ಈ ವರ್ಷದಲ್ಲಿ ಪಂಚಾಯತ್ ಕೈಕೊಂಡ ಅಭಿವೃದ್ಧಿ ಕಾರ್ಯ ಹಾಗೂ ಅನುದಾನ ಸದ್ಬಳಕೆ, ಎಸ್.ಸಿ, ಎಸ್.ಟಿ. ಅನುದಾನ ಅತಿ ಹೆಚ್ಚು ಬಳಕೆ, ಶೇ.100 ಶೌಚಾಲಯ ಸಾಧನೆ, ಸ್ವಚ್ಛತೆಯಲ್ಲಿ ವಿಶೇಷ ಸಾಧನೆಗಳ ಮೂಲಕ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿದೆ.
ಕರ್ನಾಟಕ ಸರಕಾರ ಗ್ರಾ ಮ ಪಂಚಾಯತ್ ಗಳ ವಾರ್ಷಿಕ ಪ್ರಗತಿಯನ್ನಾಧರಿಸಿ ಸಾಂಸ್ಥಿಕ ಮತ್ತು ಪ್ರಗತಿ ಸೂಚ್ಯಂಕ ಗಳ ಆಧಾರದ ಮೇಲೆ ಕೊಡುವ 2017-18 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರವಿದು.
ಅಕ್ಟೋಬರ್ 2 ರ ಗಾಂಧೀ ಜಯವಂತಿ ಯಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪುರಸ್ಕಾರ ಪ್ರಧಾನ ನಡೆಯಲಿದ್ದು, ಗ್ರಾಪಂ ಅಧ್ಯಕ್ಷ ವಿಠಲ ಸಹಿತ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸುವರು.
Be the first to comment on "ಅನುದಾನ ಸದ್ಬಳಕೆ, ಸ್ವಚ್ಛತೆಯ ಸಾಧನೆಯಿಂದ ಗಾಂಧಿ ಗ್ರಾಮವೆನಿಸಿದ ಬಾಳ್ತಿಲ"