ಸದಸ್ಯರ ಸಹಕಾರ, ಪಾಲ್ಗೊಳ್ಳುವಿಕೆಯಿಂದ ಮಾತ್ರ ಯಾವುದೇ ಸಹಕಾರಿಯು ಉತ್ತುಂಗಕ್ಕೆರಲು ಸಾಧ್ಯ ಎಂದು ಸವಿತಾ ಸೌಹಾರ್ದ ಸಹಕಾರಿ ನಿ. ಬಿ.ಸಿರೋಡು ಅಧ್ಯಕ್ಷರಾದ ವಿಶ್ವನಾಥ್ ಸಾಲ್ಯಾನ್ ಬಂಟ್ವಾಳ್ ಹೇಳಿದರು.
ಮಂಗಳವಾರ ಪದ್ಮಾ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ಜರಗಿದ ಸಹಕಾರಿಯ 2017-18 ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರಿಯು 6 ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ್ದು, ಸದಸ್ಯರಿಗೆ ಶೇ 13 ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.
ಉಪಾಧ್ಯಕ್ಷರಾದ ಸುರೇಶ್ ನಂದೊಟ್ಟು ನಿರ್ದೇಶಕರಾದ ದಿನೇಶ್ ಎಲ್ ಬಂಗೇರ, ಆನಂದ ಭಂಡಾರಿ,ಭುಜಂಗ ಸಾಲ್ಯಾನ್,ರವೀಂದ್ರ ಭಂಡಾರಿ,ಸುರೇಂದ್ರ ಭಂಡಾರಿ,ಮೋಹನ್ ಭಂಡಾರಿ, ವಸಂತ್ ಎಂ, ಎಸ್ ಪದ್ಮನಾಭ ಭಂಡಾರಿ, ಎಸ್ ರವಿ ಮಡಂತ್ಯಾರು, ಪ್ರಮೀಳಾ, ಆಶಾ, ಗೌರವ ಸಲಹೆಗಾರರಾದ ಎಂ ಉಗ್ಗಪ್ಪ ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಶ್ ಬಿ. ವರದಿ ವಾಚಿಸಿದರು. ಉಪಾಧ್ಯಕ್ಷರಾದ ಸುರೇಶ್ ನಂದೊಟ್ಟು ಸ್ವಾಗತಿಸಿ ನಿರ್ದೇಶಕರಾದ ವಸಂತ್ ಎಂ. ಕಾರ್ಯಕ್ರಮ ನಿರೂಪಿಸಿದರು.
Be the first to comment on "ಸವಿತಾ ಸೌಹಾರ್ದ ಸಹಕಾರಿ ನಿಯಮಿತ : ಶೇ 13 ಡಿವಿಡೆಂಡ್"