ಪಾಣೆಮಂಗಳೂರು ಗ್ರಾಮ ಬೊಂಡಾಲ 27ನೇ ವಾರ್ಡ್ ಶಾಂತಿಗುಡ್ಡೆ ಗುಂಡೂರು ಮಹಮ್ಮಾಯಿ ರಸ್ತೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಅ. 22ರಂದು ತೆಂಗಿನಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಜಾಹೀರಾತು
ಬಂಟ್ವಾಳ ವಿಧಾನ ಸಭಾ ಚುನಾವಣೆ ಪೂರ್ವದಲ್ಲಿ ನಗರೋತ್ಥಾನ ಯೋಜನೆಯಡಿ 20ಲಕ್ಷ ರೂ. ಅನುದಾನ ಮಂಜೂರಾಗಿದ್ದು ಕಾಮಗಾರಿಯು ವಿವಿಧ ಕಾರಣಕ್ಕೆ ಚಾಲನೆ ಆಗಿರಲಿಲ್ಲ. ತನ್ನ ಅಧಿಕಾರದ ಅವಧಿಯಲ್ಲಿ ಈ ಕಾಮಗಾರಿಗೆ ಅನುದಾನ ಮಂಜೂರಾಗಿತ್ತು. ಅಂದು ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಕಾಮಗಾರಿ ನಡೆದಿರಲಿಲ್ಲ. ಪ್ರಸ್ತುತ ನಾನು ಮಾಜಿ ಆದರೂ ಅಂದು ಮಂಜೂರಾತಿ ಆಗಿರುವ ಅಭಿವೃದ್ದಿ ಕಾಮಗಾರಿಯನ್ನು ಮುಂದುವರಿಸಿ ಕ್ರಮ ಕೈಗೊಂಡಿದ್ದಾಗಿ ಸ್ಥಳದಲ್ಲಿ ಇದ್ದ ಊರಿನ ಜನರಲ್ಲಿ ತಿಳಿಸಿದರು.
ಕಾಮಗಾರಿ ಚಾಲನೆ ಸಂದರ್ಭ ಯುವ ಕಾಂಗ್ರೆಸ್ ಉಪಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದಿಕ್ , ವೆಂಕಪ್ಪ ಪೂಜಾರಿ, ಗುತ್ತಿಗೆದಾರ ದೀರಜ್ ನಾಕ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಶಾಂತಿಗುಡ್ಡೆ ಗುಂಡೂರು ಮಹಮ್ಮಾಯಿ ರಸ್ತೆ ಕಾಮಗಾರಿಗೆ ಚಾಲನೆ"
Be the first to comment on "ಶಾಂತಿಗುಡ್ಡೆ ಗುಂಡೂರು ಮಹಮ್ಮಾಯಿ ರಸ್ತೆ ಕಾಮಗಾರಿಗೆ ಚಾಲನೆ"