ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಬಂಟ್ವಾಳ ತಾಲೂಕು ಭಜನಾ ಪರಿಷತ್ ಮತ್ತು ತಾಲೂಕಿನ ಎಲ್ಲ ಭಜನಾ ಮಂಡಳಿಗಳು ಸಂಯುಕ್ತವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನದೊಂದಿಗೆ ತಾಲೂಕಿನ ಭಜನಾ ಮಂಡಳಿಗಳ ಸಮಾಲೋಚನಾ ಸಭೆ ಮತ್ತು ಬಂಟ್ಬಾಳ ತಾಲೂಕು ಭಜನಾ ಪರಿಷತ್ ಸಭೆಯು ಬಂಟ್ವಾಳದಲ್ಲಿ ಬುಧವಾರ ನಡೆಯಿತು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಶ್ರದ್ಧೆ, ಭಕ್ತಿಯಿಂದ ಭಜನೆ ಮಾಡಿದಾಗ ನಮ್ಮ ಮನಸಿನಲ್ಲಿ ಪರಿವರ್ತನೆಯಾಗಳು ಸಾಧ್ಯ ಎಂದರು. ಮುಂದಿನ ದಿನಗಳಲ್ಲಿ ಡಾ.ವಿರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಧರ್ಮಸ್ಥಳ ದಲ್ಲಿ ಭಜನಾ ಸಭೆ ನಡೆಯಲಿದೆ ಎಂದರು.
ಭಜನಾ ಕರ್ತವ್ಯಗಳು, ಕ್ರಮ ಹಾಗೂ ಸಂಸ್ಕೃತಿ -ಸಂಸ್ಕಾರದ ಬಗ್ಗೆ ಮಾಹಿತಿ ನೀಡಿದರು. ಬಂಟ್ವಾಳ ತಾಲೂಕು ಭಜನಾ ಪರಿಷತ್ನ ಅಧ್ಯಕ್ಷ ಶಶಿಧರ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಸಂಪನ್ಮೂಲಗಳ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ಧರ್ಮಸ್ಥಳ ಭಜನಾ ಪರಿಷತ್ ನ ಅಧ್ಯಕ್ಷ ಬಾಲಕೃಷ್ಣ ಪಂಜ, ಸದಸ್ಯ ಶ್ರೀನಿವಾಸ್ ರಾವ್, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಕೆ., ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷ ಪ್ರಕಾಶ್ ಕಾರಂತ, ಸದಸ್ಯ ಆನಂದ, ರವೀಂದ್ರ ಕಂಬಳಿ, ಹಿರಿಯ ವೈದ್ಯ ಬಿ.ವಿ.ವಸಂತ ಬಾಳಿಗ, ಕೇಂದ್ರ ಒಕ್ಕೂಟ ಸಮಿತಿಯ ಬಂಟ್ವಾಳ ತಾಲೂಕು ಅಧ್ಯಕ್ಷ ಸದಾನಂದ ನಾವೂರು, ಪುರಸಭಾ ಸದಸ್ಯ ಜನಾರ್ದನ ಚಂಡ್ತಿಮಾರ್ ಉಪಸ್ಥಿತರಿದ್ದರು.
ಬಂಟ್ವಾಳ ವಲಯದ ಯೋಜನಾಕಾರಿ ಜಯಾನಂದ ಪಿ. ಸ್ವಾಗತಿಸಿ, ಸಿದ್ಧಕಟ್ಟೆ ವಲಯದ ಮೇಲ್ವಿಚಾರಕಿ ಹರಿಣಾಕ್ಷಿ ವಂದಿಸಿದರು. ಮೇಲ್ವಿಚಾರಕ ಶಶಿಧರ್ ನಿರೂಪಿಸಿದರು.
Be the first to comment on "ಭಜನಾ ಮಂಡಳಿಗಳ ಸಮಾಲೋಚನಾ ಸಭೆ"