ಬಿ.ಸಿ.ರೋಡ್ ರಕ್ತೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ರಾಧಾ ನಿಸರ್ಗ ಕಂಬನ್ಸ್ ಲಾಂಛನದಲ್ಲಿ ರಾಜೇಂದ್ರ ಯಶು ಬೆದ್ರೋಡಿ ಅವರು ನಿರ್ಮಿಸುವ ಚೊಚ್ಚಲ ತುಳು, ಕನ್ನಡ ಚಲನಚಿತ್ರ ವಿಕ್ರಾಂತ್ ತುಳು ಚಲನಚಿತ್ರದ ಮುಹೂರ್ತ ಕಾರ್ಯಕ್ರಮವನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿದರು.
ಬಳಿಕ ದೇವರ ಸನ್ನಿಧಿಯಲ್ಲಿ ಡಾ| ಪ್ರಭಾಕರ ಭಟ್ ಅವರು ಆರಂಭ ಫಲಕ ತೋರಿದರು. ದೇವದಾಸ್ ಪಾಂಡೇಶ್ವರ ಕೆಮರಾ ಚಾಲನೆ ನಡೆಸಿದರು. ನಂತರ ನಾಯಕ ನಟ-ನಟಿ ಅಭಿನಯಿಸಿದ ಪ್ರಥಮ ದೃಶ್ಯದ ಚಿತ್ರೀಕರಣ ನಡೆಯಿತು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಮಾತನಾಡಿ, ಬಂಟ್ವಾಳ ತಾಲೂಕು ಕೇಂದ್ರದಲ್ಲಿ ಚಿತ್ರ ಮಂದಿರ, ರಂಗಮಂದಿರದ ಕೊರತೆಯಿದ್ದು, ಕಲಾಮಂದಿರ ಸ್ಥಾಪನೆಯ ಚಿಂತನೆ ಇದೆ ಎಂದು ಹೇಳಿದರು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಅವರು ಮಾತನಾಡಿ, ತುಳು ಭಾಷೆಯ ಬೆಳವಣಿಗೆಗೆ ತುಳು ಚಲನಚಿತ್ರದ ಕೊಡುಗೆ ಇದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತುಳು ಭಾಷೆಯ ಪಡ್ಡಾಯಿ ಸಿನಿಮಾ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯಾಗಿದೆ ಎಂದ ಅವರು ಗುಣಮಟ್ಟದ ತುಳು ಚಿತ್ರ ನಿರ್ಮಾಣದಿಂದ ತುಳುವರೇತರನ್ನೂ ಆಕರ್ಷಿಸಿ ಜಾಗತಿಕ ಮಟ್ಟದಲ್ಲಿ ತುಳು ಭಾಷೆ ಬೆಳಗುವಂತಾಗಲಿ ಎಂದು ಹೇಳಿದರು.
ನಿರ್ಮಾಪಕ ಮತ್ತು ಚಿತ್ರನಿರ್ದೇಶಕ, ಪತ್ರಕರ್ತ ಎನ್ನಾರ್ ಕೆ. ವಿಶ್ವನಾಥ್, ಚಲನಚಿತ್ರ ನಿರ್ಮಾಪಕ ಕಿಶೋರ್ ಡಿ. ಶೆಟ್ಟಿ ಅವರು ಶುಭ ಹಾರೈಸಿದರು.
ಫರಂಗಿಪೇಟೆ ವ್ಯ.ಸೇ.ಸ.ಸಂಘ ಅಧ್ಯಕ್ಷ ಕಾಂತಪ್ಪ ಶೆಟ್ಟಿ ಕೊಡ್ಮಾಣ್, ಉದ್ಯಮಿ ಪಿ. ಲೋಕನಾಥ ಶೆಟ್ಟಿ ಬಿ.ಸಿ.ರೋಡ್, ಮಂಗಳೂರು ಚಲನಚಿತ್ರ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ದೇವದಾಸ್ ಪಾಂಡೇಶ್ವರ, ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಶ್ರೀ ರಕ್ತೇಶ್ವರಿ ದೇವಸ್ಥಾನ ಅಧ್ಯಕ್ಷ ಸೋಮಾನಾಥ ನಾಯ್ಡು, ನ್ಯಾಯವಾದಿ ಪ್ರಸಾದ್ ರೈ, ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಏಳತ್ತೂರು ಪಡುಮನೆ ಶ್ರೀಧರ ಶೆಟ್ಟಿ, ಚಿತ್ರ ನಿರ್ಮಾಪಕ ರಾಜೇಂದ್ರ ಯಶು ಬೆದ್ರೋಡಿ, ನಿರ್ದೇಶಕ ನವೀನ್ ಮಾರ್ಲ ಕೊಡಂಗೆ, ಸಂಗೀತ ನಿರ್ದೇಶಕ ಬಿ. ಭಾಸ್ಕರ್ ರಾವ್, ಛಾಯಾಗ್ರಾಹಕ ರವಿ ಸುವರ್ಣ, ನೃತ್ಯ ನಿರ್ದೇಶಕರಾದ ವಿನೋದ್ ರಾಜ್ ಬಂಟ್ವಾಳ ಮತ್ತು ಅನಿಲ್ ನಾಯಕ್, ಸಹ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ, ಕಲಾ ನಿರ್ದೇಶಕ ದಿನೇಶ್ ಸುವರ್ಣ ರಾಯಿ, ಸಹ ನಿರ್ದೇಶಕರಾದ ಪುಷ್ಪರಾಜ ರೈ ಮಲಾರಬೀಡು ಮತ್ತು ಜಯರಾಜ್ ಹೆಜಮಾಡಿ, ಪ್ರಸಾಧನಕಾರ ಪ್ರದೀಪ್ ಆಚಾರ್, ನಾಯಕ ನಟ ವಿನೋದ್ ಶೆಟ್ಟಿ, ನಾಯಕಿ ನಟಿ ಶೀತಲ್ ಮತ್ತಿತರರು ಉಪಸ್ಥಿತರಿದ್ದರು. ಚಿತ್ರ ಸಾಹಿತಿ ಎಚ್ಕೆ ನಯನಾಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Be the first to comment on "ಬಿ.ಸಿ.ರೋಡ್‌ನಲ್ಲಿ ವಿಕ್ರಾಂತ್ ತುಳು-ಕನ್ನಡ ಚಿತ್ರಕ್ಕೆ ಮುಹೂರ್ತ"