ಇಂಟಿಗ್ರೇಲ್ ಯೋಗ ಸಂತ್ಸoಗ (ರಿ)ಸಹಸಂಸ್ಥೆ ದಿವ್ಯಾಸ್ ನ ದಿವ್ಯಾಸ್ ವಿದ್ಯಾರ್ಥಿ ಪ್ರಶಸ್ತಿ 2018 5ನೇ ಹಂತವಾದ ಸೇವಾ ಪ್ರೊಜೆಕ್ಟ್ ನ ಅಂಗವಾಗಿ ಇದರ ಸ್ಪರ್ಧಿಯಾದ ಯಾಸರ್ ಅಪ್ರೀನ್ ರವರ ನೇತ್ರತ್ವದಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪಲ್ಲಮಜಲಿನಲ್ಲಿ ಕೈತೋಟವನ್ನು ನಿರ್ಮಿಸಲಾಯಿತು.
ಕೈತೋಟದ ಉಧ್ಘಾಟನೆಯನ್ನು ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಸುಪ್ರಿಯಾ ಎ.ಸಿ ಇವರು ನೆರವೇರಿಸಿದರು ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಉಪಸ್ತಿತರಿದ್ದ ಶಾಲಾ ಮುಖ್ಯೊಪಾಧ್ಯಾಯಿನರಾದ ಜುಲಿಯೆಟ್ ರವರು ಅಂಕದೊಂದಿಗೆ ಪರಿಸರ ಸಂರಕ್ಷಣೆಯನ್ನು ಮಾಡುತ್ತ ಇತರ ಜೀವನ ಕೌಶಲ್ಯವನ್ನು ಕಲಿಯಬೇಕು ಎಂಬ ಸಂದೇಶ ನೀಡಿದರು. ಈ ಸಂಧರ್ಭದಲ್ಲಿ ಸ್ಪರ್ಧಿ ಯಾಸರ್ ಅಫ್ರೀನ್, ಶಿಕ್ಷಕಾ ವರ್ಗದವರು, ವಿಧ್ಯಾರ್ಥಿಗಳಾದ ಪ್ರಶಾಂತ್, ತಾವೀಷ್, ಆದಿಲ್ ಮತ್ತಿತರು ಉಪಸ್ತಿತರಿದ್ದರು. ಯಾಸರ್ ಅಫ್ರೀನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು
Be the first to comment on "ದಿವ್ಯಾಸ್ ನಿಂದ ಪಲ್ಲಮಜಲು ಸರಕಾರಿ ಶಾಲೆಯಲ್ಲಿ ಕೈತೋಟ ನಿರ್ಮಾಣ"