www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರ್ತಿ ತಯಾರಿಯ ಜಾಗದಿಂದ ಪೂಜೆ ಮಾಡುವ ಜಾಗದವರೆಗೆ ಬ್ಯಾಂಡು ವಾದ್ಯಗಳೊಂದಿಗೆ ವೈಭವದ ಮೆರವಣಿಗೆ, ಪ್ರತಿಷ್ಠಾಪನೆ ಬಳಿಕ ಪೂಜೆ, ಪ್ರಸಾದ ವಿತರಣೆ, ಸಂಜೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಕೆಲವೆಡೆ ಶೋಭಾಯಾತ್ರೆ ಮೂಲಕ ವಿಸರ್ಜನೆಗೆ ತಯಾರಿ.
ಬಂಟ್ವಾಳ ತಾಲೂಕಿನ ನಾನಾ ಕಡೆಗಳಲ್ಲಿ ಗಣೇಶೋತ್ಸವ ಗುರುವಾರ ಆರಂಭಗೊಂಡದ್ದು ಹೀಗೆ. ಕೆಲವೆಡೆ ಒಂದು, ಎರಡು, ಮೂರು, ನಾಲ್ಕು, ಐದು ಹೀಗೆ ವಿಧವಿಧದಲ್ಲಿ ಗಣೇಶನನ್ನು ಪೂಜಿಸುವ ಕಾರ್ಯಕ್ರಮವನ್ನು ಭಕ್ತರು ಏರ್ಪಡಿಸಿದ್ದರು. ತಾಲೂಕಿನ ಹಲವೆಡೆ ಸಾರ್ವಜನಿಕ ಗಣೇಶೋತ್ಸವಗಳು ನಡೆದರೆ, ಹಿಂದು ಬಾಂಧವರ ಮನೆಗಳಲ್ಲಿ ಗಣೇಶ ಪೂಜೆ ನಡೆದವು. ಕೆಲವೆಡೆ ಮೂರ್ತಿಯನ್ನು ತಂದು ಪೂಜಿಸಿದರೆ, ಶ್ರದ್ಧಾಳುಗಳು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ, ಹೋಮಗಳನ್ನು ನಡೆಸಿದರು.
ಬಂಟ್ವಾಳ ಪರಿಸರದಲ್ಲಿ ಬಿ.ಸಿ.ರೋಡ್, ಬಂಟ್ವಾಳ, ಫರಂಗಿಪೇಟೆ, ಕಲ್ಲಡ್ಕ ಸಹಿತ ಹಲವೆಡೆ ಗಣೇಶೋತ್ಸವ ಆಚರಣೆಗಳು ನಡೆದವು. ವಾಮದಪದವು, ವಿಟ್ಲ, ಕಂಬಳಬೆಟ್ಟು ಸಹಿತ ತಾಲೂಕಿನ ಹಲವೆಡೆ ವೈಭವದ ಕಾರ್ಯಕ್ರಮಗಳು ನಡೆಯುತ್ತಿವೆ. ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ 43ನೇ ಗಣೇಶೋತ್ಸವ ಮೆರವಣಿಗೆ 14ರಂದು 3.30ಕ್ಕೆ ಆರಂಭಗೊಳ್ಳಲಿದ್ದು, ಕೊಳಕೀರು ಗಣೇಶ ಕೆರೆಯಲ್ಲಿ ವಿಗ್ರಹ ವಿಸರ್ಜನೆ,ಧ್ವಜಾವತರಣ ನಡೆಯಲಿದೆ. ಶ್ರೀ ದೇವರ ಭವ್ಯ ಶೋಭಾಯಾತ್ರೆಯಲ್ಲಿ ವಿಶೇಷವಾಗಿ ಶ್ರೀರಾಮ ವಿದ್ಯಾ ಕೇಂದ್ರದ 5 ಕುಣಿತ ಭಜನಾ ತಂಡಗಳು ಭಾಗವಹಿಸಲಿವೆ.

ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ 43ನೇ ಗಣೇಶೋತ್ಸವ

ಯುವ ಸಂಗಮ ಸೇವಾ ಟ್ರಸ್ಟ್( ರಿ.) ಶೇಡಿಗುರಿ ಬೊಂಡಾಲ ಇವರ ವತಿಯಿಂದ ಆರಾಧಿಸಿದ 25 ನೇ ವರ್ಷದ ಗಣಪ pic: Kishore Peraje
ಬಂಟ್ವಾಳ ತಾಲೂಕಿನ ಪೆರಾಜೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಶ್ರೀ ದೇವಿ ಟ್ರಸ್ಟ್ ನ ವತಿಯಿಂದ 9ನೇ ವರ್ಷ, ನೇರಳಕಟ್ಟೆಯಲ್ಲಿ 23ನೇ ವರ್ಷ, ಕಲ್ಲಡ್ಕದ ಗೋಳ್ತಮಜಲಿನ ಗಣೇಶ ಮಂದಿರದಲ್ಲಿ 27ನೇ ವರ್ಷ, ಬಿ.ಸಿ.ರೋಡಿನ ಹಿಂದು ಧಾರ್ಮಿಕ ಸೇವಾ ಸಮಿತಿ ವತಿಯಿಂದ 39ನೇ ವರ್ಷ, ಜಕ್ರಿಬೆಟ್ಟಿನಲ್ಲಿ ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ 15ನೇ ವರ್ಷ, ಸಜೀಪ ಮುನ್ನೂರು ಯುವಕ ಸಂಘ ವತಿಯಿಂದ 45 ನೇ ವರ್ಷ ನರಿಕೊಂಬುವಿನಲ್ಲಿ 36ನೇ ವರ್ಷ, ಬೊಂಡಾಲದ ಯುವ ಸಂಗಮ ವತಿಯಿಂದ ರಜತ ವರ್ಷ ಆಚರಣೆಗಳು ಕಂಡುಬಂದವು.
ಜಕ್ರಿಬೆಟ್ಟಿನಲ್ಲಿ:

ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು ಇವರ ವತಿಯಿಂದ ಆರಾಧಿಸಿದ 15 ನೇ ವರ್ಷದ ಗಣೇಶ.
ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಸೆ. 17ರ ತನಕ ಐದು ದಿನಗಳ ಕಾಲ ನಡೆಯಲಿದೆ. ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ ಮತ್ತು ಅಧ್ಯಕ್ಷ ಜಿಪಂ ಸದಸ್ಯ ಬಿ. ಪದ್ಮಶೇಖರ ಜೈನ್ ನೇತೃತ್ವದಲ್ಲಿ ಗುರುವಾರ ಸಾರ್ವಜನಿಕ ಗಣೇಶೋತ್ಸವವನ್ನು ಉದ್ಘಾಟಿಸಲಾಯಿತು. ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಮಿತಿ ಉಪಾಧ್ಯಕ್ಷರಾದ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪುರಸಭಾ ಸದಸ್ಯ ಜನಾರ್ದನ ಚಂಡ್ತಿಮಾರ್, ಸಂಪತ್ ಕುಮಾರ್ ಶೆಟ್ಟಿ, ಪ್ರಕಾಶ್ ಕಾರಂತ್, ಚಂದ್ರಹಾಸ ಶೆಟ್ಟಿ, ಸೀತಾರಾಮ ಶೆಟ್ಟಿ, ಮಾಧವ ಮಾವೆ ನೇತೃತ್ವದಲ್ಲಿ ಪ್ರತಿ ದಿನವೂ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯಲಿದ್ದು, ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಪ್ರತಿಷ್ಠೆ ಮತ್ತು ಮಹಾಪೂಜೆ ಸಮಸ್ತ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಗಣೇಶೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಸಾರ್ವಜನಿಕರಿಗೆ ಐದು ದಿನಗಳ ಕಾಲವೂ ಉಪಹಾರ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಬಿ.ಸಿ.ರೋಡಿನಲ್ಲಿ:

ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿಸಿರೋಡು ಇಲ್ಲಿ ಆಚರಿಸಲ್ಪಟ್ಟ 39 ನೇ ವರ್ಷದ ಗಣಪ.
ಬಿ.ಸಿ.ರೋಡಿನಲ್ಲಿ ಹಿಂದು ಧಾರ್ಮಿಕ ಸೇವಾ ಸಮಿತಿ ವತಿಯಿಂದ ಎಂ.ಸತೀಶ ಭಂಡಾರಿ ಅಧ್ಯಕ್ಷತೆಯಲ್ಲಿ 39ನೇ ವರ್ಷದ ಗಣೇಶೋತ್ಸವದ ನಿಮಿತ್ತ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 16ರಂದು ಭಾನುವಾರ ಸಂಜೆ ಶೋಭಾಯಾತ್ರೆ ನಡೆಯಲಿದೆ. ಸುರೇಶ್ ಕುಮಾರ್ ಕೈಕಂಬ, ಬಿ.ಇಂದ್ರೇಶ್, ಭಾಸ್ಕರ ಟೈಲರ್, ರಾಜೇಶ್ ಕುಮಾರ್ ಬಿ.ಸಿ.ರೋಡ್, ಎನ್. ಶ್ರೀಧರ ಶೆಣೈ, ಶಿವಕುಮಾರ್ ಸಹಿತ ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ.
Be the first to comment on "ಬಂಟ್ವಾಳದ ಹಲವೆಡೆ ಗಣೇಶೋತ್ಸವಗಳಿಗೆ ಸಂಭ್ರಮದ ಚಾಲನೆ"