ಬಂಟ್ವಾಳ, ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ವತಿಯಿಂದ ಡಿ.21ರಿಂದ 31ರ ವರೆಗೆ ನಡೆಯುವ ಕರಾವಳಿ ಕಲೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.
ಕರಾವಳಿ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಕರಾವಳಿ ಕಲೋತ್ಸವ ಮೈದಾನದಲ್ಲಿ ಸಿದ್ಧತಾ ಸಭೆ ಜರುಗಿತು.
ಕಾರ್ಯಕ್ರಮದ ತಯಾರಿ ಬಗ್ಗೆ ಸ್ವಾಗತ ಸಮಿತಿ ಮತ್ತು ವಿವಿಧ ಸಮಿತಿಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಜವಾಬ್ದಾರಿಗಳನ್ನು ಹಂಚಲಾಯಿತು. ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಮೋಹನದಾಸ್ ಕೊಟ್ಟಾರಿ ಅವರು ಸಮಿತಿ ಪದಾಧಿಕಾರಿಗಳ ಕೆಲಸ- ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ಸ್ವಾಗತ ಸಮಿತಿಯ ಅಧ್ಯಕ್ಷ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ, ಉಪಾಧ್ಯಕ್ಷ ರಿಯಾಝ್ ಹುಸೇನ್, ಸ್ವಾಗತ ಸಮಿತಿ ಸಂಚಾಲಕ ಎಂ. ಪರಮೇಶ್ವರ ಮೂಲ್ಯ, ಊಟೋಪಚಾರ ಸಮಿತಿ ಸಂಚಾಲಕ ಸದಾನಂದ ಶೆಟ್ಟಿ, ಆರ್ಥಿಕ ಸಮಿತಿ ಸಂಚಾಲಕ ಪ್ರಕಾಶ್ ಶೆಟ್ಟಿ ಶ್ರೀ ಶೈಲ, ವೇದಿಕೆ ಸಮಿತಿ ಸಂಚಾಲಕ ಸುರೇಶ್ ಪೂಜಾರಿ, ಅತಿಥಿ ಸತ್ಕಾರ ಸಮಿತಿ ಸಂಚಾಲಕ ಪ್ರಭಾಕರ್ ಪ್ರಭು, ಕಲೋತ್ಸವ ಸಮಿತಿ ಗೌರವಾಧ್ಯಕ್ಷ ಜಯರಾಮ ರೈ, ಸಂಯೋಜನಾ ಸಮಿತಿಯ ಸದಸ್ಯರಾದ ಶಿವ ಪ್ರಸಾದ್ ಕೊಟ್ಟಾರಿ, ಪರಮೇಶ್ವರ ಮೂಲ್ಯ, ಜಯಾನಂದ ಪೆರಾಜೆ, ಫಾರೂಕ್ ಬಂಟ್ವಾಳ, ಮಧುಸೂದನ್ ಶೆಣೈ, ಪುರುಷೋತ್ತಮ್ ಸಾಲ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅನಿತಾ ಎನ್. ಭಂಡಾರಿ, ಜಯಂತ್ ಕಾಮಾಜೆ, ಹಮೀದ್ ಮುನ್ನೂರು ಸಭೆಯಲ್ಲಿ ಭಾಗವಹಿಸಿದರು.
ಕಲೋತ್ಸವ ಪ್ರಯುಕ್ತ ಗಾಣದಪಡ್ಪು ಮೈದಾನದಲ್ಲಿ ಬೃಹತ್ ಜೇಂಟ್ ವೀಲ್, ಬ್ರೇಕ್ ಡ್ಯಾನ್ಸ್, ಡ್ರಾಗನ್ ಟ್ರೈನ್, ಕೋಲಂಬಸ್, ಪುಠಾಣಿ ರೈಲು ಮೊದಲಾದ ಆಟೋಟ ಪರಿಕರಗಳು ಸಂಯೋಜಿಸಲ್ಪಟ್ಟಿದೆ.
Be the first to comment on "ಕರಾವಳಿ ಕಲೋತ್ಸವಕ್ಕೆ ಬಿ.ಸಿ.ರೋಡಿನಲ್ಲಿ ಸಕಲ ಸಿದ್ಧತೆ"