ಡಿ.30ರವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ನಡೆಯುತ್ತಿರುವ ಕರಾವಳಿ ಕಲೋತ್ಸವದ ನಾಲ್ಕನೇ ದಿನ ನಾಟಕೋತ್ಸವ ಆರಂಭಗೊಂಡಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ.ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಳು ಭಾಷೆ ಉಳಿದರೆ ಮಾತ್ರ ತುಳು ಸಂಸ್ಕೃತಿ ಉಳಿಯುತ್ತದೆ. ಉತ್ತಮ ಸಂಸ್ಕಾರ ಕೊಡುವ ಕನ್ನಡ ಸಂಸ್ಕೃತಿಯೂ ಇಲ್ಲಿ ಸಾಕಾರ ಆಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ರತ್ನಗಿರಿ ಉದ್ಯಮಿ ಚಿತ್ತರಂಜನ ಶೆಟ್ಟಿ ನುಲುಯಾಳುಗುತ್ತು ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿ ಯಾವಾಗಲೂ ಒಳ್ಳೆಯದಲ್ಲ. ತುಳುವ ಸಂಸ್ಕೃತಿಯೇ ಅಂದ. ಮಕ್ಕಳ ಭವಿಷ್ಯಕ್ಕೆ ಅದು ದಾರಿ ಮಾಡುತ್ತದೆ ಎಂದು ಹೇಳಿದರು.
ವಿಶ್ವ ತುಳುವೆರೆ ಆಯನೊ ಕೂಟದ ಸಂಚಾಲಕ ಡಾ. ರಾಜೇಶ್ ರೈ ಬದಿಯಡ್ಕ ಮಾತನಾಡಿ, ಧರ್ಮ, ಜಾತಿ ಹೆಸರಲ್ಲಿ ಹೊಡೆದಾಡನೆ ನಾವೆಲ್ಲರೂ ಒಂದೇ ಎನ್ನುವ ಭ್ರಾತೃತ್ವ ಇರಲಿ ಎಂದರು.
ತುಳುವಸಿರಿ ರಾಷ್ಟ್ರಪ್ರಶಸ್ತಿ ವಿಜೇತೆ ಡ್ಯಾನ್ಸಿಂಗ್ ಸ್ಟಾರ್ ಆದ್ವಿಕಾ ಶೆಟ್ಟಿ, ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಕರಾವಳಿ ಕಲೋತ್ಸವದ ಅಧ್ಯಕ್ಷ ಸುದರ್ಶನ ಜೈನ್, ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ. ಗೌರವಾಧ್ಯಕ್ಷ ಪಿ.ಜಯರಾಮ ರೈ ಉಪಸ್ಥಿತರಿದ್ದರು. ರಾಜೇಶ್ ಕೊಟ್ಟಾರಿ ಸ್ವಾಗತಿಸಿದರು. ಲೋಕೇಶ್ ಸುವರ್ಣ ವಂದಿಸಿದರು. ರಾಜೇಶ್ ಕೊಟ್ಟಾರಿ ನಿರೂಪಿಸಿದರು. ಸಂತೋಷ್ ಕುಲಾಲ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ರಂಗಭೂಮಿ ಕಲಾವಿದ ಕೃಷ್ಣಪ್ಪ ಕುಲಾಲ್ ತುಂಬೆ ಅವರನ್ನು ಸನ್ಮಾನಿಸಲಾಯಿತು. ಬಳಿಕ ಕಲಾನಿಕೇತನ ಕಲ್ಲಡ್ಕ ಅವರಿಂದ ಭರತನೃತ್ಯ ವೈಭವ, ಜಯಭಾರತ ಕಲಾವೃಂದ ಕೊಡ್ಮಾಣ್ ಅವರಿಂದ ಮಾಮಿ ಉಲ್ಲೇರ ನಾಟಕ ನಡೆಯಿತು.
Be the first to comment on "ಕರಾವಳಿ ಕಲೋತ್ಸವದಲ್ಲಿ ನಾಟಕೋತ್ಸವ ಉದ್ಘಾಟನೆ"