ಆದಿ ಶಂಕರಾಚಾರ್ಯರ ಚಿಂತನೆಗಳು ಸಾರ್ವಕಾಲಿಕವಾಗಿ ಸಮಾಜವನ್ನು ಒಗ್ಗೂಡಿಸುವುದಕ್ಕೆ ಪ್ರೇರಕವಾಗಿವೆ. ಆತ್ಮ ಉನ್ನತಿಗಾಗಿ ಜ್ಞಾನದ ಅರಿವು ಅಗತ್ಯವಾಗಿದೆ ಎಂದು ಶ್ರೀ ಶಂಕರ ಮಠ ಕೋಟೆಕಾರ್ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ ಹೇಳಿದರು.
ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಶ್ರೀ ಶಂಕರ ಸೇವಾ ಪ್ರತಿಷ್ಠಾನ ಮಂಗಳೂರು, ಶ್ರೀ ಶೃಂಗೇರಿ ಶಂಕರ ಮಠ ಕೋಟೆಕಾರು, ಶ್ರೀ ಶಂಕರ ಸೇವಾ ಪ್ರತಿಷ್ಠಾನ ಬಂಟ್ವಾಳ ಇದರ ತಾಲೂಕು ಘಟಕದ ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿದರು.
ಬಂಟ್ವಾಳ ಘಟಕದ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಎಂ. ಈಶ್ವರ ಭಟ್ ಕೈಯ್ಯೂರು , ಡಾ| ವಿಶ್ವನಾಥ ನಾಯಕ್ ಪಾಣೆಮಂಗಳೂರು ಉಪಸ್ಥಿತರಿದ್ದರು.
ಅಶೋಕ್ ರಾವ್ ಬಿ. ಪುತ್ತೂರು ಮಾತನಾಡಿ ಜನೌಷಧಿ, ಆರೋಗ್ಯ ಕಾರ್ಡ್, ಸ್ವಚ್ಚತೆ ಹಾಗೂ ಸಾರ್ವಜನಿಕ ಪಿಂಚಣಿ ಬಗ್ಗೆ ಮಾಹಿತಿ ನೀಡಿದರು.
ಸಂಚಾಲಕ ಎ. ಕೃಷ್ಣ ಶರ್ಮ ಬಿ.ಸಿ.ರೋಡ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ರಾಜಾರಾಮ ಐತಾಳ ಕಂದೂರು ವಂದಿಸಿದರು. ಜೊತೆ ಕಾರ್ಯದರ್ಶಿ ವಿ. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಪುರುಷೋತ್ತಮ ಭಟ್ ನಿಡುವಜೆ ಭಾಗವತಿಕೆಯಲ್ಲಿ ಶರಸೇತು ಬಂಧನ ಯಕ್ಷಗಾನ ತಾಳಮದ್ದಳೆ ಜರಗಿತು. ಅರ್ಥದಾರಿಗಳಾಗಿ ಜಯರಾಮ ಶೆಟ್ಟಿ, ಕೈಯ್ಯೂರು ನಾರಾಯಣ ಭಟ್, ಪ್ರಶಾಂತ್ ಕುಮಾರ್ ಮುಡಿಪು ಭಾಗವಹಿಸಿದ್ದರು.
Be the first to comment on "ಆದಿ ಶಂಕರಾಚಾರ್ಯ ಚಿಂತನೆ ಸಾರ್ವಕಾಲಿಕ ಪ್ರೇರಕ: ಬೊಳ್ಳಾವ ಸತ್ಯಶಂಕರ"