www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಕೊರತೆಯಿಂದ ಕಣ್ಮರೆಯಾದ ಸಿರಿಧಾನ್ಯಗಳ ಬಳಕೆಯನ್ನು ಮತ್ತೆ ಜನರಿಗೆ ಪರಿಚಯಿಸಿ, ಆರೋಗ್ಯಕರ ಆಹಾರಗಳನ್ನು ಮಾಡಲು ಸಾಧ್ಯ ಎಂಬುದನ್ನು ನಿರೂಪಿಸುವ ಉದ್ದೇಶದಿಂದ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಶನಿವಾರ ಆರಂಭಗೊಂಡ ಸಿರಿಧಾನ್ಯ ಆಹಾರ ಮೇಳದಲ್ಲಿ ಪ್ರದರ್ಶನಕ್ಕಿಟ್ಟ ತಿಂಡಿತಿನಿಸುಗಳಿಗೆ ಭರ್ಜರಿ ಓಪನಿಂಗ್ ದೊರಕಿದೆ.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಶನಿವಾರ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯಗ ಸಂಸ್ಥೆ ಬೆಳ್ತಂಗಡಿ, ಶ್ರೀ.ಕ್ಷೇ.ಧ.ಗ್ರಾ.ಯೋ.ಬಂಟ್ವಾಳ ತಾಲೂಕು ವತಿಯಿಂದ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಬಂಟ್ವಾಳ , ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಸಹಕಾರದೊಂದಿಗೆ ನಡೆಯುವ ಎರಡು ದಿನಗಳ ಸಿರಿಧಾನ್ಯಗಳ ಆಹಾರ ಮೇಳ ಉದ್ಘಾಟಿಸಿದರು.
ಅತಿಥಿಯಾಗಿದ್ದ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಅವರು, ದೋಸೆ ಎರೆಯುವ ಮೂಲಕ ಆಹಾರ ಮೇಳಕ್ಕೆ ಚಾಲನೆ ನೀಡಿದರು ಶ್ರಿ.ಕ್ಪೇ.ಧ.ಗ್ರಾ.ಯೋ.ಯ ದ.ಕ.ಜಿಲ್ಲಾ ನಿರ್ದೇಶಕ ಚಂದ್ರಶೇಖರ ನೆಲ್ಯಾಡಿ ಅವರು ಆಹಾರಮೇಳದ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿದರು.
ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಅವರು ಸಭಾಧ್ಯಕ್ಷತೆ ವಹಿಸಿ ಒತ್ತಡದ ದಿನಗಳಲ್ಲಿ ಆಹಾರ ಪದ್ದತಿಯನ್ನು ಬದಲಾಯಿಸಿಕೊಂಡು ಜನರು ತಮ್ಮ ಆರೋಗ್ಯ ವನ್ನು ಕಾಪಾಡಿಕೊಳ್ಳವ ಅಗತ್ಯವಿದೆ ಎಂದರು.
ಬಂಟ್ವಾಳ ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ್ ಕಾರಂತ, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಅವರು ಶುಭ ಹಾರೈಸಿದರು. ಬಂಟ್ವಾಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ನಾವೂರ, ರೋನಾಲ್ಡ್ ಡಿಸೋಜ ಅಮ್ಟಾಡಿ,ಸ್ಪರ್ಶ ಕಲಾ ಮಂದಿರದ ಸುಭಾಷ್ ಚಂದ್ರಜೈನ್, ಬಂಟ್ವಾಳ ಯೋಜನಾಧಿಕಾರಿ ಪಿ.ಜಯಾನಂದ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಕಿರಣ್ ಹೆಗ್ಡೆ, ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಶ್ರೀ.ಕ್ಷೇ.ಧರ್ಮಸ್ಥಳದ ಸಿರಿ ಗ್ರಾಮೋದ್ಯಗ ಸಂಸ್ಥೆಯ ಆಹಾರ ಧಾನ್ಯ ವಿಸ್ತರಣಾಧಿಕಾರಿ ರಾಮ್ ಕುಮಾರ್ ವೇದಿಕೆಯಲ್ಲಿದ್ದರು. ಸಿರಿ ಗ್ರಾಮೋದ್ಯಗ ಸಂಸ್ಥೆಯ ಯೋಜನಾಧಿಕಾರಿ ಮಂಜುಳಾ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀ.ಕ್ಷೇ.ಧ.ಗ್ರಾ.ಯೋ.ಯ ಮೇಲ್ವಿಚಾರಕರಾದ ಚಂದ್ರಶೇಖರ್ ಸ್ವಾಗತಿಸಿ, ಶಶಿಧರ್ ವಂದಿಸಿದರು,ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಶನಿವಾರ ಮತ್ತು ಭಾನುವಾರ ಸಿರಿಧಾನ್ಯ ಆಹಾರ ಮೇಳ ಇಲ್ಲಿ ನಡೆಯಲಿದೆ.
