ಸ್ಪಷ್ಟ ಸುದ್ದಿಗಳಿಗೆ ಕ್ಲಿಕ್ ಮಾಡಿರಿ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷಕ್ಕೆ ಕಾಲಿಟ್ಟಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ
ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಬಂಟ್ವಾಳದ ಸಾಧಕ ಕೃಷ್ಣಕುಮಾರ ಪೂಂಜ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಗೌರವ. ನಾಳೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕಾರ ಮಾಡಲಿದ್ದಾರೆ.
ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಮೂಲಕ ಜನರಿಗೆ ಹತ್ತಿರವಾದವರು ಪೂಂಜರು. ಇವರ ಜೊತೆ ಒಟ್ಟು 63 ಮಂದಿಗೆ ಪ್ರಶಸ್ತಿ ಘೋಷಣೆಯಾಗಿದೆ.
ಸೇವಾಂಜಲಿ ಪ್ರತಿಷ್ಠಾನದ ಮೂಲಕ ಕಳೆದ ಹಲವಾರು ವರ್ಷಗಳಿಂದ ಅವರು ಸಾಮಾಜಿಕ, ಆರೋಗ್ಯ, ಶೈಕ್ಷಣಿಕ, ಧಾರ್ಮಿಕ, ರಕ್ತದಾನ ಶಿಬಿರ ಮೊದಲಾದ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ವಿಜಯಬ್ಯಾಂಕ್ ಉದ್ಯೋಗಿಯಾಗಿದ್ದ ಇವರು 2001ರಿಂದ ಸ್ವಯಂ ನಿವೃತ್ತಿ ಪಡೆದುಕೊಂಡು ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ಉಚಿತವಾಗಿ ಆರೋಗ್ಯ ತಪಾಸಣ ಶಿಬಿರ, 99 ಬಾರಿ ರಕ್ತದಾನ ಶಿಬಿರ, ಕಣ್ಣಿನ ಚಿಕಿತ್ಸಾ ಶಿಬಿರ, ದಂತ ಚಿಕಿತ್ಸಾ ಶಿಬಿರ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವಿದ್ಯಾರ್ಥಿ ವೇತನ ವಿತರಣೆ, ಜನಶ್ರೀ ವಿಮಾ ಯೋಜನೆಯಡಿ ವಿಮಾ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದಾರೆ. ಕಲೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹದಾತರಾಗಿದ್ದಾರೆ. ಇವರ ಸೇವಾ ಚಟುವಟಿಕೆಗಳನ್ನು ಗುರುತಿಸಿ ಈಗಾಗಲೇ ಗಲವಾರು ಪ್ರಶಸ್ತಿ ಸನ್ಮಾನಗಳು ಇವರನ್ನು ಅರಸಿಕೊಂಡು ಬಂದಿದೆ.
63ನೇ ಕನ್ನಡ ರಾಜ್ಯೋತ್ಸವ ಆಗಿರುವ ಕಾರಣ 63 ಗಣ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನವೆಂಬರ್ 29ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಸಾಹಿತ್ಯ
ಎಂ.ಎಸ್.ಪ್ರಭಾಕರ (ಕಾಮರೂಪಿ)
ಹಸನ್ ನಯೀಂ ಸುರಕೋಡ್
ಚ.ಸರ್ವಮಂಗಳ
ಚಂದ್ರಶೇಖ ತಾಳ್ಯ
ರಂಗಭೂಮಿ
ಎಸ್.ಎನ್.ರಂಗಸ್ವಾಮಿ
ಪುಟ್ಟಸ್ವಾಮಿ
ಪಂಪಣ್ಣ ಕೋಗಳಿ
ಸಂಗೀತ
ಅಣ್ಣು ದೇವಾಡಿಗ
ನೃತ್ಯ
ಎಂ.ಆರ್.ಕೃಷ್ಣಮೂರ್ತಿ
ಜಾನಪದ
ಗುರುವ ಕೊರಗ
ಗಂಗ ಹುಚ್ಚಮ್ಮ
ಚನ್ನಮಲ್ಲೇಗೌಡ
ಶರಣಪ್ಪ ಬೂತೇರ
ಶಂಕ್ರಮ್ಮ ಮಹಾದೇವಪ್ಪಾ
ಬಸವರಾಜ ಅಲಗೂಡ
ಚೂಡಾಮಣಿ ರಾಮಚಂದ್ರ
ಶಿಲ್ಪಕಲೆ
ಯಮನಪ್ಪ ಚಿತ್ರಗಾರ
ಬಸಣ್ಣ ಕಾಳಪ್ಪ ಕಂಚಗಾರ
ಚಿತ್ರಕಲೆ
ಬಸವರಾಜ ರೇವಣ್ಣಸಿದ್ದಪ್ಪ ಉಪ್ಪಿನ
ಕ್ರೀಡೆ
ಕೆನೆತ್ ಪೊವೆಲ್
ವಿನಯ್ ವಿ.ಎಸ್.
ಚೇತನ್ ಆರ್.
ಯಕ್ಷಗಾನ
ಹಿರಿಯಡ್ಕ ಗೋಪಾಲ ರಾವ್
ಸೀತಾರಾಮ ಕುಮಾರ ಕಟೀಲು
ಬಯಲಾಟ
ಯಲ್ಲಲ್ವಾ ರೊಡ್ಡಪ್ಪನವರ
ಭೀಮರಾಯ ಬೋರಗಿ
ಚಲನಚಿತ್ರ
ಭಾರ್ಗವ
ಜೈ ಜಗದೀಶ್
ರಾಜನ್
ದತ್ತುರಾಜ್
ಶಿಕ್ಷಣ
ಗೀತಾ ರಾಮಾನುಜಂ
ಎ.ವಿ.ಎಸ್.ಮೂರ್ತಿ
ಡಾ.ಕೆ.ಪಿ.ಗೋಪಾಲಕೃಷ್ಣ
ಶಿವಾನಂದ ಕೌಜಲಗಿ
ಇಂಜಿನಿಯರಿಂಗ್
ಪ್ರೊ.ಸಿ.ಇ.ಜಿ.ಜಸ್ಟೋ
ಸಂಕೀರ್ಣ
ಆರ್.ಎಸ್.ರಾಜಾರಾಂ
ಮೇಜರ್ ಪ್ರದೀಪ್ ಆರ್ಯ
ಸಿ.ಕೆ.ಜೋರಾಪುರ
ನರಸಿಂಹಯ್ಯ
ಡಿ.ಸುರೇಂದ್ರ ಕುಮಾರ್
ಶಾಂತಪ್ಪನವರ್ ಪಿ.ಬಿ.
ನಮಶಿವಾಯಂ ರೇಗುರಾಜ್
ಪಿ.ರಾಮದಾಸ್
ಎಂ.ಜೆ.ಬ್ರಹ್ಮಯ
ಪತ್ರಿಕೋದ್ಯಮ
ಜಿ.ಎನ್.ರಂಗನಾಥರಾವ್
ಬಸವರಾಜಸ್ವಾಮಿ
ಅಮ್ಮೆಂಬಳ ಆನಂದ
ಸಹಕಾರ
ಸಿ.ರಾಮು
Be the first to comment on "ಕೃಷ್ಣಕುಮಾರ್ ಪೂಂಜಾ ಸೇರಿದಂತೆ 63 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ"