ಮಂಗಿಲಪದವು ನ್ಯಾಶನಲ್ ಯುವಕ ಮಂಡಲ ಹಾಗೂ ರೆಡ್ ಬಾಯ್ಸ್ ಮಂಗಿಲಪದವು ಆಶ್ರಯದಲ್ಲಿ 60
ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟವು ಮಂಗಿಲಪದವು ಜಂಕ್ಷನ್ ನಲ್ಲಿ ನಡೆಯಿತು. ಪಂದ್ಯಾಟವನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ. ಎಸ್. ಮುಹಮ್ಮದ್ ಉದ್ಘಾಟಿಸಿದರು. ಯುವಕ ಮಂಡಲದ ಗೌರವಾದ್ಯಕ್ಷ ಮಹಾಲಿಂಗ ಭಟ್ ಅಧ್ಯಕ್ಷತೆ ವಹಿಸಿದ್ದರು.
28 ತಂಡಗಳು ಭಾಗವಹಿದ್ದ ಈ ಪಂದ್ಯಾವಳಿಯಲ್ಲಿ ರೆಡ್ ಬಾಯ್ಸ್ ಮಂಗಿಲಪದವು ತಂಡವು ಪ್ರಥಮ, ಗೋಲ್ಡನ್ ಸ್ಟಾರ್ ತೌಡುಗೋಳಿ ತಂಡವು ದ್ವಿತೀಯ, ಯುವಕ ಮಂಡಲ ಮಾಣಿ ತಂಡವು ತ್ರತೀಯ ಹಾಗೂ ಸಿ.ಎಫ್.ಸಿ. ಒಕ್ಕೆತ್ತೂರು ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಮಂಗಿಲಪದವು ರೆಡ್ ಬಾಯ್ಸ್ ತಂಡದ ರೋಷನ್ ಉತ್ತಮ ದಾಳಿಗಾರ, ಅಜಯ್ ಉತ್ತಮ ಹಿಡಿತಗಾರ, ಹಾಗೂ ತೌಡುಗೋಳಿ ಗೋಲ್ಡನ್ ಸ್ಟಾರ್ ತಂಡದ ನಝೀರ್ ಆಲ್ ರೌಂಡರ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
ವೀರಕಂಭ ಗ್ರಾ.ಪಂ. ಸದಸ್ಯ ಉಬೈದ್ ಕೆ, ವಿಟ್ಲ ಪಟ್ಟಣ ಪಂಚಾಯತು ಸದಸ್ಯರಾದ ಹಸೈನಾರ್ ನೆಲ್ಲಿಗುಡ್ಢೆ, ಅಬೂಬಕ್ಕರ್ ವಿ.ಎಂ, ವಿ.ಎಚ್.ಶಮೀರ್ ಪಳಿಕೆ, ಎಸ್.ಡಿ.ಪಿ.ಐ.ಮುಖಂಡ ಶಾಕಿರ್ ಅಳಕೆಮಜಲ್, ಪುತ್ತೂರು ಯುವ ಕಾಂಗ್ರೆಸ್ ಕಾರ್ಯದರ್ಶಿ ದಾವೂದ್ ಒಕ್ಕೆತ್ತೂರು, ಕಬಡ್ಡಿ ಮಾಜಿ ಆಟಗಾರ ಅಬ್ದುಲ್ ಲತೀಫ್ ಪಾತ್ರತೋಟ, ರಫೀಕ್ ಮಾಸ್ಟರ್,ಉದ್ಯಮಿಗಳಾದ ಸರವಣ ಪುತ್ತೂರು, ಸುಲೈಮಾನ್ ಒಕ್ಕೆತ್ತೂರು, ಇಕ್ಬಾಲ್ ಕೊಡಂಗೆ, ರಝಾಕ್ ಮಂಗಿಲಪದವು, ಸಂದೀಪ್, ಪ್ರದೀಪ್,ಇಸಾಕ್ ಮಂಗಿಲಪದವು, ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಬಂಟ್ವಾಳ ತಾಲೂಕು ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ಧರು.
ಸಂಘಟಕರಾದ ಸಿದ್ದೀಕ್, ಇರ್ಶಾದ್, ಶಪೀಕ್, ಹನೀಫ್, ನವಾಝ್ ಮೊದಲಾದವರು ಉಪಸ್ಥಿತರಿದ್ದರು. ಶಾಲಿ ಸ್ವಾಗತಿಸಿ,ವಂದಿಸಿದರು. ಅರಾಫತ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಮಂಗಿಲಪದವು ಕಬಡ್ಡಿ ಪಂದ್ಯಾಟ : ರೆಡ್ ಬಾಯ್ಸ್ ತಂಡಕ್ಕೆ ಪ್ರಶಸ್ತಿ"