ಪಿಕಾರ್ಡ್ ಬ್ಯಾಂಕ್: ಸಾಲ ವಸೂಲಾತಿಯಲ್ಲಿ ದ.ಕ. ಜಿಲ್ಲೆ ದ್ವಿತೀಯ ಸ್ಥಾನ – ಜೈನ್

ರಾಜ್ಯ ಮಟ್ಟದಲ್ಲಿ ದ.ಕ ಜಿಲ್ಲೆಯು ಶೇಕಡಾ 80.26 ರಷ್ಟು ಸಾಲ ವಸೂಲಾತಿ ಸಾಧನೆ ಮಾಡಿದ್ದು ರಾಜ್ಯದಲ್ಲಿಯೇ ಸಾಲ ವಸೂಲಾತಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ ಎಂದು ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ದ.ಕ. ಉಡುಪಿ ಜಿಲ್ಲಾ ನಿರ್ದೇಶಕ ಸುದರ್ಶನ್ ಜೈನ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಬೆಂಗಳೂರು ಇದರ ವಾರ್ಷಿಕ ಮಹಾಸಭೆಯಲ್ಲಿ ೨೦೧೭-೧೮ ನೇ ಸಾಲಿನಲ್ಲಿ ವಸೂಲಾತಿಯಲ್ಲಿ ಉತ್ತಮ ಸಾಧನೆಗೈದು ಜಿಲ್ಲೆಯಲ್ಲಿ ಪ್ರಥಮ ಸ್ಥಾನಗಳಿಸಿದ ಬಂಟ್ವಾಳ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಹಾಗೂ ದ.ಕ ಮತ್ತು ಉಡುಪಿಜಿಲ್ಲಾ ನಿರ್ದೇಶಕರಾದ ಸುದರ್ಶನ್ ಜೈನ್ ಮತ್ತು ವ್ಯವಸ್ಥಾಪಕರಾದ ಎಂ ಶೇಖರ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ವ್ಯವಸ್ಥಾಪಕರಾದ ಸುರೇಶ್ ಬಿ.ಜೆ ಹಾಗೂ ಬಂಟ್ವಾಳ ಪಿಕಾರ್ಡ್ ಬ್ಯಾಂಕ್‌ನ ಮೇಲ್ವಿಚಾರಕ ಪದ್ಮನಾಭ ಜಿ ಉಪಸ್ಥಿತರಿದ್ದರು.

ಬಂಟ್ವಾಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ದ.ಕ ಜಿಲ್ಲೆಯ ಬಂಟ್ವಾಳ ಪಿಕಾರ್ಡ ಬ್ಯಾಂಕು ಶೇಕಡಾ ೮೪.೬೨ ರಷ್ಟು ಸಾಲ ವಸೂಲಾತಿ ಮಾಡಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ಸುಳ್ಯ ಪಿಕಾರ್ಡ ಬ್ಯಾಂಕು ೮೧.೪೧ ರಷ್ಟು ವಸೂಲಾತಿ ಮಾಡಿ ದ್ವಿತೀಯ ಸ್ಥಾನದಲ್ಲಿರುತ್ತದೆ. ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಕಾರ್ಕಳ ಪಿಕಾರ್ಡ ಬ್ಯಾಂಕುಗಳು ಶೇ.೮೭.೪೧ ಮತ್ತು ೭೬.೮೯ ರಷ್ಟು ಸಾಲ ವಸೂಲಾತಿ ಮಾಡಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನದಲ್ಲಿರುತ್ತದೆ ಎಂದರು.

ಎರಡೂ ಜಿಲ್ಲೆಗಳಿಂದ ಮಾರ್ಚ ೨೦೧೮ ರಂತ್ಯಕ್ಕೆ ರೂ.೧೦೮೧೫.೭೯ ಲಕ್ಷಗಳ ನಿಶ್ಚಿತ ಠೇವಣಿ ಸಂಗ್ರಹಿಸಿ, ಇದರಲ್ಲಿ ರೂ.೮೭೮೮.೬೬ ಲಕ್ಷಗಳ ಸಾಲವನ್ನು ರೈತ ಸದಸ್ಯರಿಗೆ ಚಿನ್ನಾಭರಣ, ಸಂಬಳಾಧಾರಿತ, ಕೃಷಿ, ಕೃಷಿಪೂರಕ ಗ್ರಾ.ಗೃ.ನಿರ್ಮಾಣ ಮತ್ತು ಕೃಷಿಯೇತರ ಇನ್ನೀತರೆ ಯೋಜನೆಗಳಿಗೆ ಸಾಲ ನೀಡಿರುತ್ತಾರೆ. ಎಲ್ಲಾ ಪಿಕಾರ್ಡ ಬ್ಯಾಂಕುಗಳಿಂದ ರೂ.೧೩೧೬.೪೧ ಲಕ್ಷಗಳನ್ನು ಶಾಖಾ ಕಛೇರಿಯ ಇತರೆ ನಿಧಿಗಳಲ್ಲಿ ವಿನಿಯೋಗಿಸಿರುತ್ತಾರೆ ಎಂದು ಅವರು ಹೇಳಿದರು.

