ಬದಲಾಯ್ತು ಬಸ್ ತಂಗುದಾಣ, ಸುಣ್ಣ, ಬಣ್ಣದ ಚಿತ್ತಾರ

ಸುಣ್ಣ, ಬಣ್ಣದ ಚಿತ್ತಾರ ಪೇಟೆಯ ನಡುವೆ ಬಡ್ಡಕಟ್ಟೆಯಲ್ಲಿ ಕಸದ ರಾಶಿ ತುಂಬಿದ, ಗಲೀಜಾಗಿದ್ದ, ಮನುಷ್ಯರಿಗೆ ಪ್ರವೇಶಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದ ಬಸ್ ತಂಗುದಾಣವೀಗ ಹೊಸ ರೂಪ ಪಡೆಯುತ್ತಿದೆ.

ಜಾಹೀರಾತು

ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ಇದು ಪ್ರಯಾಣಿಕರ ಬಳಕೆಗೆ ಸಿದ್ಧವಾಗಲಿದೆ. ಇಷ್ಟಕ್ಕೆಲ್ಲ ಕಾರಣವಾದದ್ದು, ಪುರಸಭೆ ಬಂಟ್ವಾಳ ನೇತೃತ್ವದಲ್ಲಿ ಜೇಸಿ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸದಸ್ಯರು ಶುಕ್ರವಾರ ಬೆಳಗ್ಗೆ ನಡೆಸಿದ ಸ್ವಚ್ಛತಾ ಕಾರ್ಯಕ್ರಮ.

ಬಸ್ ನಿಲ್ದಾಣದಲ್ಲೀಗ ವರ್ಲಿ ಚಿತ್ತಾರ… ರೊಟೇರಿಯನ್ ಗಳಾದ ಮಂಜುನಾಥ ಆಚಾರ್ಯ, , ಜಯಪ್ರಕಾಶ್, ವಲ್ಲಭೇಶ ಶೆಣೈ, ಭೂಮಿಕಾ ಶೆಣೈ, ಮೇಘಾ ಆಚಾರ್ಯ, ವಿದ್ಯಾ ಅಶ್ವನಿ ರೈ, ಡಾ. ಶಶಿಕಲಾ ಸೋಮಯಾಜಿ ಮತ್ತು ಪತ್ರಕರ್ತರಾದ ಸಂದೀಪ್ ಸಾಲ್ಯಾನ್ ವರ್ಲಿ ಚಿತ್ರ ರಚನೆಯಲ್ಲಿ ಕೈಜೋಡಿಸಿದರು.

ಸಾರ್ವಜನಿಕರಿಗೆ ಉಪಯೋಗಕ್ಕೇ ಇಲ್ಲದಂತೆ ಇದ್ದೂ ಇಲ್ಲದಂತಿರುವ ಬಸ್ ತಂಗುದಾಣವನ್ನು ಉಪಯೋಗಕ್ಕೆ ಅನುಕುಲ ಕಲ್ಪಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಮುತುವರ್ಜಿಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಸುವರ್ಣ ವರ್ಷಾಚರಣೆ ಹಿನ್ನೆಲೆಯಲ್ಲಿ ಬಡ್ಡಕಟ್ಟೆ ಬಸ್ ತಂಗುದಾಣವನ್ನು ಮಾದರಿ ತಂಗುದಾಣವನ್ನಾಗಿ ರೂಪಿಲಾಗುತ್ತಿದೆ.

ವರ್ಲಿ ಚಿತ್ತಾರ ಸಹಿತ ಬಸ್ ನಿಲ್ದಾಣಕ್ಕೆ ಸುಣ್ಣ ಬಣ್ಣ ಬಳಿದು ಹೊಸ ರೂಪ ಬಂದಿದೆ. ಇನ್ನು ಬೋರ್ಡು ಲಗತ್ತಿಸಿ, ಸಾರ್ವಜನಿಕ ಉಪಯೋಗಕ್ಕೆ ಒದಗಿಸುವುದಷ್ಟೇ ಬಾಕಿ.

ಜಾಹೀರಾತು

ಆದರೆ ಬಂಟ್ವಾಳ ಪುರಸಭೆಯು ಟ್ರಾಫಿಕ್ ಪೊಲೀಸರ ಸಹಯೋಗದಲ್ಲಿ ಬಸ್ಸುಗಳು ನಿಲ್ದಾಣದ ಒಳಗೆ ಬಂದು ಪ್ರಯಾಣಿಕರ ತಂಗುದಾಣದ ಬಳಿಯೇ ನಿಲ್ಲಿಸಿ ಅಲ್ಲಿಯಷ್ಟೇ ಪ್ರಯಾಣಿಕರನ್ನು ಹತ್ತಿಸಬೇಕು ಹಾಗೂ ನಿಲ್ದಾಣದ ಎದುರು ವಾಹನ ಪಾರ್ಕಿಂಗ್ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಶಯ. ಸಂಘ ಸಂಸ್ಥೆಗಳು ಸಹಕಾರವನ್ನು ಕೊಡಬಹುದು, ಅದನ್ನು ಉಳಿಸುವ ಕೆಲಸವನ್ನು ಅಧಿಕಾರಿಗಳು, ಆಡಳಿತ ಕಟ್ಟುನಿಟ್ಟಾಗಿ ಮಾಡಬೇಕು.

ಬಡ್ಡಕಟ್ಟೆ ಬಸ್ ತಂಗುದಾಣಕ್ಕೆ ಹೊಸರೂಪ – ಸ್ವಚ್ಛತಾ ಆಂದೋಲನದ ಫಲ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ಬದಲಾಯ್ತು ಬಸ್ ತಂಗುದಾಣ, ಸುಣ್ಣ, ಬಣ್ಣದ ಚಿತ್ತಾರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*