ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸರನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ವಶಪಡಿಸಿಕೊಳ್ಳಲಾದ ಕಾರು
ಭಾನುವಾರ ಸಂಜೆ ಪ್ರಕರಣ ನಡೆದಿದ್ದು, ಟ್ರಾಫಿಕ್ ಠಾಣೆಯ ಉಪನಿರೀಕಕ್ಷಕರಾದ ಮಂಜುಳ.ಕೆ.ಎಂ. ನಾರಾಯಣ ಗುರು ಸರ್ಕಲ್ನಲ್ಲಿ ಸಂಜೆ 5.30 ಗಂಟೆಗೆ ವಾಹನ ತಪಾಸಣೆ ಮಾಡುತ್ತಿದ್ದಾಗ ಪುತ್ತೂರು ಕಡೆಯಿಂದ ಕಾರೊಂದು ಬಂದಿದ್ದು ಟಿಂಟೆಡ್ ಗ್ಲಾಸ್ ಇರುವುದನ್ನು ಹಾಗೂ ಸೀಟ್ ಬೆಲ್ಟ್ ಹಾಕದಿರುವುದನ್ನು ಕಂಡು ಕಾರನ್ನು ತಡೆದು ಪರಿಶೀಲಿಸಲಾಗಿತ್ತು. ಈ ಸಂದರ್ಭ, ಕಾರಿನಲ್ಲಿದ್ದ ಮೂಡುಬಿದಿರೆಯ ಜಿತೇಶ್ (31) ವಿಕೇಶ (27) ಆಸ್ಟಿನ್ (23) ಆರ್ವಿನ್ (21) ಆಲ್ಡ್ರಿನ್ (18) ಪಿಎಸ್ಸೈ ಮತ್ತು ಸಿಬ್ಬಂದಿಗೆ ಬೈದು ಬೇರೆ ವಾಹನಗಳ ತಪಾಸಣೆಗೂ ಅಡ್ಡಿಮಾಡಿದ್ದು ಪಿಎಸೈ ಹಾಗೂ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಮಾಡಿದ್ದಾಗಿ ಆಪಾದಿಸಲಾಗಿದ್ದು, ಈ ಬಗ್ಗೆ ಪಿಎಸೈ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿ, ಕಾರು ಮತ್ತು ಐವರು ಆರೋಪಿಗಳನ್ನು ಬಂಧಿಸಲಾಗಿದೆ.


Be the first to comment on "ವಾಹನ ತಪಾಸಣೆ ವೇಳೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ಐವರ ಬಂಧನ"