ರವರಿಗೆ ಪ್ರತಿಯನ್ನು ಹಸ್ತಾಂತರಿಸಲಾಗಿತ್ತು.
Be the first to comment on "ಶೈಖ್ ಝಾಯಿದ್ ರವರ ಜೀವನ ಚರಿತ್ರೆಯ ಕನ್ನಡ ಭಾಷಾಂತರ ಅತಿ ಶೀಘ್ರದಲ್ಲೇ ಬಿಡುಗಡೆ"