ಸಾಹಿತ್ಯವೆಂದರೇನು? ಯುವ ಮನಸ್ಸುಗಳಿಗೆ ವೇದಿಕೆಯೊದಗಿಸಿದ ಸಮ್ಮೇಳನ

  • ಶಾಂತಪ್ಪ ಬಾಬು, ಸಜಿಪಪಡು.

ಸಾಹಿತ್ಯ ಸಮ್ಮೇಳನ ಎಂದರೆ ಉಧ್ಘಾಟನ ಕಾರ್ಯಕ್ರಮ ಆನಂತರ ನಾಲ್ಕೈದು ಗೋಷ್ಠಿ ಮುಂದೆ ವಿಶೇಷವಾಗಿ ಸಾಧನೆ ಮಾಡಿದವರಿಗೆ ಸನ್ಮಾನ ಮಧ್ಯೆ ಸಾಂಸ್ಕೃತಿಕ ಕಾರ್ಯಕ್ರಮ  ಮಧ್ಯಾಹ್ನ ಭೂರಿ ಬೋಜನ ಇಷ್ಟೇ ಅನ್ನುವುದು ಸಾಹಿತ್ಯ ಸಮ್ಮೇಳನ ಆಯೋಜಕರಲ್ಲಿ ಬೇರೂರಿದ ಮನೋಭಾವ.
ಸಾಹಿತ್ಯ ಸಮ್ಮೇಳನ ಮಾಡಿ ಮುಗಿಸಿ ಮುಂದಿನ ವರ್ಷದವರೆಗೆ ಸಾಹಿತ್ಯ ಚಟುವಟಿಕೆಗಳು ಯಾವುದು ನಡೆಸದಿರುವುದು ಎಲ್ಲಾ ಕಡೆ ಇದ್ದದ್ದೆ. ಆದರೆ ಸಾಹಿತ್ಯ ಸಮ್ಮೇಳನ ಸಾಹಿತ್ಯ ಚಟುವಟಿಕೆಗಳಿಗೆ ಪ್ರೇರೆಪಿಸುವ ಕೆಲಸ ಮಾಡಬೇಕು. ಈ ವರ್ಷ ಮಾಡಿದ ಸಾಹಿತ್ಯ ಸಮ್ಮೇಳನದಿಂದ ಶುರುವಾದ ಸಾಹಿತ್ಯ ಚಟುವಟಿಕೆಗಳು ಮುಂದಿನ ಸಾಹಿತ್ಯ ಸಮ್ಮೇಳನದ ತನಕ ನಡೆಯುತ್ತಿರುವಂತೆ ಮಾಡುವುದೇ ಸಾಹಿತ್ಯ ಸಮ್ಮೇಳನದ ಯಶಸ್ಸು ಅಡಗಿದೆ.
ಅದಕ್ಕೆ ಆಯೋಜಕರು ಮಾಡಬೇಕಾದ್ದು ಇಷ್ಟೇ, ಸಾಹಿತ್ಯ ವಲಯದಲ್ಲಿ ಗುರುತಿಸಿದವರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಾರ್ವಜನಿಕರನ್ನು, ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿ ಸಮ್ಮೇಳನವನ್ನು ಹಬ್ಬದ ರೀತಿ ಆಚರಿಸಬೇಕು.
 ಬಂಟ್ವಾಳ ತಾಲೂಕು 19ನೇ ಸಾಹಿತ್ಯ ಸಮ್ಮೇಳವು ಈ ನಿಟ್ಟಿನಲ್ಲಿ ಒಂದು ಯಶಸ್ವಿ ಪ್ರಯತ್ನ ಮಾಡಿದೆ ಎನ್ನಬಹುದು. ಸಾಹಿತ್ಯ ಯುವ ಸ್ಪಂದನ ಅನ್ನುವ ಗೋಷ್ಠಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ಗೋಷ್ಠಿ  ಆಯೋಜಿಸಿದ್ದು ಒಂದು ಸ್ತುತ್ಯಾರ್ಹ ಪ್ರಯತ್ನ ಎನ್ನಬಹುದು.
