ವ್ಯಕ್ತಿಯ ಬಾಹ್ಯ ಶಕ್ತಿಗಿಂತ ಆತನಲ್ಲಿರುವ ಆಂತರಿಕ ಶಕ್ತಿಯು ಆತನನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತದೆ. ಪ್ರಬಲ ಆತ್ಮ ವಿಶ್ವಾಸ, ದೇವತಾ ಪ್ರಾರ್ಥನೆಯು ವ್ಯಕ್ತಿಯಲ್ಲಿರುವ ಆಂತರಿಕ ವೈರಿಗಳನ್ನು ಮೆಟ್ಟಿ ನಿಂತು ಆತನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತದೆ ಎಂದು ಮಂಗಳೂರು ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿ ರೆ.ಫಾ. ಡಾ. ಅಜಿತ್ ಮಿನೇಜಸ್ ಹೇಳಿದರು.
ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಥಸಂಚಲನದ ಗೌರವ ರಕ್ಷೆ ಸ್ವೀಕರಿಸಿ ಮಾತಾಡುತ್ತಿದ್ದರು.
ವಿಶೇಷ ಅಭ್ಯಾಗತರಾಗಿ ಆಗಮಿಸಿದ್ದ ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯ ಸಂಚಾಲಕರಾದ ವೇ.ಮೂ.ಜನಾರ್ದನ ವಾಸುದೇವ ಭಟ್ ರವರು ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಶಿಸ್ತು, ಸಂಯಮ,ವಿನಯ,ವಿದ್ಯೆ,ಸಂಸ್ಕಾರಕ್ಕೆ ನೀಡಬೇಕಾದ ಪ್ರಾಧಾನ್ಯತೆಗಳ ಬಗ್ಗೆ ತಿಳಿಸಿದರು.
ಬಂಟ್ವಾಳ ಟೌನ್ ರೋಟರಿ ಕ್ಲಬ್ ಅಧ್ಯಕ್ಷರಾದ ಉಮೇಶ್ ನಿರ್ಮಲ್ ಶಾಲಾ ಆಳುಪ ಸಮಾಜ ವಿಜ್ಞಾನ ಸಂಘದ ವಾರ್ಷಿಕ ಕಾರ್ಯಚಟುವಟಿಕೆಗಳ ಹಸ್ತ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿವೃತ್ತ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ, ಗ್ರಾಮ ಪಂಚಾಯತ್ ಸದಸ್ಯರಾದ ಜಯರಾಜ್, ಗೀತಾ, ವಿಶಾಲಾಕ್ಷಿ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಮಾಂಬಾಡಿ, ಜೇಸಿಐ ನೇತ್ರಾವತಿ ಅಧ್ಯಕ್ಷೆ ಸವಿತಾ ನಿರ್ಮಲ್, ಶೇಡಿಗುರಿ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಜಗದೀಶ್ ರೆಂಜೆಮಾರ್, ಮಹಿಳಾ ಮಂಡಳಿಯ ಅಧ್ಯಕ್ಷರಾದ ಶಾಲಿನಿ ರೆಂಜೆಮಾರ್ ಶಾಲಾ ವಿದ್ಯಾರ್ಥಿ ನಾಯಕ ಪವನ್ ರಾಜ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿಯವರು ವಹಿಸಿದ್ದರು.
ಶಿಕ್ಷಕ ಹರಿಪ್ರಸಾದ್ ಕುಲಾಲ್ ಸ್ವಾಗತಿಸಿ, ಮುಖ್ಯಶಿಕ್ಷಕ ಕಮಲಾಕ್ಷ ಕಲ್ಲಡ್ಕ ವಂದಿಸಿದರು. ಸುಜಾತ, ಚಿನ್ನಪ್ಪ ಜಾಲ್ಸೂರು, ವರಮಹಾಲಕ್ಷ್ಮೀ ಬಹುಮಾನಿತರ ಪಟ್ಟಿ ವಾಚಿಸಿದರು.ಭಾರತಿ, ಪ್ರಕಾಶ್, ಹರೀಶ್ ಸಹಕರಿಸಿದರು. ಸದಾಶಿವ ನಾಯಕ್ ನಿರೂಪಿಸಿದರು.
Be the first to comment on "ಆತ್ಮವಿಶ್ವಾಸ, ಆಂತರಿಕ ಶಕ್ತಿ ಜಾಗೃತಿಯಿಂದ ಉನ್ನತಿ: ರೆ.ಫಾ.ಡಾ.ಅಜಿತ್ ಮಿನೇಜಸ್"