ಮಾಣಿಯಲ್ಲಿ ಶ್ರೀರಾಮಚಂದ್ರಾಪುರ ಮಠ ಶಿಷ್ಯಭಕ್ತರ ಸಭೆ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ಅ.28ರಂದು ಶಿಷ್ಯಭಕ್ತರ ಸಭೆ ಮಧ್ಯಾಹ್ನ 3.30ಕ್ಕೆ ನಡೆಯಲಿದೆ.
ಶ್ರೀರಾಮಚಂದ್ರಾಪುರ ಮಠ ಮಾಡಿದ ಸತ್ಕಾರ್ಯಗಳ ಅವಲೋಕನ ಹಾಗೂ ಶ್ರೀಮಠದ ಶ್ರೀಪೀಠದ ಮೇಲೆ ಮಾಡಿದ ಮಿಥ್ಯಾರೋಪ, ಷಡ್ಯಂತ್ರ, ಕುಕೃತ್ಯಗಳ ಮಾಹಿತಿಯನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ಮಠ ಸಂರಕ್ಷಣೆಯ ಕುರಿತು ಶ್ರೀಮಠದ ಶಿಷ್ಯಭಕ್ತರ ಸಭೆಯಿದು ಎಂದು ಆಯೋಜಕರು ತಿಳಿಸಿದ್ದಾರೆ.
ಶ್ರೀರಾಮಚಂದ್ರಾಪುರ ಮಠ ಮಾಡಿದ ಸತ್ಕಾರ್ಯಗಳ ಅವಲೋಕನ ಹಾಗೂ ಶ್ರೀಮಠದ ಶ್ರೀಪೀಠದ ಮೇಲೆ ಮಾಡಿದ ಮಿಥ್ಯಾರೋಪ, ಷಡ್ಯಂತ್ರ, ಕುಕೃತ್ಯಗಳ ಮಾಹಿತಿಯನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ಷಡ್ಯಂತ್ರಗಳಿಂದ ಮಠ ಸಂರಕ್ಷಣೆಯ ಕುರಿತು ಹೊನ್ನಾವರ, ಕುಮಟ, ಸಾಗರ, ಶಿವಮೊಗ್ಗ, ಹೊಸನಗರ, ಬೆಂಗಳೂರು, ಹಾಗೂ ದಕ್ಷಿಣ ಕನ್ನಡ ಭಾಗದ ಮಠದ ಶಿಷ್ಯ ಭಕ್ತರು, ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಹಾಗೂ ಸಮಾಜದ ಹಿರಿಯರು ಮಠ ಸಂರಕ್ಷಣಾ ಅಭಿಯಾನದಲ್ಲಿ ವಿಶೇಷ ಆಸಕ್ತಿ ವಹಿಸಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.
Be the first to comment on "ಅ.28ರಂದು ಮಾಣಿಯಲ್ಲಿ ಶ್ರೀರಾಮಚಂದ್ರಾಪುರ ಮಠ ಶಿಷ್ಯಭಕ್ತರ ಸಭೆ"