ಸಂಘಟನೆ, ನೇತಾರರಿಗೆ ಪ್ರಥಮ ಸ್ಥಾನ ಹಾಗೂ ಧರ್ಮ, ಪ್ರವಾದಿಗಳಿಗೆ ದ್ವಿತೀಯ ಸ್ಥಾನ ನೀಡುತ್ತಿರುವುದು ವರ್ತಮಾನ ಕಾಲದ ವಿಪರ್ಯಾಸವಾಗಿದೆ ಎಂದು ಕೇರಳದ ಹಾಫಿಲ್ ಶಫೀಕ್ ಅಲ್ ಖಾಸಿಮಿ ಅಭಿಪ್ರಾಯಪಟ್ಟರು.
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ನೇರಳಕಟ್ಟೆ ಸೌಹಾರ್ದ ಮೈದಾನದ ಕೊಡಾಜೆ ಹಂಝ ಅಫ್ನಾನ್ ವೇದಿಕೆಯಲ್ಲಿ ಸೋಮವಾರ ರಾತ್ರಿ ನಡೆದ ಪ್ರವಾದಿ ಸಂದೇಶ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗೈದ ಅವರು ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವುದೇ ಧರ್ಮದ ತಿರುಳಾಗಿದ್ದು ನಾವೆಲ್ಲರೂ ನ್ಯಾಯ ನೀತಿ ಪಾಲನೆಗೆ ಕಟಿಬದ್ದರಾಗಬೇಕು ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಕೌನ್ಸಿಲ್ ನ ರಾಜ್ಯ ಸಮಿತಿ ಸದಸ್ಯ ಜಾಫರ್ ಸ್ವಾದಿಕ್ ಫೈಝಿ ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷ ಹನೀಫ್ ಮುಸ್ಲಿಯಾರ್ ಉದ್ಘಾಟಿಸಿದರು. ಕೊಡಾಜೆ ಬದ್ರಿಯ ಜುಮಾ ಮಸೀದಿ ಅದ್ಯಕ್ಷ ಹಾಜಿ ಇಬ್ರಾಹಿಂ ರಾಜ್ ಕಮಲ್, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಲತೀಫ್ ನೇರಳಕಟ್ಟೆ, ಪಿಎಫ್ಐ ರಾಜ್ಯ ಸಮಿತಿ ಸದಸ್ಯ ಶರೀಫ್ ಕೊಡಾಜೆ, ಜಿಲ್ಲಾದ್ಯಕ್ಷ ಇಜಾಝ್ ಅಹ್ಮದ್, ಕಲ್ಲಡ್ಕ ವಲಯಾದ್ಯಕ್ಷ ಝಕರಿಯ ಗೋಳ್ತಮಜಲು, ಎಸ್ಡಿಪಿಐ ಜಿಲ್ಲಾ ಸದಸ್ಯ ಹನೀಫ್ ಖಾನ್ ಕೊಡಾಜೆ, ಹಾಗೂ ಕೌನ್ಸಿಲ್ ನ ಜಿಲ್ಲಾ ಸದಸ್ಯ ಅಬ್ದುಲ್ಲಾ ಮದನಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು.
ಇಮಾಮ್ಸ್ ಕೌನ್ಸಿಲ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ರಫೀಕ್ ದಾರಿಮಿ ಸ್ವಾಗತಿಸಿ, ಕಾರ್ಯದರ್ಶಿ ಖಾದರ್ ಮುಸ್ಲಿಯಾರ್ ವಂದಿಸಿದರು. ಅಶ್ರಫ್ ಅರಬಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ನೇರಳಕಟ್ಟೆ: ಪ್ರವಾದಿ ಸಂದೇಶ ಕಾರ್ಯಕ್ರಮ"