ಬಡ್ಡಿ ಮನ್ನಾಕ್ಕೆ ಬೇಡಿಕೆ:
ಆರ್ಥಿಕ ವರ್ಷದ ಪ್ರಾರಂಭದಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚಿನ ವರ್ಷಧಾರೆಯಿಂದಾಗಿ ರೈತರು ತೊಂದರೆಗೊಳಪಟ್ಟು ರೈತರ ಜೀವನಾಡಿಯಾದ ಅಡಿಕೆ ಬೆಳೆಯ ಮಣ್ಣಿನ ಸವಕಳಿಯಾಗಿ ಬೆಳೆಯ ಸಾರ ಕಡಿಮೆಯಾಗಿದ್ದು, ಇದರಿಂದ ಕೊಳೆರೋಗ ಹೆಚ್ಚಾಗಿ ಬೆಳೆಗೆ ಹಾನಿಯಾಗಿರುತ್ತದೆ, ಹಾಗೂ ಮಾರುಕಟ್ಟೆಯ ಏರಿಳಿತದಿಂದ ಅಡಿಕೆ ಧಾರಣೆ ಕುಸಿತದಿಂದ ತೊಂದರೆಯಾಗಿದೆ. ಮುಖ್ಯಮಂತ್ರಿಗಳು ಬೆಳೆ ಸಾಲ ಪಡೆದ ರೈತರುಗಳಿಗೆ ಆಯ-ವ್ಯಯದಲ್ಲಿ ಘೋಷಣೆ ಮಾಡಿದಂತೆ ಜುಲೈ ೧೦ಕ್ಕೆ ಹೊಂದಿರುವ ಸಾಲಗಳ ಹೊರಬಾಕಿ ಮೇಲೆ ಸಾಲ ಮನ್ನಾ ಯೋಜನೆ ಜಾರಿಯಲ್ಲಿದ್ದು, ದೀರ್ಘಾವಧಿ ಸಾಲಗಳಿಗೆ ಯಾವುದೇ ರಿಯಾಯಿತಿ ಯೋಜನೆಗಳ ಅನುಷ್ಟಾನವಾಗದೇ ಇರುವುದರಿಂದ ಸಾಲ ಮರುಪಾವತಿಗೆ ಪೂರಕ ವಾತಾವರಣ ಇರುವುದಿಲ್ಲ. ಉಬಯ ಜಿಲ್ಲೆಯ ಎಲ್ಲಾ ಪಿಕಾರ್ಡ್ ಬ್ಯಾಂಕುಗಳ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸರ್ವ ಸದಸ್ಯರ ಮಹಾಸಭೆಯಲ್ಲಿ ಸದಸ್ಯರುಗಳು ಚಾಲ್ತಿ ಸಾಲಿನ ತಗಾದೆಯನ್ನು ಹಾಗೇ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಲು ನಿರ್ಣಯವಾಗಿದ್ದು, ಈ ಎಲ್ಲಾ ಹಿನ್ನೆಲೆಗಳ ಬಗ್ಗೆ ಕೇಂದ್ರ ಬ್ಯಾಂಕಿನ ಬೆಂಗಳೂರಿನಲ್ಲಿ ಜರುಗಿದ ಮಾನ್ಯ ಸಹಕಾರ ಸಚಿವರ ಅಧ್ಯಕ್ಷತೆಯ ಸಮ್ಮೇಳನದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ರೈತ ಸದಸ್ಯರ ಪರವಾಗಿ ಚಾಲ್ತಿ ಸಾಲಿನ ತಗಾದೆ ಮತ್ತು ಸುಸ್ತಿ ಬಡ್ಡಿ ಮನ್ನಾ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಗೆ ಚಾಲ್ತಿ ಸಾಲಿನ ತಗಾದೆ ಮತ್ತು ಸುಸ್ತಿ ಬಡ್ಡಿ ಮನ್ನಾ ಮಾಡಲು ಅವರು ಕೋರಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ., ಮಂಗಳೂರು ಶಾಖೆಯು ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದು ತಾಲೂಕಿನ ರೈತರಿಗೆ ಧೀರ್ಘಾವಧಿ ಸಾಲ ನೀಡುವ ಉದ್ದೇಶ ಇದೆ. ಜಿಲ್ಲೆಯ ಭೌಗೋಳಿಕ ಪ್ರದೇಶದ ಅವಶ್ಯಕತೆಗೆ ಅನುಗುಣವಾಗಿ ಕೃಷಿ ಮತ್ತು ಕೃಷಿ ಪೂರಕ ಸಾಲಗಳನ್ನು ತಾಲೂಕಿನ ರೈತರಿಗೆ ಅವರ ಉದ್ದೇಶಗಳಿಗೆ ಅನುಗುಣವಾಗಿ ಅಡಿಕೆ ತೋಟದ ಭೂ ಅಭಿವೃದ್ಧಿ, ಉಗ್ರಾಣ, ಅಡಿಕೆ ಕಣ, ತಂತಿಬೇಲಿ, ಬಾವಿಆಳ, ತುಂತುರು ನೀರಾವರಿ, ಹೈನುಗಾರಿಕೆ, ಕೋಳಿ, ಹಂದಿ ಸಾಕಾಣಿಕೆಯಂತಹ ಯೋಜನೆಗಳಿಗೆ ಸಾಲವನ್ನು ನೀಡಲಾಗುತ್ತಿದ್ದು, ರಾಜ್ಯ ಸರಕಾರ ಘೋಷಣೆ ಮಾಡಿರುವ ಶೇಕಡಾ ೩ ರ ರಿಯಾಯಿತಿ ಬಡ್ಡಿ ದರದಲ್ಲಿ ೨೦೧೭-೧೮ ನೇ ಸಾಲಿನಲ್ಲಿ ದ.ಕ ಜಿಲ್ಲೆ ೭೨೭.೪೦, ಉಡುಪಿ ಜಿಲ್ಲೆ ೨೪೬.೬೨ ಲಕ್ಷ ಸಾಲಗಳನ್ನು ಹಂಚಿಕೆ ಮಾಡಿದೆ. ರಾಜ್ಯ ಸರಕಾರದ ಶೇ.೩ ರಿಯಾಯಿತಿ ಬಡ್ಡಿ ದರದಲ್ಲಿ ನೀಡಲಾದ ಸಾಲಗಳಿಗೆ ಸರಕಾರು ಮಾರ್ಚ್ ೨೦೧೮ ರ ಅಂತ್ಯಕ್ಕೆ ದ.ಕ ಜಿಲ್ಲೆಗೆ ೬೩೯.೯೪, ಉಡುಪಿ ಜಿಲ್ಲೆಗೆ ೨೬೩.೧೦ ಲಕ್ಷ ರೂಗಳು ಹಾಗೂ ಈ ಹಿಂದೆ ಜಾರಿಯಾಲ್ಲಿದ್ದ ೧೫.೦೪.೨೦೧೭ ರ ಸುಸ್ತಿ ಬಡ್ಡಿ ಮನ್ನಾ ಯೋಜನೆಯಡಿ ಒಟ್ಟಾರೆ ೨ ಜಿಲ್ಲೆಗಳಿಂದ ೧೫೮.೦೭ ಲಕ್ಷ ರೂ. ಗಳು ಕ್ಲೈಂ ಬಿಲ್ಲುಗಳು ಬಿಡುಗಡೆಯಾಗಿದೆ ಎಂದು ಜೈನ್ ತಿಳಿಸಿದ್ದಾರೆ. ಈ ಸಂದರ್ಭ ದ.ಕ. ಉಡುಪಿ ಜಿಲ್ಲೆಯ ವ್ಯವಸ್ಥಾಪಕರಾದ ಬಿ.ಜೆ. ಸುರೇಶ್ ಉಪಸ್ಥಿತರಿದ್ದರು.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಪಿಕಾರ್ಡ್ ಬ್ಯಾಂಕ್: ಸಾಲ ವಸೂಲಾತಿಯಲ್ಲಿ ದ.ಕ. ಜಿಲ್ಲೆ ದ್ವಿತೀಯ ಸ್ಥಾನ – ಜೈನ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*