ಪದವಿಪೂರ್ವ ಶಿಕ್ಷಣವು ವಿದ್ಯಾರ್ಥಿ ಬದುಕಿನ ಅತಿ ಮಹತ್ವದ ಘಟ್ಟವಾಗಿದ್ದು, ಈ ಹಂತದಲ್ಲಿ ವಿದ್ಯಾರ್ಥಿಗಳು ಉನ್ನತ ಗುರಿಯೆಡೆಗೆ ಸಾಗುವ ಪಥವನ್ನು ಆರಿಸಿಕೊಂಡರೆ ಬದುಕಿನಲ್ಲಿ ಅಸಾಧಾರಣ ಸಾಧನೆ ಮಾಡಬಹುದು ಎಂದು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕ ಪ್ರತಿಭಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬಡತನ ಶಾಪವಲ್ಲ್ಲ ಎಂಬುದಕ್ಕೆ ಎಂಬುದಕ್ಕೆ ಪೂರ್ವ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಬದುಕೇ ನಿದರ್ಶನ ಎಂಬುದನ್ನು ವಿದ್ಯಾರ್ಥಿಗಳು ಮನಗಂಡು ಶಿಕ್ಷಣದ ಮೂಲಕ ವ್ಯಕ್ತಿತ್ವವನ್ನು ರೂಪಿಸಲು ಮುಂದಡಿ ಇಡಬೇಕೆಂದು ಅವರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಿಟ್ಟೆಲ್ ಸ್ಮಾರಕ ಪದವಿಪೂರ್ವ ಕಾಲೇಜು, ಮಂಗಳೂರು ಇಲ್ಲಿನ ಪ್ರಾಂಶುಪಾಲ ವಿಠಲ ಎ. ಶೈಕ್ಷಣಿಕ ಉಪನ್ಯಾಸ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಂಟ್ವಾಳ ಪುರಸಭಾ ಸದಸ್ಯೆ ಝೀನತ್ ಫಿರೋಝ್ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು. ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ನಿವೃತ್ತರಾಗಲಿರುವ ಇತಿಹಾಸ ಉಪನ್ಯಾಸಕ ವೆಂಕಟೇಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ರಜನಿ ಚಿಕ್ಕಯ್ಯಮಠ, ಹಾಗೂ ಸದಸ್ಯರಾದ ಡಾ. ಶಾಮ್ ಭಟ್, ಶ್ರೀನಿವಾಸ ಪೂಜಾರಿ, ಮಹಮ್ಮದ್ ಗೂಡಿನಬಳಿ, ಸುಷ್ಮಾ ಚರಣ್, ಹರೀಶ್, ಭರತ್, ಯಶೋಧ, ಸುಜಾತ ಉಪಸ್ಥಿತರಿದ್ದರು. ಕ್ರೀಡೆ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಸಕರು ಬಹುಮಾನಗಳನ್ನು ನೀಡಿ ಅಭಿನಂದಿಸಿದರು.
ಕಾಲೇಜಿನ ಪ್ರಾಂಶುಪಾಲ ಯೂಸುಫ್ ವಿಟ್ಲ ಸ್ವಾಗತಿಸಿದರು. ಉಪನ್ಯಾಸಕ ದಾಮೋದರ ಇ. ವರದಿ ವಾಚಿಸಿದರು. ಉಪನ್ಯಾಸಕ ಬಾಲಕೃಷ್ಣ ನಾಯ್ಕ ಕೆ. ಬೆಳ್ಳಾರೆ, ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಯಶೋಧ ಕೆ. ವಂದಿಸಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ವಿದ್ಯಾರ್ಥಿಗಳಿಗೆ ಉನ್ನತ ಗುರಿಯಿರಲಿ : ಶಾಸಕ ರಾಜೇಶ್ ನಾಯ್ಕ್"