ಬಂಟ್ವಾಳ: ಆರೋಗ್ಯಕರ ಆಹಾರ ಪದ್ದತಿ ಜಾರಿಗೆ ತರುವ ಉದ್ದೇಶದಿಂದ ಅಕ್ಟೋಬರ್ 28ಮತ್ತು 29 ರಂದು ಎರಡು ದಿನಗಳ ಸಿರಿಧಾನ್ಯಗಳ ಆಹಾರ ಮೇಳ ವನ್ನು ಬಿ.ಸಿ.ರೋಡಿನ ಉದ್ಯಾನವನದ ಬಳಿರುವ ಸ್ಪರ್ಶ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ.ಕ್ಷೇ.ಧರ್ಮಸ್ಥಳದ ಸಿರಿ ಗ್ರಾಮೋದ್ಯಗ ಸಂಸ್ಥೆಯ ಮಾರುಕಟ್ಟೆ ಅಧಿಕಾರಿ ರಾಮ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನುಷ್ಯನ ದೇಹಕ್ಕೆ ಬೇಕಾದಂತ ಪೋಷಕಾಂಶ ಹಾಗೂ ಆರೋಗ್ಯ ಕಾಪಾಡುವಲ್ಲಿಸಿರಿಧಾನ್ಯಗಳ ಮಹತ್ವತೆಯ ಕುರಿತು ಮಾಹಿತಿಯನ್ನು ಈ ಸಂದರ್ಭ ನೀಡಲಾಗುವುದು ಎಂದರು.
ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕೊರತೆಯಿಂದ ಕಣ್ಮರೆಯಾದ ನವಣೆ,ಸಾವೆ,ಉದಲು,ಹಾರಕ,ಕೊರಳೆ,ಸಜ್
ಒಂದೊಂದು ಧಾನ್ಯವು ಒಂದೊಂದು ವಿಶೇಷತೆಯನ್ನು ಹೊಂದಿದ್ದು,ಸಕ್ಕರೆ ಕಾಯಿಲೆ ನಿಯಂತ್ರಿಸಲು,ರಕ್ತದಲ್ಲಿನ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್ ಕಡಿಮೆ ಮಾಡುವಲ್ಲಿ ಸಿರಿಧಾನ್ಯ ನೆರವಾಗುತ್ತದೆ ಎಂದು ವಿವರಿಸಿದ ರಾಮ್ ಕುಮಾರ್ ಸಿರಿಧಾನ್ಯದಲ್ಲಿ ನಾರಿನಾಂಶ ತುಂಬಿರುವುದರಿಂದ ಆರೋಗ್ಯದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ರಾಜ್ಯದ 13 ಕಡೆಗಳಲ್ಲಿ ಈಗಾಗಲೇ ಇಂತಹ ಕಾರ್ಯಕ್ರಮ ನಡೆಸಲಾಗಿದ್ದು,ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದ.ಕ.ಜಿಲ್ಲೆಯಲ್ಲಿ ಇದೇ ಮೊದಲಬಾರಿಗೆ ಸಿರಿಧಾನ್ಯಗಳ ಮಾರಾಟ ಮತ್ತು ಪ್ರದರ್ಶನ ನಡೆಸಲಾಗುತ್ತಿದೆ . ಮಳಿಗೆಯಲ್ಲಿ ಸಿರಿಧಾನ್ಯಗಳಿಂದ ತಯಾರಿಸಲಾದ ತಿಂಡಿ, ತಿನಿಸು ಲಭ್ಯವಿರುತ್ತದೆ ಎಂದರು.
ಶ್ರೀಧ.ಸಿರಿಗ್ರಾಮೋದ್ಯಗಸಂಸ್ಥೆಲಾ
Be the first to comment on "28ಮತ್ತು 29 ರಂದು ಸಿರಿಧಾನ್ಯಗಳ ಆಹಾರ ಮೇಳ"