ಸರಕಾರಿ ಪ್ರೌಢಶಾಲೆ ಕೊಯಿಲ ಇಲ್ಲಿ ಬಂಟ್ವಾಳ ರೋಟರಿ ಕ್ಲಬ್ ನ ಹ್ಯಾಪಿ ಸ್ಕೂಲ್ ಯೋಜನೆಯಡಿ ನಿರ್ಮಾಣಗೊಂಡ ಹೆಣ್ಣುಮಕ್ಕಳ ಸುಸಜ್ಜಿತ ಶೌಚಾಲಯವನ್ನು ಜಿಲ್ಲಾ ಗವರ್ನರ್ ರೋಹಿನಾಥ್ ಪಿ. ಬುಧವಾರ ಬೆಳಿಗ್ಗೆ ಉದ್ಘಾಟಿಸಿದರು.
ಅವರು ಮಾತನಾಡಿ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆ ಇರುತ್ತದೆ, ರೋಟರಿ ಕ್ಲಬ್ ಬಂಟ್ವಾಳ ಈ ಸರಕಾರಿ ಶಾಲೆಯನ್ನು ದತ್ತು ಪಡೆದು ಸುಸಜ್ಜಿತ ಶೌಚಾಲಯವನ್ನು ಒದಗಿಸಿಕೊಟ್ಟಿದೆ.ಜಾತಿ, ಮತ ಧರ್ಮದ ಭೇದವನ್ನು ಬಿಟ್ಟು ಸೇವೆಯಲ್ಲಿ ತೊಡಗಿಸಿಕೊಂಡಿರುವ ರೋಟರಿ ಕ್ಲಬ್ ವ್ಯಕ್ತಿಯಲ್ಲಿ ನಾಯಕತ್ವ ಗುಣವನ್ನು ಬೆಳೆಸಿ ಸಮಾಜಕ್ಕೆ ಉತ್ತಮ ನಾಗರಿಕರನ್ನು ನಿರ್ಮಿಸಿ ಕೊಡುತ್ತದೆ. ಇಂಟರಾಕ್ಟ್ ಕ್ಲಬ್ ವಿದ್ಯಾರ್ಥಿಗಳಲ್ಲಿ ನಾಯಕತ್ವ ಹಾಗೂ ಆತ್ಮವಿಶ್ವಾಸವನ್ನು ತುಂಬಿ ಸಮಾಜಕ್ಕೆ ಉತ್ತಮ ನಾಗರಿಕರನ್ನು ಒದಗಿಸುತ್ತದೆ. ತನ್ನನ್ನು ತಾನು ಪ್ರೀತಿಸದವನು ಪ್ರಪಂಚದಲ್ಲಿ ಯಾರನ್ನು ಪ್ರೀತಿಸಲು ಸಾಧ್ಯವಿಲ್ಲ. ಧೈರ್ಯ, ಆತ್ಮವಿಶ್ವಾಸ ಇಲ್ಲದಿದ್ದರೆ ಯಾರೂ ನಾಯಕನಾಗಿ ಬೆಳೆಯಲಾರ ಎಂದರು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಅಧ್ಯಕ್ಷತೆ ವಹಿಸಿದ್ದರು. ವಲಯ 4 ರ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ್, ಕಾರ್ಯದರ್ಶಿ ಶಿವಾನಿ ಬಾಳಿಗ, ಶೌಚಾಲಯ ಪ್ರಾಯೋಜಕರಾದ ಮೇಘಾ ಆಚಾರ್ಯ, ರಿತೇಶ್ ಬಾಳಿಗ, ವಲಯ ಲೆಪ್ಟಿನೆಂಟ್ ಸಂಜೀವ ಪೂಜಾರಿ, ಸುವರ್ಣ ವರ್ಷಾಚರಣೆ ಸಮಿತಿ ಸಂಚಾಲಕ ಡಾ. ರಮೇಶಾನಂದ ಸೋಮಾಯಾಜಿ, ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ, ರೋಟರಿ ಸದಸ್ಯರಾದ ಪ್ರಭಾಕರ ಪ್ರಭು, ಕರುಣಾಕರ ರೈ, ಮಹಮ್ಮದ್ ಇಕ್ಬಾಲ್, ಪ್ರಕಾಶ್ ಬಾಳಿಗ, ಧನಂಜಯ ಬಾಳಿಗ, ರಾಮಣ್ಣ ರೈ, ಶಾಲಾ ಮಖ್ಯೋಪಾಧ್ಯಾಯ ಸುಧೀರ್,ಎಸ್ ಡಿ ಎಂ ಸಿ ಸದಸ್ಯ ರಾಜೇಶ್ ಜೈನ್ ಮತ್ತಿತರರು ಹಾಜರಿದ್ದರು. ರಮೇಶ್ ಮಯ್ಯ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಬಂಟ್ವಾಳ ರೋಟರಿ ಕ್ಲಬ್ ನ ಹ್ಯಾಪಿ ಸ್ಕೂಲ್ ಯೋಜನೆಯಡಿ ಹೆಣ್ಣುಮಕ್ಕಳ ಸುಸಜ್ಜಿತ ಶೌಚಾಲಯ"