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದದ ರೋಟರಿ ಕ್ಲಬ್ ಬಂಟ್ವಾಳ, ಲಯನ್ಸ್ ಕ್ಲಬ್ ಬಂಟ್ವಾಳ ಮತ್ತು ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಸಹಕಾರದೊಂದಿಗೆ ಉತ್ತಮ ಾರೋಗ್ಯಕ್ಕಾಗಿ ಸಿರಿಧಾನ್ಯಗಳ ಆಹಾರ ಮೇಳ ಪ್ರದರ್ಶನ, ಮಾರಾಟ ಕಾರ್ಯಕ್ರಮದಲ್ಲಿ ಸಿರಿ ಯೋಜನಾಧಿಕಾರಿ ಮಂಜುಳಾ, ಆಹಾರ ಧಾನ್ಯ ವಿಸ್ತರಣಾಧಿಕಾರಿ ರಾಮ್ ಕುಮಾರ್ ಆಗಮಿಸಿದವರಿಗೆ ಮಾಹಿತಿಗಳನ್ನು ನೀಡಿದರೆ, ಗ್ರಾಮಾಭಿವೃದ್ಧಿ ಯೋಜನಾ ನಿರ್ದೇಶಕ ಚಂದ್ರಶೇಖರ ನೆಲ್ಯಾಡಿ, ಯೋಜನಾಧಿಕಾರಿ ಜಯಾನಂದ ಪಿ, ಬಂಟ್ವಾಳ, ಮೇಲ್ವಿಚಾರಕರಾದ ಶಶಿಧರ್, ರಮೇಶ್ ಎನ್, ಚಂದ್ರಶೇಖರ್ ಸಹಿತ ಬಂಟ್ವಾಳದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು ಮೇಳದ ಉಸ್ತುವಾರಿ ನೋಡಿಕೊಂಡರು.
ಸಿರಿಧಾನ್ಯ ಆಹಾರ ಮೇಳದ ಮೆನ್ಯು
ಪಲಾವ್, ಬಿರಿಯಾನಿ, ಮಸಾಲೆದೋಸೆ, ಕೇಸರಿಬಾತ್, ಉಪ್ಪಿಟ್ಟು, ಪೊಂಗಲ್, ಕಿಚಡಿ, ಇಡ್ಲಿ, ಮೊಸರನ್ನ, ಪಾಯಸ, ಬಿಸಿಬೇಳೆಬಾತ್, ರಾಗಿಮುದ್ದೆ, ಚಕ್ಕುಲಿ, ಬರ್ಫಿ, ಅಮೃತಪಾನಕ, ಮಲ್ನಾಡ್ ಕಷಾಯ, ಸಜ್ಜೆಹಾಲು, ರಾಗಿಹಾಲು.
Be the first to comment on "ಸಿರಿಧಾನ್ಯ ಆಹಾರ ಮೇಳದಲ್ಲಿ ಖರೀದಿ, ಸವಿರುಚಿಗೆ ಆಸಕ್ತರ ಸಾಲು"