ಭಾನುವಾರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಬಂಟ್ವಾಳ ತಾಲೂಕು ಪಂಚಾಯತ್ ನ ಸಂಗಬೆಟ್ಟು ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮಸ್ಟರಿಂಗ್ ಕಾರ್ಯ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಶನಿವಾರ ನಡೆಯಿತು. ಈ ಸಂದರ್ಭ ತಹಶೀಲ್ದಾರ್ ಪುರಂದರ ಹೆಗ್ಡೆ,ಚಾಲನೆ ನಾವಣಾಧಿಕಾರಿ ನಾರಾಯಣ ಶೆಟ್ಟಿ,ಉಪಚುನಾವಣಾಧಿಕಾರಿ ಲಕ್ಷ್ಮಣ್, ಪುರಸಭೆಯ ಮತ್ತಡಿ,ಚುನಾವಣಾ ಶಾಖೆಯ ರಾಜ್ ಕುಮಾರ್ ಮತ್ತಿತರರು ಹಾಜರಿದ್ದರು. ಭಾನುವಾರದ ಚುನಾವಣೆಯಲ್ಲಿ ಒಟ್ಟು 4,685 ಪುರುಷರು, 4,768 ಮಹಿಳೆಯರು ಸೇರಿ 9,453 ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ಅವಕಾಶ ಪಡೆದಿದ್ದಾರೆ.
ಸಂಗಬೆಟ್ಟು ಕ್ಷೇತ್ರದಲ್ಲಿ ಒಟ್ಟು 10 ಮತಗಟ್ಟೆಗಳಿದ್ದು, ಎರಡು ಸಾಮಾನ್ಯ ಮತಗಟ್ಟೆಗಳಾದರೆ, ಉಳಿದ 8 ಸೂಕ್ಷ್ಮ ಮತಗಟ್ಟೆಗಳಾಗಿವೆ. ಅ. 31 ರಂದು ಬೆಳಿಗ್ಗೆ 8 ಗಂಟೆಯಿಂದ ಮತದಾನ ಎಣಿಕಾ ಕಾರ್ಯವು ಬಂಟ್ವಾಳ ಮಿನಿವಿಧಾನ ಸೌಧದಲ್ಲಿ ನಡೆಯಲಿದೆ.
ಮಸ್ಟರಿಂಗ್ ಕಾರ್ಯ ಸಂದರ್ಭ ಕಂದಾಯ ಇಲಾಖೆ ಮತ್ತು ಚುನಾವಣೆಗೆ ಸಂಬಂಧಿಸಿದ ವಿಭಾಗಗಳಿಗೆ ಒಳಗೊಂಡ ಅಧಿಕಾರಿಗಳು ಉಪಸ್ಥಿತರಿದ್ದು, ವಿವಿಧ ವಾಹನಗಳಲ್ಲಿ ಮತಯಂತ್ರಗಳೊಂದಿಗೆ ಸಂಬಂಧಿತ ಚುನಾವಣಾ ಬೂತ್ ಗಳಿಗೆ ತೆರಳಿದರು.
ಕಾಂಗ್ರೆಸ್ ನಿಂದ ಹಿಂದೆ ಸ್ಪರ್ಧಿಸಿ ಆಯ್ಕೆಯಾಗಿದ್ದ ಪ್ರಭಾಕರ ಪ್ರಭು ಕಳೆದ ಚುನಾವಣೆಯ ಸಂದರ್ಭ ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ತಾಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕಾರಣ ಈ ಚುನಾವಣೆ ನಡೆಯುತ್ತಿದೆ. ಈ ಬಾರಿ ಪ್ರಭಾಕರ ಪ್ರಭು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್ ನಿಂದ ದಿನೇಶ್ ಸುಂದರ ಶಾಂತಿ ಕಣದಲ್ಲಿದ್ದಾರೆ.
Be the first to comment on "ತಾಪಂ ಸಂಗಬೆಟ್ಟು ಉಪಚುನಾವಣೆಗೆ ಸಕಲ ಸಿದ್ಧತೆ"