ಅಲ್ಲಿಪಾದೆ ಸಂತ ಅಂತೇೂನಿ ಚರ್ಚ್ ನಲ್ಲಿ ತೆನೆ ಹಬ್ಬವನ್ನು ಅತ್ಯಂತ ವಿಜ್ರಭಣೆಯಿಂದ ಆಚರಿಸಲಾಯಿತು,ಅಲ್ಲಿಪಾದೆ ಚರ್ಚ್ ಧರ್ಮಗುರುಗಳದ ವಂದನಿಯ ಪೆಡ್ರಿಕ್ ಮೇೂಂತೆರೇೂ ಭಕ್ತರೊಂದಿಗೆ ಬಲಿ ಪೂಜೆ ಅರ್ಪಿಸಿದರು. ಆಗಸ್ಟ್ 30 ರಿಂದ ಸೆಪ್ಟೆಂಬರ್ 7 ರ ತನಕ 9 ದಿನಗಳ ನೊವೆಣಾ ಪ್ರಾರ್ಥನೆ ಯಲ್ಲಿ ನೂರಾರು ಮಕ್ಕಳು ಹೂ ಗಳನ್ನು ತಂದು ಮರಿಯಮ್ಮನಿಗೆ ಅರ್ಪಿಸಿದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆ ಗಳನ್ನು ಹಮ್ಮಿಕೊಂಡಿದ್ದು ಎಲ್ಲಾ ಕಾರ್ಯಕ್ರಮಗಳನ್ನು ಭಕ್ತಿಪೂರ್ವಕವಾಗಿ ನಡೆಸಲು ಚರ್ಚ್ ಪಾಲನ ಮಂಡಳಿ ಸಮಿತಿ ವೈ.ಸಿ.ಎಸ್,ಐ.ಸಿ.ವೈ.ಯಂ.ನ ಎಲ್ಲಾ ಸದಸ್ಯರು ಸಹಕಾರ ನೀಡಿದರು,
ಚರ್ಚ್ ನಿಂದ ಅಲ್ಲಿಪಾದೆಯ ಪೇಟೆಯಲ್ಲಿ ಮರಿಯಮ್ಮನವರ ಮೂರ್ತಿಯನ್ನು ಮೆರವಣಿಗೆ ಯ ಮೂಲಕ ಹೂ ಗಳನ್ನು ಅರ್ಪಿಸಿ ತರಲಾಯಿತು.
ಬಲಿಪೂಜೆಯ ಬಲಿಕ ಎಲ್ಲಾ ಭಕ್ತರಿಗೆ ತೆನೆಯನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಚರ್ಚ್ ಪಾಲನ ಮಂಡಳಿಯ ಉಪಾದ್ಯಕ್ಷರದ ಲಿಯೇೂ ಪೆರ್ನಾಡಿಸ್,ಕಾರ್ಯದರ್ಶಿ ಮಡ್ತಿನಿ ಸಿಕ್ವೇರ ಕ್ಲೂನಿ ಕಾನ್ವೆಂಟ್ ನ ದರ್ಮ ಭಗಿನಿಯರು ಸಹಿತ ಸಾವಿರಾರು ಭಕ್ತರು ಉಪಸ್ಥರಿದ್ದರು.
Be the first to comment on "ಅಲ್ಲಿಪಾದೆ ಚರ್ಚ್ ನಲ್ಲಿ ವಿಜೃಂಭಣೆಯ ತೆನೆ ಹಬ್ಬ ಆಚರಣೆ"