ಹಿಂದು ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದಾದ ಗಣೇಶೋತ್ಸವಕ್ಕೆ ಹಲವು ನಿಯಮ, ಕಟ್ಟುಪಾಡು, ನಿರ್ಬಂಧಗಳನ್ನು ಹೇರಿ ಧಾರ್ಮಿಕ ಹಕ್ಕಿನ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಈ ಕ್ರಮವನ್ನು ಖಂಡಿಸಿ ಹಿಂದು ಜಾಗರಣಾ ವೇದಿಕೆ ಬಂಟ್ವಾಳ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಗಣೇಶೋತ್ಸವಕ್ಕೆ ವಿಧಿಸಿರುವ ನಿರ್ಬಂಧವನ್ನು ಹಿಂಪಡೆಯಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ. ಹಿಂದೂ ವಿರೋಧಿ ಅಧಿಕಾರ ಶಾಹಿಗಳು ಈ ಹಬ್ಬವನ್ನು ಹತ್ತಿಕ್ಕಲು ಇಲ್ಲಸಲ್ಲದ ಅಡಚಣೆಗಳನ್ನು ಹೇರುತ್ತಿದ್ದು ರಾಷ್ಟ್ರೀಯ ಹಬ್ಬದ ವೈಭವವನ್ನು ಹಾಳು ಮಾಡಲು ಹೊರಟಿರುವುದು ಖಂಡನೀಯ. ವಿಧಿಸಿ ರುವ ಎಲ್ಲಾ ನಿರ್ಬಂಧ ಗಳನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಸಾರ್ವಜನಿಕ ಗಣೇಶೋತ್ಸವ ದ ಮೆರವಣಿಗೆಗೆ ಮುಕ್ತ ಅವಕಾಶವನ್ನು ಕಲ್ಲಿಸಬೇಕು ಮನವಿಯ ಮೂಲಕ ಒತ್ತಾಯಿಸಲಾಯಿತು. ಈ ಸಂದರ್ಭ ಹಿಂದು ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ, ಜಿಲ್ಲಾ ಅಧ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ, ತಾಲೂಕು ಅದ್ಯಕ್ಷ ಚಂದ್ರ ಕಲಾಯಿ, ಮಹಿಳಾ ಘಟಕದ ಅದ್ಯಕ್ಷೆ ಬಬಿತಾ ಕೋಟ್ಯಾನ್, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ತಾ.ಪಂ. ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಪ್ರಮುಖರಾದ ಶರಣ್ ಕಾಮಾಜೆ, ಬಾಲಕ್ರಷ್ಣ ಕಲಾಯಿ, ಮಚ್ವೇಂದ್ರನಾಥ ಸಾಲಿಯಾನ್, ಗಣೇಶ್ ಶೆಟ್ಟಿ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.
ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್ ಪಂತ್ ಜಾರಿಗೊಳಿಸಿರುವ ಆದೇಶ ಧಾರ್ಮಿಕ ಹಕ್ಕಿನ ಮೇಲಿನ ದಬ್ಬಾಳಿಕೆ ಎಂದು ಹಿಂಜಾವೇ ಅಭಿಪ್ರಾಯಪಟ್ಟಿದೆ. ಡಸಾವಿರಾರಿ ವರ್ಷಗಳಿಂದ ಭಾರತದಲ್ಲಿ ಹಿಂದು ಧಾರ್ಮಿಕ ಹಬ್ಬಗಳ ಮೆರವಣಿಗೆಗಳು ಸೂಕ್ಷ್ಮಾತಿ ಸೂಕ್ಷ್ಮ ಪ್ರದೇಶಗಳಲ್ಲಿ ನಿರಾತಂಕವಾಗಿ ನಡೆದುಕೊಂಡು ಬರುತ್ತಿವೆ. ರಾಜ್ಯ ಸರಕಾರದ ಈ ಅನವಶ್ಯಕ ಹಿಂದು ವಿರೋಧಿ ಆದೇಶ ಖಂಡಿಸಿ ಪ್ರತಿಭಟನೆ ನಡೆಸಿವೆ ಎಂದು ಅಡ್ಯಂತಾಯ ಹೇಳಿದ್ದಾರೆ.
Be the first to comment on "ಗಣೇಶೋತ್ಸವಕ್ಕೆ ನಿರ್ಬಂಧ ಹಿಂಪಡೆಯಲು ಹಿಂಜಾವೇ ಮನವಿ"