ಬಂಟ್ವಾಳ ತಾಲೂಕಿನ ವಿವಿಧ ಕಾಲೇಜಿನ ಒಟ್ಟು 11 ವಿದ್ಯಾರ್ಥಿಗಳು ಭಾಗವಹಿಸಿದ್ದು  ಆಯೋಜಕರ ಬದ್ದತೆಗೆ ಸಾಕ್ಷಿ. ಇಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಅಭಿಪ್ರಾಯ ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಇಡುವ ಮೊದಲ ಹೆಜ್ಜೆ ಎನ್ನಬಹುದು. ಈ ಮಾತು ಯಾಕೆ ಹೇಳಿದೆ ಅಂದರೆ, ಆಯೋಜಕರು ಈ ವಿದ್ಯಾರ್ಥಿಗಳಿಗೆ ಕವನ ವಾಚನಕ್ಕೆ ಆಹ್ವಾನಿಸದೆ ಸಾಹಿತ್ಯದ ಬಗ್ಗೆ ಅವರಿಗೆ ಇರುವ  ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಿದ್ದು ಮೆಚ್ಚುವ ವಿಷಯ. ಕವನ ಬರೆಯಿರಿ ಅಂದರೆ ಒಂದು ವಿಷಯವನ್ನು ಆಯ್ಕೆ ಮಾಡಿ ಅದರ ಬಗ್ಗೆ ಬರೆಯಬಹುದು. ಆದರೆ ಸಾಹಿತ್ಯದ ಬಗ್ಗೆ ಆ  ವಿದ್ಯಾರ್ಥಿಗಳ ಅಭಿಪ್ರಾಯ ನಮಗೆ ಮುಖ್ಯವಾಗಿ ಇರುವುದರಿಂದ ಆಯೋಜಕರು ಒಂದು ಒಳ್ಳೆಯ ಯಶಸ್ವಿ ಪ್ರಯತ್ನ ಮಾಡಿದ್ದಾರೆ ಎನ್ನಬಹುದು.
ಅಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ವ್ಯಕ್ತ ಪಡಿಸಿದ ಅಭಿಪ್ರಾಯಗಳು ನೂರಕ್ಕೆ ನೂರರಷ್ಟನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ ಎಂಬ ಆಶಯ ಇಟ್ಟುಕೊಳ್ಳುವುದು ತಪ್ಪು ಯಾಕೆಂದರೆ ಅವರ ಶಿಕ್ಷಣ, ಮನೆಯ ವಾತಾವರಣ, ಆಸಕ್ತಿ ಮುಂತಾದ ವಿಷಯಗಳು ಇವರ ಮೇಲೆ ಪ್ರಭಾವ ಬೀರಿ ಸಾಹಿತ್ಯ ಚಟುವಟಿಕೆಗಳಿಂದ ವಿಮುಖರಾಗುವ ಸಂಭವ ಕೂಡಾ ಇರುತ್ತದೆ. ಹಾಗೆ ಆಗದ ಹಾಗೆ ಕಾಪಾಡುವ ಜವಾಬ್ದಾರಿ ಹಿರಿಯರ, ಶಿಕ್ಷಕರ ಮನೆಯವರ ಮೇಲಿದೆ.
ಯುವ ಸ್ಪಂದನ ಗೋಷ್ಠಿಯಲ್ಲಿ ಭಾಗವಹಿಸಿದ ಒಟ್ಟು 11 ವಿದ್ಯಾರ್ಥಿಗಳಲ್ಲಿ ಮೊದಲು ಅಭಿಪ್ರಾಯ ವ್ಯಕ್ತ ಪಡಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ದಕಟ್ಟೆಯ ವಿದ್ಯಾರ್ಥಿ ಶ್ರೀ ಸುಭಾಶ್ ಬಂಗೇರ ಮತ್ತು ಮಹಿಳಾ ಪದವಿ ಕಾಲೇಜು ಮೆಲ್ಕಾರ್ ಇಲ್ಲಿಯ ವಿದ್ಯಾರ್ಥಿನಿ ಕು.