ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಸೂದೆ ತರಬೇಕು ಎಂದು ಆಗ್ರಹಿಸಿ ನ.25ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಯೋಜಿಸಲಾಗಿರುವ ಜನಾಗ್ರಹ ಸಭೆಯಲ್ಲಿ ಬಂಟ್ವಾಳ ತಾಲೂಕಿನಿಂದಲೂ ಐದರಿಂದ ಹತ್ತು ಸಾವಿರ ರಾಮಭಕ್ತರು ಸ್ವಯಂಪ್ರೇರಿತವಾಗಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಪುತ್ತೂರು ಜಿಲ್ಲಾ ಗೋರಕ್ಷ ಪ್ರಮುಖ್ ಸರಪಾಡಿ ಆಶೋಕ್ ಶೆಟ್ಟಿ ತಿಳಿಸಿದ್ದಾರೆ.
ಬುಧವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂದು ಮಧ್ಯಾಹ್ನ 3ಗಂಟೆಗೆ ಅಂಬೇಡ್ಕರ ವೃತ್ತದಿಂದ ಕೇಂದ್ರಮೈದಾನದವರೆಗೆ ಮೆರವಣಿಗೆ ನಡೆಯಲಿದೆ ಎಂದರು. ಸಂಘಪರಿವಾರದ ಎಲ್ಲಾ ಸಂಘಟನೆಗಳು ಈ ಜನಾಗ್ರಹ ಸಭೆಗೆ ಬೆಂಬಲ ಸೂಚಿಸಿದ್ದು, ಹಿಂದೂ ಸಮಾಜೋತ್ಸವ ಮಾದರಿಯಲ್ಲಿ ಈ ಸಭೆ ನಡೆಯಲಿದೆ ಎಂದ ಅವರು,ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ತೀರ್ಪು ನೀಡುವ ಸ್ಥಿತಿಯಲ್ಲಿ ಸು.ಕೋ.ಇಲ್ಲ.ಈ ಹಿನ್ನಲೆಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರಸರಕಾರ ಮಂದಿರ ನಿರ್ಮಾಣಕ್ಕಿರುವ ಅಡೆತಡೆ ನಿವಾರಣೆ ಮಸೂದೆ ರೂಪಿಸಬೇಕು,ಈ ಕುರಿತು ಎಲ್ಲಾ ಲೋಕಸಭಾ ಸದಸ್ಯರಿಗೆ ವಿ.ಹಿಂ. ಪ .ದಿಂದ ಮನವಿ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಬಜರಂಗದಳದ ಜಿಲ್ಲಾ ಸಹಸಂಚಾಲಕ ಗುರುರಾಜ್ ಬಂಟ್ವಾಳ, ಪ್ರಮುಖರಾದ ಸಂತೋಷ ಕುಲಾಲ್ ನೇಲ್ಯಪಲ್ಕೆ,ಅಶ್ವಥ್ ಪುಂಜಾಲಕಟ್ಟೆ, ಸುರೇಶ್ ಬೆಂಜನಪದವು ಮೊದಲಾದವರಿದ್ದರು.
Be the first to comment on "ಜನಾಗ್ರಹ ಸಭೆಗೆ ಬಂಟ್ವಾಳದಿಂದ 10 ಸಾವಿರ ರಾಮಭಕ್ತರು"