ಮಂಗಳೂರು – ಧರ್ಮಸ್ಥಳ ಮಾರ್ಗದಲ್ಲಿ ಸಾರಿಗೆ ಬಸ್ ಗಳನ್ನು ಹೆಚ್ಚುವರಿಯಾಗಿ ಒದಗಿಸಿ, ಸ್ಥಳೀಯ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂಬ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮನವಿಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸಮ್ಮತಿ ಸೂಚಿಸಿದ್ದಾರೆ.
ಕ.ರಾ.ಸಾ.ಸಂಸ್ಥೆಗೆ ಲಾಭದಾಯಕ ರೂಟಾಗಿರುವ ಮಂಗಳೂರು-ಧರ್ಮಸ್ಥಳ ಮಧ್ಯೆ ಓಡಾಡುತ್ತಿದ್ದ ಬಸ್ ಗಳ ಪೈಕಿ ಕೆಲ ಬಸ್ ಗಳನ್ನು ಸಾರಿಗೆ ಸಂಸ್ಥೆ ಕಡಿತಗೊಳಿಸಿರುವುದನ್ನು ಪುನರಾರಂಭಿಸಲು ಕ್ರಮ ಕೈ ಗೊಳ್ಳುವಂತೆ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರನ್ನು ಸೋಮವಾರ ಖುದ್ದು ಭೇಟಿಯಾಗಿ ಮನವಿ ಮೂಲಕ ಒತ್ತಾಯಿಸಿದ್ದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಸಚಿವರು ತಕ್ಷಣ ಕ್ರಮಕ್ಕೆ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ ಹಲವು ದಿನಗಳಿಂದ ಮಂಗಳೂರು -ಧರ್ಮಸ್ಥಳ ರೂಟಿನ ಕೆಲ ಸಾರಿಗೆ ಬಸ್ ಗಳನ್ನು ಕಡಿತಗೊಳಿಸಿರುವ ಹಿನ್ನಲೆಯಲ‌್ಲಿ ನಿತ್ಯ ಪಯಾಣಿಕರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದು. ಈ ಬಗ್ಗೆ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಶಾಸಕರು ಬೆಳಗಾವಿಯಲ್ಲಿ ಸಚಿವ ತಮ್ಮಣ್ಣ ಅವರನ್ನು ಭೇಟಿಯಾಗಿ ಈ ರೂಟಿನಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗಳನ್ನು ಕಡಿತಗೊಳಿಸಿರುವಿದರಿಂದ ಅಗುತ್ತಿರುವ ಸಮಸ್ಯೆಯ ಬಗ್ಗೆ ನೇರವಾಗಿ ಗಮನಸೆಳೆದು ತಕ್ಷಣ ಹೆಚ್ಚುವರಿ ಬಸ್ ಗಳ ಪುನರಾರಂಭಕ್ಕೆ ಒತ್ತಾಯಿಸಿದರು.
ಕಳೆದ ವಾರ ಈ ಭಾಗದ ನಿತ್ಯ ಪ್ರಯಾಣಿಕರು,ವಿದ್ಯಾರ್ಥಿಗಳು ಸಾರಿಗೆ ಸಚಿವರಿಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿ ಮುಂದಿನ ಏಳು ದಿನದ ಒಳಗೆ ಬಸ್ ವ್ಯವಸ್ಥೆ ಕಲ್ಪಿಸದಿದ್ದರೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದರು. ಈ ರಸ್ತೆಯಲ್ಲಿ ವೇಗದೂತ ,ಗ್ರಾಮಾಂತರ ಸಾರಿಗೆ ಬಸ್ ಗಳು ಓಡಾಡುತ್ತಿದ್ದು, ಮಂಗಳೂರು ಮತ್ತು ಧರ್ಮಸ್ಥಳ ವಿಭಾಗದ ಅಧಿಕಾರಿಗಳು ಕೆಲ ತಿಂಗಳಿನಿಂದ ಸುಮಾರು 10 ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಈಪೈಕಿ ಗ್ರಾಮಾಂತರ ಸಾರಿಗೆ ಬಸ್ ನ್ನೇ ಕಡಿತಗೊಳಿಸಿರುವುದಕ್ಕೆ ಸಚಿವರಿಗೆ ಕಳುಹಿಸಿದ್ದ ಪತ್ರದಲ್ಲಿ ವಿವರಿಸಲಾಗಿತ್ತು.
ಸ್ಥಳೀಯ ಶಾಲೆಯೊಂದರ 9 ನೇ ತರಗತಿಯ ವಿದ್ಯಾರ್ಥಿನಿ ಸಪ್ತಮಿ ಸಾರಿಗೆ ಸಚಿವ ತಮ್ಮಣ್ಣ ಅವರಿಗೆ ಬಸ್ ಕಡಿತಗೊಂಡು ಉಂಟಾಗುವ ಸಮಸ್ಯೆಯ ಬಗ್ಗೆ ಸುದೀರ್ಘ ಪತ್ರ ಬರೆದಿದ್ದಳು.ಇದಕ್ಕೆ ಸ್ಪಂದಿಸಿದ ಸಚಿವರು ಕ್ರಮಕ್ಕೆಪುತ್ತೂರು ವಿಭಾಗದ ಅಧಿಕಾರಿಗಳಿಗೆ ಕ್ರಮಕ್ಕೆ ಅದೇಶ ನೀಡಿದ್ದರು.
Be the first to comment on "ಧರ್ಮಸ್ಥಳ – ಮಂಗಳೂರು ಮಧ್ಯೆ ಹೆಚ್ಚುವರಿ ಸಾರಿಗೆ ಬಸ್"