ಪಾತಿಮಾತ್ ನೌಶೀನಾ ಇವರಿಬ್ಬರು ವ್ಯಕ್ತಪಡಿಸಿದ ಅಭಿಪ್ರಾಯ ನೋಡಿದರೆ ಮುಂದೆ ಕನ್ನಡ ಸಾಹಿತ್ಯಕ್ಕೆ ಒಳ್ಳೆಯ ಕೊಡುಗೆ ಎಂದೆನ್ನಬಹುದು. ಇವರು ಯೋಚಿಸಿದ ರೀತಿ ಅನನ್ಯವಾದುದು. ಹಿಂದಿನ ಕಾಲದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕಾದರೆ,ವಾರಗಟ್ಟಲೆ ತಿಂಗಳು ಗಟ್ಟಲೆ ಬೇಕಾಗಿತ್ತು ಆದರೂ ಆಗಿನ ಕಾಲದಲ್ಲಿ ಉನ್ನತ ಸಾಹಿತ್ಯಗಳು ಮೂಡಿ ಬಂದಿದೆ. ಒಂದು ರೀತಿಯಲ್ಲಿ ಭದ್ರ ಅಡಿಪಾಯ ಹಾಕಿದ ಹಾಗೆ ಆಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ ವಿದ್ಯಾರ್ಥಿಗಳು ಆಗ ಇದ್ದದ್ದೂ 24 ಗಂಟೆ ಈಗ ಇರುವುದು ಕೂಡಾ ಅಷ್ಟೇ. ಆಗಿನ ಕಾಲದ ಹಾಗೆ ಜೀವನ ನಿರ್ವಹಣೆಗೆ ಈಗ ಕಷ್ಟ ಏನಿಲ್ಲ. ಆದರೂ ಸಾಹಿತ್ಯ ಚಟುವಟಿಕೆ ಕಡಿಮೆಯಾಗಿದೆ ಅಂತ ಆತಂಕ ವ್ಯಕ್ತಪಡಿಸುತ್ತಾರೆ.
ಪಂಪ,ರನ್ನ, ಪೊನ್ನ, ಬಸವಣ್ಣನವರು ಮುಂತಾದವರು ಎಲ್ಲಿ ಹೋದರು ಅನ್ನುವ ಗಂಭೀರ ಪ್ರಶ್ನೆ ಸಾಹಿತ್ಯ ಆಸಕ್ತರಿಗೆ ಕೇಳುತ್ತಾರೆ. ಮುಂದೆ ಮುಂದುವರಿಸುತ್ತಾ ಅವರೇ ಹೇಳುತ್ತಾರೆ, ಅವರೆಲ್ಲ ಕಾಲವಾಗಿ ಹೋಗಿದ್ದಾರೆ. ಆದರೆ ಈಗ ಯಾಕೆ ಅಂತಹ ಸಾಹಿತಿಗಳು ಹುಟ್ಟುವುದಿಲ್ಲ ? ಯಾಕೆ ಅಂತಹ ಮಹಾನ್ ಕೃತಿಗಳು ಮೂಡಿಬರುವುದಿಲ್ಲ. ಈ ರೀತಿಯಾಗಿ ಸಾಹಿತ್ಯವನ್ನು ಗಂಭೀರವಾಗಿ ಆಲೋಚನೆ ಮಾಡಿದ್ದರಿಂದ ಮುಂದೊಂದು ದಿನ ಇವರಿಂದ ಒಳ್ಳೆಯ ಸಾಹಿತ್ಯ ರಚನೆಯಾಗಬಹುದೆಂದು ಆಶಿಸಬಹುದು.
ಗೋಷ್ಠಿಯಲ್ಲಿ ಭಾಗವಹಿಸಿದ ಯುವ ವಿದ್ಯಾರ್ಥಿಗಳು ಇನ್ನೊಂದು ಆತಂಕ ವ್ಯಕ್ತ ಪಡಿಸಿದ್ದು ನನಗೂ ಆಶ್ಚರ್ಯವಾಯಿತು. ಮೊಬೈಲ್ ಬಳಕೆ ಎನ್ನುವುದು ಯುವಜನತೆಯನ್ನು ತಪ್ಪು ದಾರಿಯಲ್ಲಿ ನಡೆಸುತ್ತಿದೆ ಅನ್ನುವುದು ಯುವಕರೇ ಹೇಳಿರುವುದು ಸ್ವಾಗತಾರ್ಹ ಸಂಗತಿ.
ಮೊಬೈಲ್ ಬಳಕೆ ಯುವಕರ ಸಾಹಿತ್ಯ ಚಟುವಟಿಕೆಗಳನ್ನು ಕುಂಠಿತಗೊಳಿಸುತ್ತದೆ,ಎಂಬ ಗಂಭೀರ ಆರೋಪ ಮಾಡಿದ್ದರಲ್ಲಿ ತಪ್ಪಿಲ್ಲ. ಆದರೆ ವಿವೇಚನಾತ್ಮಕವಾಗಿ ಮೊಬೈಲ್ ಬಳಸಿದರೆ ಏನು ತಪ್ಪಿಲ್ಲ ಎಂಬ ಅಭಿಪ್ರಾಯ ನನ್ನದು. ಹಾಗೆಂದು ವಿದ್ಯಾರ್ಥಿಗಳು ಹೇಳಿದ್ದರಲ್ಲಿ ಪೂರ್ತಿ ತಪ್ಪಿಲ್ಲ.ವಿದ್ಯಾರ್ಥಿಗಳು ಮೊಬೈಲ್ ನ ದುಷ್ಪರಿಣಾಮಗಳ ಒಂದು ಮುಖ ನೋಡಿದ್ದಾರೆ. ಅದರಿಂದ  ಆಗುವ ಉಪಯೋಗಗಳ ಬಗ್ಗೆ ಅಂದರೆ ಸಾಹಿತ್ಯದ ದೃಷ್ಟಿಯಲ್ಲಿ ಇದರ ಉಪಯೋಗ ತುಂಬಾ ಇದೆ ಎಂದು ನನ್ನ ಅನಿಸಿಕೆ.
ಹೇಗೆಂದರೆ ತಂತ್ರಜ್ಞಾನವನ್ನು ನಮಗೆ ಅನುಕೂಲವಾದ ರೀತಿಯಲ್ಲಿ ಉಪಯೋಗಿಸಿದರೆ ನಮಗೆ ಯಾವುದೇ ಹಾನಿಯಿಲ್ಲ. ಪ್ರಪಂಚದಲ್ಲಿ ಸಿಗುವ ಎಲ್ಲಾ ಜ್ಞಾನವನ್ನು ಮೊಬೈಲ್ ಮೂಲಕ ಪಡೆದುಕೊಳ್ಳಬಹುದು. ಅದಕ್ಕೆ ಸಾಹಿತ್ಯ ಕೂಡಾ ಹೊರತಲ್ಲ. ವಾಪ್ಸಾಪ್ ಪೇಸ್ಬುಕ್ ಮೂಲಕ ಸಾಹಿತ್ಯ ಗ್ರೂಪ್ ಮಾಡಿಕೊಂಡು ಅದರಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಮಾಡುವುದರಿಂದ ಸಾಹಿತ್ಯದಲ್ಲಿ ಒಳ್ಳೆಯ ರಚನೆಗಳು ಬರಬಹುದು. ಅಲ್ಲದೇ ಹಳೆಯ ಸಾಹಿತ್ಯಗಳನ್ನು ಸಂಕಲನ ಮಾಡಿ ಬ್ಲಾಗ್ ಮೂಲಕ ಬರೆಯಬಹುದು. ಅಥವಾ ಬೇರೆಯವರ ಬ್ಲಾಗ್ ಬರಹಗಳನ್ನು ಮೊಬೈಲ್ ಮೂಲಕ ಓದಬಹುದು. ಪ್ರತಿಲಿಪಿ ಅನ್ನುವ ತಂತ್ರಾಂಶದಲ್ಲಿ ಅನೇಕ ರೀತಿಯ ಸಾಹಿತ್ಯ ಪ್ರಕಾರಗಳನ್ನು ನೋಡಬಹುದು. ಹೀಗೆ ಸಾಹಿತ್ಯ ಮತ್ತು ತಂತ್ರಜ್ಞಾನ ಜೊತೆ ಜೊತೆಯಲ್ಲಿ ಸಾಗಿದರೆ ಈಗಿನ ಯುವ ಜನತೆ  ಸಾಹಿತ್ಯದಲ್ಲಿ ಒಳ್ಳೆಯ ಬೆಳವಣಿಗೆ ಕಾಣಬಹುದು. ಹಾಗೆಂದು ಮೊಬೈಲ್ ಗೆ ದಾಸನಾದರೆ ಸಾಹಿತ್ಯ ಮಾತ್ರವಲ್ಲ ಯಾವುದರಲ್ಲಿಯೂ ಉದ್ದಾರ ಆಗುವುದಿಲ್ಲ.
(ಲೇಖಕರು ಕವಿ, ಸಾಹಿತಿ. ವೃತ್ತಿಯಲ್ಲಿ ಪೊಲೀಸ್)

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಸಾಹಿತ್ಯವೆಂದರೇನು? ಯುವ ಮನಸ್ಸುಗಳಿಗೆ ವೇದಿಕೆಯೊದಗಿಸಿದ ಸಮ್ಮೇಳನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*